ಮನೇಲಿ ಯಾರಿಲ್ಲ ಬಾ ಎಂದಳು ಸುಂದರಿ: ಜೋಶ್ ನಿಂದ ಹೋದವನಿಗೆ ಕಾದಿತ್ತು ತಲೆ ತಿರುಗೋಂತ ಶಾಕ್ !

Written by Soma Shekar

Published on:

---Join Our Channel---

ಪರಿಚಯ ದಿನದಿಂದ ದಿನಕ್ಕೆ ಬೆಳೆಯುತ್ತಾ ಹೋಯಿತು, ಆಕೆ ಅವನಿಗೆ ಫೋನ್ ನಂಬರ್ ಸಹಾ ಕೊಟ್ಟಳು, ಅವಳ ಜೇನಿನಂತಹ ಮಾತಿಗೆ ಯುವಕ ಫಿದಾ ಆದ, ಆದರೆ ಮುಂದೆ ನಡೆದಿದ್ದು ಮಾತ್ರ ಶಾ ಕಿಂ ಗ್, ಯುವಕನ ತಲೆ ತಿರುಗುವಂತ ಟ್ವಿಸ್ಟ್ ಎದುರಾಗಿತ್ತು. ಏನಿದು ಘಟನೆ? ಎನ್ನುವಿರಾ‌. ಹಾಗಾದರೆ ಬನ್ನಿ ಈ ಘಟನೆಯ ವಿವರಗಳು ಏನು ಎನ್ನುವುದನ್ನು ನಾವು ತಿಳಿಯೋಣ. ಇಂತದೊಂದು ಘಟನೆಯು ಕೇರಳದಲ್ಲಿ ನಡೆದಿದ್ದು, ಘಟನೆಯ ಪೂರ್ಣ ವಿವರ ತಿಳಿದಾಗ ಇದು ಯಾವುದೇ ಸಿನಿಮಾಕ್ಕಿಂತ ಕಡಿಮೇಯೇನಿಲ್ಲ ಎನ್ನಬಹುದಾಗಿದೆ.

ಕೇರಳದ ತಿರುವನಂತಪುರಂ ನ ಅದಿಮಲತುರಾ ಎಂಬಲ್ಲಿ ನಡೆದಿದೆ ಇಂತಹುದೊಂದು ಶಾ ಕಿಂ ಗ್ ಘಟನೆ. 20 ವರ್ಷ ವಯಸ್ಸಿನ ಯುವಕ ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸವನ್ನು ಮಾಡುತ್ತಿದ್ದಾನೆ. ಏನೋ ಕೆಲಸದ ನಿಮಿತ್ತ ಆಗಾಗ ಮೊಬೈಲ್ ಅಂಗಡಿಗೆ ಒಬ್ಬ ಯುವತಿ ಬರುತ್ತಿದ್ದಳು. ಈ ಹಿನ್ನೆಲೆಯಲ್ಲಿ ಯುವಕನಿಗೂ ಹಾಗೂ ಆ ಯುವತಿಗೂ ನಡುಗೆ ಪರಿಚಯ ಬೆಳೆದಿದೆ, ನಂತರ ಫೋನ್ ನಂಬರ್ ಸಹಾ ವಿನಿಮಯ ಮಾಡಿಕೊಂಡಿದ್ದಾರೆ. ಅಷ್ಟೇ ನಂಬರ್ ಸಿಕ್ಕಿದ ಮೇಲೆ ಕೇಳಬೇಕೆ??

ಇಬ್ಬರು ನಡುವೆ ಫೋನ್ ನಲ್ಲಿ ಚಾಟಿಂಗ್ ಪ್ರಾರಂಭವಾಗಿದೆ. ಇಬ್ಬರೂ ಸಿಕ್ಕಾಪಟ್ಟೆ ಚಾಟಿಂಗ್ ಮಾಡಿದ್ದಾರೆ. ಒಬ್ಬರ ನಡುವೆ ಮ್ಯಾಟರ್ ಚಾಟಿಂಗ್ ನಲ್ಲೇ ಬಹಳ ದೂರದವರೆಗೆ ಹೋಗಿದೆ. ಹೀಗಿರುವಾಗ ಒಂದು ದಿನ ಯುವತಿ ತನ್ನ ಮನೆಯಲ್ಲಿ ಯಾರೂ ಇಲ್ಲ ಎಂದು ಯುವಕನಿಗೆ ಮನೆಗೆ ಬರಲು ಆಹ್ವಾನವನ್ನು ನೀಡಿದ್ದಾಳೆ. ಖುಷಿಗೊಂಡ ಯುವಕ ಹೀರೋ ತರ ರೆಡಿಯಾಗಿ, ಸೆಂಟ್ ಹಾಕಿಕೊಂಡು, ಕಾರಿನಲ್ಲಿ ಯುವತಿಯ ಮನೆಗೆ ಹೋಗಿದ್ದಾನೆ. ಬಹಳ ಎಕ್ಸೈಟ್ ಆಗಿ ಯುವತಿಗೆ ಮನೆಗೆ ಬಂದವನಿಗೆ ಅಲ್ಲಿ ಕರೆಂಟ್ ಶಾ ಕ್ ನಂತಹ ಸನ್ನಿವೇಶ ಎದುರಾಗಿದೆ.

ಮನೆಗೆ ಬಂದ ಯುವಕನನ್ನು ಆ ಯುವತಿಯ ಗಂಡ ಹಿಡಿದುಕೊಂಡಿದ್ದಾನೆ. ಹಗ್ಗದಿಂದ ಯುವಕನನ್ನು ಕಟ್ಟಿ ಹಾಕಿದ್ದಾನೆ. ಇಲ್ಲಿ ಕಥೆಯಲ್ಲಿ ದೊಡ್ಡ ಟ್ವಿಸ್ಟ್ ಏನಂದ್ರೆ ಇಷ್ಟು ದಿನ ಯುವಕನಿಗೆ ಚಾಟಿಂಗ್ ನಲ್ಲಿ ಮೆಸೆಜ್ ಮಾಡ್ತಾ ಇದ್ದಿದ್ದು ಕೂಡಾ ಆ ಯುವತಿಯ ಗಂಡ ಎನ್ನಲಾಗಿದೆ‌. ಸಿಕ್ಕಿ ಹಾಕಿಕೊಂಡ ಯುವಕ ತನ್ನನ್ನು ಬಿಡುವಂತೆ ಪರಿಪರಿಯಾಗಿ ಬೇಡಿ ಕೊಂಡಿದ್ದಾನೆ. ಆಗ ಯುವತಿಯ ಗಂಡ, ಒಂದು ಲಕ್ಷ ಹಣ ಮತ್ತು ಕಾರನ್ನು ನೀಡಿದರೆ ಬಿಡುವುದಾಗಿ ಹೇಳಿದ್ದಾನೆ. ಆದರೆ ಯುವಕ ತನ್ನ ಬಳಿ ಹತ್ತು ಸಾವಿರ ರೂ. ಮಾತ್ರವೇ ಇದೆ ಎಂದಿದ್ದಾನೆ.

ಉಳಿದ ಹಣಕ್ಕೆ ತಾನು ತನ್ನ ಸ್ನೇಹಿತರ ಹತ್ತಿರ ಹೋಗಬೇಕು, ಅದಕ್ಕೆ ಅವಕಾಶ ಕೊಟ್ಟರೆ ಉಳಿದ ಹಣ ಕೊಡುವುದಾಗಿ ಹೇಳಿದ್ದಾ‌ನೆ. ಅದಕ್ಕೆ ಒಪ್ಪಿಕೊಂಡ ಯುವತಿಯ ಗಂಡ ಇನ್ನೂ ಇಬ್ಬರನ್ನು ಜೊತೆಗೆ ಕರೆದುಕೊಂಡು, ಯುವಕನ ಕಾರಿನಲ್ಲಿ ಹೊರಟಿದ್ದಾ‌ನೆ. ಕಾರ್ ಡ್ರೈವ್ ಮಾಡುತ್ತಿದ್ದ ಯುವಕ ವಿಲಿಂಜಿಮ್ ನಲ್ಲಿ ಪೋಲಿಸ್ ಸ್ಟೇಷನ್ ಹತ್ತಿರ ಬಂದ ಕೂಡಲೇ ಸಡನ್ ಬ್ರೇಕ್ ಹಾಕಿ, ಕಾರಿನಿಂದ ಇಳಿದು ಸ್ಟೇಷನ್ ಒಳಗೆ ಓಡಿ ನಡೆದ ವಿಚಾರ ತಿಳಿಸಿದ್ದಾನೆ.

ವಿಷಯ ತಿಳಿದ ಪೋಲಿಸರು ಹೊರಗೆ ಬರುವ ವೇಳೆಗೆ ಕಾರಿನಲ್ಲಿದ್ದವರು ಅಲ್ಲಿಂದ ಪರಾರಿಯಾಗಿದ್ದಾರೆ. ಬಾಧಿತ ಯುವಕನಿಂದ ದೂರನ್ನು ಸ್ವೀಕರಿಸಿರುವ ಪೋಲಿಸರು ಈಗಾಗಲೇ ಇಬ್ಬರನ್ನು ತಮ್ಮ ಅಧೀನಕ್ಕೆ ಪಡೆದಿದ್ದಾರೆ ಎನ್ನಲಾಗಿದ್ದು, ಇನ್ನಿಬ್ಬರನ್ನು ಪತ್ತೆ ಹಚ್ಚುವ ಕೆಲಸದಲ್ಲಿ ಕಾರ್ಯ ನಿರತರಾಗಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಯುವ‌ಕನಿಗೆ ಆತನ ಚಾಟಿಂಗ್ ಚಟವು ಪ್ರಾಣಕ್ಕೆ ಕಂಟಕವನ್ನು ತಂದಿದ್ದು ಮಾತ್ರ ಸುಳ್ಳಲ್ಲ. ಇನ್ನು ಅಪರಿಚಿತ ಯುವತಿಯರ ಜೊತೆ ಚಾಟಿಂಗ್ ಮಾಡುವ ಮೊದಲು ಎಚ್ಚರವಾಗಿರಬೇಕೆಂಬ ಪಾಠ ಖಂಡಿತ ಕಲಿತಿದ್ದಾನೆ.

Leave a Comment