ಮನೆಯಲ್ಲಿ ಹನುಮನ ಫೋಟೋ ಇಡುವ ಮುನ್ನ ಎಚ್ಚರ!! ಈ ರೀತಿಯ ಫೋಟೋ ಮಾತ್ರವೇ ಇಡಬೇಕು

Written by Soma Shekar

Published on:

---Join Our Channel---

ಹಿಂದೂಗಳು ತಮ್ಮ ಮನೆಗಳಲ್ಲಿ ದೇವರ ಪಟಗಳನ್ನು ಇಟ್ಟುಕೊಳ್ಳುವುದು ಒಂದು ಸಾಮಾನ್ಯವಾದ ಸಂಪ್ರದಾಯವಾಗಿದೆ. ತಮ್ಮ ನೆಚ್ಚಿನ ದೇವರ ಪಟಗಳನ್ನು ಮನೆಯ ಗೋಡೆಗಳ ಮೇಲೆ ಅಲಂಕರಿಸಿ, ಅವುಗಳನ್ನು ಪೂಜೆ ಮಾಡುತ್ತಾರೆ ಅಥವಾ ಪೂಜಾ ಕೋಣೆಯಲ್ಲಿ ದೇವರ ಪಟಗಳನ್ನು ಇಡುತ್ತಾರೆ. ಈ ರೀತಿಯ ಪಟಗಳಲ್ಲಿ ರಾಮಭಕ್ತ, ಅಂಜನಾ ಸುತ ಶ್ರೀ ಆಂಜನೇಯಸ್ವಾಮಿಯ ಪಟ ಮನೆಯಲ್ಲಿ ಇಡುವುದರಿಂದ ದುಷ್ಟಶಕ್ತಿಗಳು ಮನೆಗೆ ಬರುವುದಿಲ್ಲ ಎನ್ನುತ್ತಾರೆ ಪಂಡಿತರು. ಅಲ್ಲದೇ ಹನಮನ ಆರಾಧನೆಯು ಮನಃಶಾಂತಿ ನೀಡುತ್ತದೆ ಎನ್ನಲಾಗಿದೆ.

ಹನುಮನ ಆರಾಧನೆಯಿಂದ ಮನೆಯಲ್ಲಿರುವ ಆರ್ಥಿಕ ಸಮಸ್ಯೆ, ಆರೋಗ್ಯ ಸಮಸ್ಯೆಗಳು ದೂರಾಗುತ್ತವೆ ಎಂಬ ನಂಬಿಕೆಯೂ ಇದೆ. ಅದಕ್ಕಾಗಿಯೇ ಅನೇಕ ಹಿಂದೂ ಧರ್ಮವನ್ನು ನಂಬಿ ಆಚರಣೆ‌‌ ಮಾಡುವ ಅನುಯಾಯಿಗಳು ತಮ್ಮ ತಮ್ಮ ಮನೆಯಲ್ಲಿ ಹನುಮಂತನ ಪಟವನ್ನು ಇಡುತ್ತಾರೆ. ಆದರೆ, ವಾಸ್ತು ಪ್ರಕಾರ ಮನೆಯಲ್ಲಿ ಹನುಮಂತನ ಪಟವನ್ನು ಇಡುವಾಗ ಕೆಲವು ವಿಷಯಗಳನ್ನು ನಾವು ನೆನಪಿನಲ್ಲಿ ಇರಿಸಿಕೊಳ್ಳಬೇಕು. ಇಲ್ಲವಾದಲ್ಲಿ ನಮ್ಮ ನಿರ್ಲಕ್ಷ್ಯವೇ ಮನೆಯಲ್ಲಿ ನಕಾರಾತ್ಮಕ ವಾತಾವರಣವನ್ನು ಉಂಟು ಮಾಡುವ ಸಾಧ್ಯತೆಗಳು ಇರುತ್ತವೆ.

ಮನೆಯಲ್ಲಿ ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ ಎನ್ನುತ್ತಾರೆ ವಾಸ್ತು ತಜ್ಞರು. ಹನುಮಂತನಿಗೆ ಸಂಬಂಧಿಸಿದಂತೆ ಮಾರುಕಟ್ಟೆಯಲ್ಲಿ ಇಂದು ನಮಗೆ ವೈವಿದ್ಯಮಯವಾದ ಫೋಟೋಗಳು ದೊರೆಯುತ್ತವೆ. ಆದರೆ ನಮಗೆ ಅಲ್ಲಿ ಆಂಜನೇಯ ಸ್ವಾಮಿ ಸಂಜೀವನಿ ಪರ್ವತವನ್ನು ಎತ್ತಿರುವ ಫೋಟೋ, ರಾಮಲಕ್ಷ್ಮಣರನ್ನು ತನ್ನ ಹೆಗಲ ಮೇಲೆ ಇರಿಸಿಕೊಂಡ ಫೋಟೋ, ಹನುಮಂತನು ತನ್ನ ಎದೆಯನ್ನು ಸೀಳಿ ತೋರಿಸುವ ಫೋಟೋಗಳು ಹೆಚ್ಚಾಗಿ ಕಾಣಸಿಗುತ್ತವೆ.

ಹಾಗೆಂದ ಮಾತ್ರಕ್ಕೆ ಯಾವುದೋ ಒಂದು ಪಟವನ್ನು ಖರೀದಿಸಿ ತಂದು ಮನೆಯಲ್ಲಿ ಇಡಬಾರದು. ವಾಸ್ತು ತಜ್ಞರ ಸಲಹೆಯಂತೆ ಹನುಮಂತನಿಗೆ ಸಂಬಂಧಿಸಿದ ಲೆಲವು ಫೋಟೋಗಳನ್ನು ಮಾತ್ರವೇ ನಾವು ಮನೆಯಲ್ಲಿ ಇಡಬೇಕು. ಗಾಳಿಯಲ್ಲಿ ಹಾರುವ ಅಥವಾ ಪರ್ವತವನ್ನು ಎತ್ತಿರುವ ಹನುಮಂತನ ಚಿತ್ರವನ್ನು ಮನೆಯಲ್ಲಿ ಇಡಬಾರದೆಂದು ಹೇಳಲಾಗಿದೆ. ಮನೆಯಲ್ಲಿ ಈ ಫೋಟೋ ಇಟ್ಟರೆ ಅಶುಭ ಫಲ ಉಂಟಾಗುವುದು ಎನ್ನಲಾಗಿದೆ. ಕೇವಲ ಆಂಜನೇಯಸ್ವಾಮಿ ಮಾತ್ರವೇ ಇರುವ ಫೋಟೋಗಳನ್ನು ಮನೆಯಲ್ಲಿ ಇಡಬೇಕು.

ವಾಸ್ತುಪ್ರಕಾರದ ಪ್ರಕಾರ, ಮನೆಯಲ್ಲಿ ಹಳದಿ ವಸ್ತ್ರ ಧರಿಸಿದ ಹನುಮಂತನ ಚಿತ್ರವನ್ನು ಇಡುವುದು ಒಳ್ಳೆಯದು. ಹನುಮಂತನು ಹಳದಿ ಮತ್ತು ಸಿಂಧೂರವನ್ನು ಇಷ್ಟಪಡುತ್ತಾನೆ ಎಂದು ಹಿಂದೂಗಳು ನಂಬುತ್ತಾರೆ. ಕುಳಿತ ಭಂಗಿಯಲ್ಲಿರುವ ಹನುಮಂತನ ಫೋಟೋಗಳು ಮನೆಯಲ್ಲಿದ್ದರೆ ಶುಭ. ಇಂತಹ ಫೋಟೋಗಳನ್ನು ಮನೆಯಲ್ಲಿ ಇಡುವುದರಿಂದ ಸಕಾರಾತ್ಮಕ ವಾತಾವರಣ ನಿರ್ಮಾಣವಾಗುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು. ಆದ್ದರಿಂದ ಹನುಮನ ಇಂತಹ ಪಟ ಖರೀದಿ ಮಾಡಿ ಇಟ್ಟುಕೊಳ್ಳುವುದು ಒಳ್ಳೆಯದು.

Leave a Comment