ಮಹಾಲಕ್ಷ್ಮಿಯ ಕೃಪೆ ಬೇಕಿದ್ದರೆ ಶುಕ್ರವಾರದ ದಿನ ಅಪ್ಪಿ ತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ

Written by Soma Shekar

Published on:

---Join Our Channel---

ಶುಕ್ರವಾರದ ದಿನ ಮಾತೆ ಶ್ರೀ ಮಹಾಲಕ್ಷ್ಮಿಗೆ ಸಮರ್ಪಿತವಾದ ಶುಭ ದಿನ. ಲಕ್ಷ್ಮೀ ದೇವಿಯನ್ನು ಸುಖ ಮತ್ತು ಸಮೃದ್ಧಿಯ ದೇವಿ ಎಂದು, ಸರ್ವ ಸಂಪತ್ತಿನ ಒಡತಿಯೆಂದು ಆರಾಧನೆ ಮಾಡಲಾಗುತ್ತದೆ. ಆದ್ದರಿಂದಲೇ ಹಣದ ಸಮಸ್ಯೆ ಇರುವವರು ಅಥವಾ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವವರು ಶುಕ್ರವಾರದ ದಿನ ದೇವಿ ಶ್ರೀ ಮಹಾಲಕ್ಷ್ಮಿಯನ್ನು ಆರಾಧನೆ ಮಾಡುವುದರಿಂದ ಅವರ ಕಷ್ಟಗಳು ಪರಿಹಾರವಾಗುವುದು ಎಂದು ಹೇಳಲಾಗುತ್ತದೆ. ಒಳ್ಳೆಯ ಮನಸ್ಸಿನಿಂದ. ಶ್ರದ್ಧಾ ಭಕ್ತಿಯಿಂದ ದೇವಿಯನ್ನು ಒಲಿಸಿಕೊಳ್ಳಬಹುದು ಎನ್ನಲಾಗಿದೆ.

ಲಕ್ಷ್ಮೀ ದೇವಿಯ ಪೂಜೆಯನ್ನು ಮಾಡಲು ಎಲ್ಲಾ ವಿಧಿ ವಿಧಾನಗಳನ್ನು ಸಹಾ ಸರಿಯಾದ ರೀತಿಯಲ್ಲಿ ಅನುಸರಿಸಬೇಕು.. ಆದ್ದರಿಂದಲೇ ದೇವಿಯ ಪೂಜೆಯ ತಯಾರಿಯನ್ನು ಗುರುವಾರದಿಂದಲೇ ಆರಂಭಿಸಿ ಬಿಡಬೇಕು. ಶುಕ್ರವಾರದ ದಿನ ದೇವಿ ಲಕ್ಷ್ಮಿಯ ನ್ನು ಸ್ವಾಗತಿಸಲು ನಾವು ಮೊದಲು ಶುಚಿ ಮತ್ತು ಶುಭ್ರತೆಗೆ ಹೆಚ್ಚಿನ ಒತ್ತನ್ನು ನೀಡಬೇಕಾಗುತ್ತದೆ. ಲಕ್ಷ್ಮೀ ದೇವಿಗೆ ಸ್ವಚ್ಚತೆ ಹಾಗೂ ಸೌಂದರ್ಯ ಬಹಳ ಕಷ್ಟವಾಗುತ್ತದೆ ಎಂದು ಹೇಳಲಾಗಿದೆ.

ಶುಕ್ರವಾರದ ದಿನ ಮನೆಯನ್ನು ಸ್ವಚ್ಚವಾಗಿಟ್ಟುಕೊಳ್ಳಿ. ಆದಷ್ಟು ಕಸ ಆಗದಂತೆ ಎಚ್ಚರ ವಹಿಸಿ.‌ ನಂಬಿಕೆಗಳ ಪ್ರಕಾರ ಈ ದಿನ ಸಂಚಾರ ಮಾಡುವ ದೇವಿಯು ಯಾವ ಮನೆಯಲ್ಲಿ ಶುಚಿ, ಶುಭ್ರತೆಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾರೋ ಆ ಮನೆಯನ್ನು ಪ್ರವೇಶ ಮಾಡಲು ಬಯಸುತ್ತಾಳೆ ಎನ್ನುವ ನಂಬಿಕೆಯಿದೆ. ಆದ್ದರಿಂದಲೇ ಶುಕ್ರವಾರದ ದಿನ ಇಂತಹ ಕೆಲಸಗಳನ್ನು ಅಪ್ಪಿ ತಪ್ಪಿಯೂ ಮಾಡಬೇಡಿ.

ಎಂಜಲು ಪಾತ್ರೆಗಳನ್ನು ಅಡುಗೆ ಮನೆಯಲ್ಲಿ ಇಡಬೇಡಿ : ಗುರುವಾರ ರಾತ್ರಿ ಮನೆಯಲ್ಲಿ ಎಂಜಲು ಪಾತ್ರೆಗಳನ್ನು ಹಾಗೇ ಬಿಡಬೇಡಿ. ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಸಂಚಾರವಾಗುತ್ತದೆ. ಇದರಿಂದ ಹಣಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳು ಎದುರಾಗುತ್ತವೆ. ಆದ್ದರಿಂದಲೇ ಗುರುವಾರ ರಾತ್ರಿ ಮಲಗುವ ಮುನ್ನ ಪಾತ್ರೆಗಳನ್ನು ತೊಳೆದು ಇಡಿ.

ಕಸದ ಬುಟ್ಟಿಯನ್ನು ಮುಚ್ಚಿ ಮನೆಯ ಹೊರಗೆ ಇಡಿ : ಶುಕ್ರವಾರದ ದಿನ ಮನೆಯ ಹೊರಗೆ ಕಸದ ಬುಟ್ಟಿಯನ್ನು ಇಡಬೇಡಿ. ಈ ದಿನ ಕಸದ ಬುಟ್ಟಿಯನ್ನು ಯಾರ ಕಣ್ಣಿಗೂ ಬೀಳದಂತ ಜಾಗದಲ್ಲಿ ಇಡಿ. ಕಸದ ಬುಟ್ಟಿ ಮುಖ್ಯದ್ವಾರದಲ್ಲಿ ಇದ್ದರೆ ದೇವಿ ಮಹಾಲಕ್ಷ್ಮಿಯು ಅಸಮಾಧಾನಗೊಂಡು ಅಲ್ಲಿಂದ ದೂರ ಹೊರಟು ಹೋಗುವಳು ಎನ್ನುವ ನಂಬಿಕೆ ಇದೆ.

ಲಕ್ಷ್ಮಿ ದೇವಿಯ ನಾಮ ಸ್ಮರಣೆ ಮಾಡಿ : ಶುಕ್ರವಾರದ ದಿನ ದೇವಿ ಲಕ್ಷ್ಮೀಯ ನಾಮ ಸ್ಮರಣೆಯನ್ನು ಮಾಡಿ. ಬೆಳಿಗ್ಗೆ ಮತ್ತು ಸಂಜೆ ಎರಡೂ ಸಮಯದಲ್ಲಿ ದೇವಿಯನ್ನು ಆರಾಧನೆ ಮಾಡಿ. ಈ ದಿನ ಯಾರೊಂದಿಗೂ ಜಗಳವಾಡಬೇಡಿ. ಕ್ರೋ ಧ ಮತ್ತು ಕೆಟ್ಟ ಆಲೋಚನೆಗಳಿಂದ ಈ ದಿನ ಆದಷ್ಟು ದೂರ ಇದ್ದು ಬಿಡಿ. ಈ ದಿನ ಭಾಷೆ ಮೃದುವಾಗಿರಲಿ, ನಿಮ್ಮ ವರ್ತನೆ ಕೂಡಾ ಹಿತವಾಗಿರಲಿ.

Leave a Comment