ಅಪ್ಪನ ಸ್ಥಾನದಲ್ಲಿ ಇದ್ದವನೇ ಅಂತಹ ನೀಚ ಕೆಲಸ ಮಾಡಿದ್ದ: ಕಣ್ಣೀರು ಹಾಕಿದ ಸಾನ್ಯಾ ಅಯ್ಯರ್

Written by Soma Shekar

Updated on:

---Join Our Channel---

ಕನ್ನಡ ಬಿಗ್ ಬಾಸ್ ಓಟಿಟಿ ಒಂದನೇ ಸೀಸನ್ ಈಗಾಗಲೇ ಆರಂಭವಾಗಿದೆ. ಮನೆಗೆ 16 ಜನ ಸ್ಪರ್ಧಿಗಳ ಪ್ರವೇಶವಾಗಿದೆ. ಮನೆಗೆ ಎಂಟ್ರಿ ನೀಡಿದ ಮೊದಲ ದಿನವೇ ಸ್ಪರ್ಧಿಗಳು ತಮ್ಮ ಜೀವನದಲ್ಲಿ ನಡೆದಂತಹ ಕಹಿ ಘಟನೆಗಳನ್ನು ಹಂಚಿಕೊಂಡಿದ್ದಾರೆ. ಹೀಗೆ ತಮ್ಮ ಜೀವನದ ಕಹಿ ಸತ್ಯಗಳನ್ನು ಹಂಚಿಕೊಳ್ಳುವಾಗ ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಎಂಟ್ರಿ ನೀಡಿರುವ ಪುಟ್ಟಗೌರಿ ಮದುವೆ ಸೀರಿಯಲ್ ಖ್ಯಾತಿಯ ನಟಿ ಸಾನ್ಯ ಅಯ್ಯರ್ ಅವರು ತಮ್ಮ ಬದುಕಿನ ಒಂದು ಕರಾಳ ಅಧ್ಯಾಯವೊಂದನ್ನು ಎಲ್ಲರ ಮುಂದೆ ತೆರೆದಿಟ್ಟಿದ್ದಾರೆ. ಸಾನ್ಯಾ ಹೇಳಿದ ಸತ್ಯವನ್ನು ಕೇಳಿ ಮನೆಯೊಳಗಿದ್ದ ಸದಸ್ಯರು ಮಾತ್ರವಲ್ಲದೇ ಕಾರ್ಯಕ್ರಮ ನೋಡಿದ ಪ್ರೇಕ್ಷಕರು ಕೂಡ ಶಾ ಕ್ ಆಗಿದ್ದಾರೆ ಜೊತೆಗೆ ಭಾವುಕರಾಗಿದ್ದಾರೆ.

ಬಿಗ್ ಬಾಸ್ ಮನೆಯನ್ನು ಪ್ರವೇಶ ಮಾಡಿರುವ ಸ್ಪರ್ಧಿಗಳು ತಮ್ಮ ಪರಿಚಯವನ್ನು ನೀಡಲು ಬಿಗ್ ಬಾಸ್ ಒಂದು ಟಾಸ್ಕನ್ನು ನೀಡಿದರು. ಈ ಟಾಸ್ಕ್ ಹೆಸರು ನಾನು ಯಾರು? ಈ ಟಾಸ್ಕ್ ನ ಭಾಗವಾಗಿ ಮನೆಯಲ್ಲಿರುವ ಸ್ಪರ್ಧಿಗಳು ತಮ್ಮ ತಮ್ಮ ಜೀವನದ ಕುರಿತಾಗಿ, ತಮ್ಮ ಜೀವನದಲ್ಲಿ ನಡೆದ ಘಟನೆಗಳ ಕುರಿತಾಗಿ ಮಾತನಾಡುವ ಅವಕಾಶವನ್ನು ನೀಡಲಾಗಿತ್ತು. ಈ ಸಂದರ್ಭದಲ್ಲಿ ಟಾಸ್ಕ್ ನ ಭಾಗವಾಗಿ ಮಾತನಾಡುತ್ತಿದ್ದ ಸಾನ್ಯಾ ತಮಗೆ ಎದುರಾದ ಸಂಕಷ್ಟದ ಕುರಿತಾಗಿ ಎಲ್ಲರ ಎದುರು ಮಾತನಾಡುವ, ಮೂಲಕ ತಮ್ಮ ಮನಸ್ಸಿನಲ್ಲಿದ್ದ ನೋವು ಹಾಗೂ ಅಳಲನ್ನು ಬಹಿರಂಗಪಡಿಸಿದ್ದಾರೆ.

ಮಾತು ಪ್ರಾರಂಭಿಸಿದ ಸಾನಿಯ ಮೊದಲಿಗೆ ತಮ್ಮ ಅಮ್ಮ ಮತ್ತು ಚಿಕ್ಕಮ್ಮನಲ್ಲಿ ಕ್ಷಮೆ ಕೇಳಿದ್ದಾರೆ. ನಾನು ನಿಮ್ಮ ಬಗ್ಗೆ ಒಂದು ಬ್ಯಾಕ್ ಸ್ಟೋರಿ ಹೇಳುತ್ತಿದ್ದೇನೆ ಎಂದು, ನಮ್ಮ ಚಿಕ್ಕಮ್ಮನದ್ದು ಒಂದು ಅಬ್ಯುಸಿವ್ ಮದುವೆ. ನನ್ನ ಕಣ್ಣಮುಂದೆ ನಮ್ಮ ಚಿಕ್ಕಮ್ಮ ಏಟುಗಳನ್ನು ತಿನ್ನುತ್ತಿದ್ದರು. ಇದು ಮಾನಸಿಕವಾಗಿ ನನ್ನ ಮೇಲೆ ಪರಿಣಾಮ ಬೀರಿತ್ತು. ರಿಲೇಶನ್ಶಿಪ್ ಅಂದರೆ ಹೀಗೆ ಎಂದು ನಾನು ಅಂದುಕೊಂಡಿದ್ದೆ. ನಾನು ಕೂಡಾ ಒಂದು ರಿಲೇಶನ್ಶಿಪ್ ನಲ್ಲಿ ಇದ್ದೆ. ಅದು ಕೂಡಾ ಅಬ್ಯುಸಿವ್ ಆಗಿತ್ತು. ನಾನು ಅವನಿಗಾಗಿ ನನ್ನ ವೃತ್ತಿಯನ್ನು ಬಿಡಲು ಸಿದ್ಧವಾಗಿದ್ದೆ. ಸಂಬಂಧವನ್ನು ಉಳಿಸಿಕೊಳ್ಳುವುದಕ್ಕಾಗಿ ಯಾವುದೇ ರೀತಿಯ ತ್ಯಾಗ ಮಾಡಲು ಸಜ್ಜಾಗಿದ್ದೆ, ಆದರೂ ಅದು ವರ್ಕ್ ಆಗಲಿಲ್ಲ.‌

ನನ್ನ ನಂಬಿಕೆಗೆ ಮೋಸ ವಾಗಿದ್ದು ನನ್ನ ಮಲತಂದೆಯಿಂದ. ನಮ್ಮಮ್ಮ ಡಬಲ್ ಡಿವೋರ್ಸಿ. ನನ್ನ ತಾಯಿ ಎರಡು ಬಾರಿ ಮದುವೆಯಾಗಿದ್ದರು. ಅದರಲ್ಲಿ ಒಬ್ಬರು ನನಗೆ ಬಯಲಾಜಿಕಲ್ ಫಾದರ್ ಮತ್ತೊಬ್ಬರು ಫಾದರ್ ಫಿಗರ್ ಅಂದರೆ ಮಲತಂದೆ.. ಸ್ವಂತ ತಂದೆಯ ಜೊತೆ ಸಂಬಂಧ ಅಷ್ಟಕಷ್ಟೇ. ಆದರೆ ಮಲ ತಂದೆಯ ಜೊತೆ ನನ್ನ ರಿಲೇಷನ್ಶಿಪ್ ಚೆನ್ನಾಗಿತ್ತು. ಹಾಗೆ ನೋಡಿದರೆ ನಾನು ಬೆಳೆದಿದ್ದು ಅವರ ಜೊತೆಯಲ್ಲಿ. ನಮ್ಮ ಅಮ್ಮನಿಗೆ ಅವರು ಫ್ರೆಂಡಾಗಿ ಇದ್ದಾಗಿನಿಂದಲೂ ನನಗೆ ಪರಿಚಯ. ಆದರೆ ನಮ್ಮಮ್ಮನಿಗೆ ಮದುವೆಯಾದ ಮೇಲೆ ಅದು ತಪ್ಪು ನಿರ್ಧಾರ ಎನ್ನುವುದೂ ಗೊತ್ತಾಯಿತು.

ಮಲತಂದೆ ನಮ್ಮ ತಾಯಿಯ ಜೊತೆಯಲ್ಲಿ ಜೊತೆಯಲ್ಲಿ ಇರಬೇಕು ಎನ್ನುವ ಕಾರಣಕ್ಕಾಗಿ ನನ್ನ ಹೆಸರನ್ನು ಹಾಳು ಮಾಡಲು ಮುಂದಾಗಿದ್ದರು. ಹೇಗೆ ಅನ್ನೋದಾದ್ರೆ, ಅವರು ನಾನು ನನ್ನ ಬಾಯ್ ಫ್ರೆಂಡ್ ಜೊತೆ ಇರುವ ವಿಡಿಯೋವನ್ನು ರೆಕಾರ್ಡ್ ಮಾಡ್ತಾರೆ. ಅನಂತರ ಅವರು ನಮ್ಮಮ್ಮನನ್ನು ಉಳಿಸಿಕೊಳ್ಳಬೇಕು ಎನ್ನುವ ಆಸೆಯಿಂದ ರೆಕಾರ್ಡ್ ಮಾಡಿದ್ದ ಆ ವೀಡಿಯೋವನ್ನು ಮೊದಲು ನಮ್ಮ ಅಜ್ಜಿಗೆ, ಅನಂತರ ಚಿಕ್ಕಮ್ಮನಿಗೆ ತೋರಿಸುತ್ತಾರೆ.‌ ಆ ವಿಡಿಯೋದಲ್ಲಿ ಏನು ಇರಲಿಲ್ಲವಾದರೂ ಅವಮಾನ ಮಾಡ್ತಾರೆ.

ಸಿಂಗಲ್ ಪೇರೆಂಟ್ ಆಗಿ ದೀಪಾ ತನ್ನ ಮಗಳನ್ನು ಹ್ಯಾಂಡಲ್ ಮಾಡೋದಕ್ಕೆ ಆಗೋದಿಲ್ಲ, ಅವರಿಗೆ ಒಬ್ಬ ಗಂಡಿನ ಅಗತ್ಯ ಇದೆ ಎಂದು ಬಿಂಬಿಸುವ ಒಂದು ಚೀಪ್ ಟ್ರಿಕ್ ಅವರು ಯೂಸ್ ಮಾಡ್ತಾರೆ. ನಾನು ಅವರನ್ನು ಬಾಯಿ ತುಂಬಾ ಅಪ್ಪ ಎಂದು ಕರೆದಿದ್ದೇನೆ, ಅವರಿಂದ ಕೈತುತ್ತು ತಿಂದಿದ್ದೇನೆ. ಆದರೆ ಅವರು ನನ್ನನ್ನು ತಲೆತಗ್ಗಿಸುವ ಹಾಗೆ ಮಾಡಿಬಿಟ್ಟರು. ತಂದೆ ಪ್ರೀತಿ ಸಿಗದ ನಾನು ಅದನ್ನು ಇನ್ನೊಬ್ಬರಲ್ಲಿ ನಿರೀಕ್ಷೆ ಮಾಡಿದ್ದೆ. ಆದರೆ ನಾನು ಈಗ ಆ ರೀತಿ ಮಾಡುವುದಿಲ್ಲ, ನಾನು ಸ್ವಾವಲಂಬಿಯಾಗಿರುತ್ತೇನೆ, ಇದೆಲ್ಲಾ ಆಗಿದ್ದಕ್ಕೆ ನಾನು ಕ್ಷಮೆ ಕೇಳುತ್ತೇನೆ ಎಂದು ಸಾನ್ಯ ಕಣ್ಣೀರು ಹಾಕಿದ್ದಾರೆ.

Leave a Comment