ಮದುವೆ ಮಂಪಪಕ್ಕೆ 3 ಗಂಟೆ ತಡವಾಗಿ ಬಂದ ವರ:ಕಾರಣ ತಿಳಿದು ಆತನನ್ನು ಹಾಡಿ ಹೊಗಳಿದ ವಧು!!

Written by Soma Shekar

Published on:

---Join Our Channel---

ಪ್ರಸ್ತುತ ದೇಶದಲ್ಲಿ ಮದುವೆಗಳ ಸೀಸನ್ ಬಹಳ ಜೋರಾಗಿಯೇ ನಡೆದಿದೆ. ಈ ವೇಳೆ ಮದುವೆಗಳಿಗೆ ಸಂಬಂಧಿಸಿದ ಹೊಸ ಹೊಸ ಆಸಕ್ತಿಕರ ವಿಷಯಗಳು ಸುದ್ದಿಗಳಾಗುತ್ತಿವೆ. ಅಂತಹ ಸುದ್ದಿಗಳ ಸಾಲಿಗೆ ಈಗ ಹೊಸ ಸುದ್ದಿಯೊಂದು ಸೇರ್ಪಡೆಯಾಗಿದೆ. ಹೌದು, ಮಧ್ಯಪ್ರದೇಶದ ಛತ್ತರ್ ಪುರ್ ನಲ್ಲಿ ನಡೆದ ಒಂದು ಮದುವೆಯ ವಿಷಯವು ಮಾದ್ಯಮ ಸುದ್ದಿಗಳಲ್ಲಿ ಹರಿದಾಡಿ, ಎಲ್ಲರ ಆಸಕ್ತಿಯನ್ನು ಕೆರಳಿಸಿದೆ. ಇಲ್ಲಿ ಮದುವೆ ಮಂಟಪದಲ್ಲಿ ಕೈಗೆ ಮದರಂಗಿ ಹಾಕಿಸಿಕೊಂಡ, ಮದುವೆಗೆ ಸರ್ವ ಸಿದ್ಧಳಾಗಿ ಅಲಂಕಾರಗೊಂಡ ಕುಳಿತ ವಧು ವರನ ಆಗಮನಕ್ಕಾಗಿ, ಆತನೊಡನೆ ಸಪ್ತಪದಿ ತುಳಿಯುವುದಕ್ಕೆ ಬರೋಬ್ಬರಿ 3 ಗಂಟೆಗಳ ಕಾಲ ಕಾದಿದ್ದಾಳೆ.

ವರನ ಆಗಮನವು ಮೂರು ಗಂಟೆಗಳ ಕಾಲ ತಡವಾದರೂ ಸಹಾ ವಧುವಿನ ಮುಖದಲ್ಲಿ ಯಾವುದೇ ಬೇಸರವಿರಲಿಲ್ಲ. ಆಕೆ ಅಸಹನೆ ತೋರಲಿಲ್ಲ. ಬದಲಾಗಿ ಮೂರು ಗಂಟೆಗಳ ನಂತರ ಬಂದ ವರನನ್ನು ಆಕೆ ಹಾಡಿ ಹೊಗಳಿದ್ದಾಳೆ. ಅನಂತರ ಈ ಜೋಡಿ ಸಪ್ತಪದಿ ತುಳಿದು ಹೊಸ ಬಾಳಿಗೆ ಪ್ರವೇಶ ನೀಡಿದ್ದಾರೆ. ಹಾಗಿದ್ದಲ್ಲಿ ವರನು ಮೂರು ಗಂಟೆಗಳು ತಡವಾಗಿ ಬಂದರೂ, ಆತನಿಗೆ ಮೆಚ್ಚುಗೆಗಳು ಹರಿದು ಬರಲು ಕಾರಣವೇನು? ಅಂತಹ ಯಾವ ಕೆಲಸ ಮಾಡಿ ಬಂದನು? ಬನ್ನಿ ನಾವು ಸಹಾ ಈ ಆಸಕ್ತಿಕರ ವಿಚಾರ ತಿಳಿಯೋಣ.

ಛತ್ತರ್ ಪುರದ ಕಲ್ಯಾಣ ಮಂಟಪವೊಂದರಲ್ಲಿ ಬುಂದೇಲ್ ಖಂಡದ ಕುಟುಂಬವೊಂದು ಸಾಮೂಹಿಕ ವಿವಾಹಗಳನ್ನು ಏರ್ಪಡಿಸಿತ್ತು. ಈ ವಿವಾಹಗಳ ಮೂಲಕ ಒಟ್ಟು 11 ಜೋಡಿಗಳು ಹೊಸ ಜೀವನಕ್ಕೆ ಅಡಿಯಿಟ್ಟಿವೆ. ಆದರೆ ಇದರಲ್ಲಿ ಒಂದು ಜೋಡಿಯ ವಿವಾಹ ಮಾತ್ರ ವಿಶೇಷವಾಗಿ, ಮಾದ್ಯಮಗಳ ಗಮನ ಸೆಳೆದಿದೆ. ಪ್ರೀತಿ ಹಾಗೂ ರಾಮ್ ಜೀ ಎನ್ನುವ ಜೋಡಿಯೇ ಆ ವಿಶೇಷ ಜೋಡಿಯಾಗಿದ್ದಾರೆ. ಅವರ ಮದುವೆ ಖಂಡಿತ ಬಹಳ ವಿಶೇಷ ಎನಿಸಿದೆ.‌

ವರ ರಾಮ್ ಜೀ ವರ್ಷಗಳ ಹಿಂದೆ ಹತ್ತನೇ ತರಗತಿಯ ಸಮಾಜ ವಿಜ್ಞಾನ ವಿಷಯದಲ್ಲಿ ಅನುತ್ತೀರ್ಣನಾಗಿದ್ದ ಎನ್ನಲಾಗಿದೆ. ಆದರೆ ಆತ ಮದುವೆಗೆ ಮುನ್ನ ತಾನು ಕನಿಷ್ಠ ಪಕ್ಷ ಹತ್ತನೇ ತರಗತಿಯನ್ನಾದರೂ ಪೂರ್ತಿ ಮಾಡಬೇಕು ಎಂದು ನಿರ್ಧರಿಸಿದ್ದ. ಅದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದ. ಆತನ ಮದುವೆಯ ದಿನವೇ ಹತ್ತನೇ ತರಗತಿಯ ಸಮಾಜ ವಿಜ್ಞಾನ ಪರೀಕ್ಷೆ ಕೂಡಾ ಇತ್ತು. ಆದ್ದರಿಂದಲೇ ರಾಮ್ ಜೀ ಮದುವೆಯ ದಿನ ಪರೀಕ್ಷೆಗೆ ಹಾಜರಾಗಿ ಮೂರು ಗಂಟೆಗಳ ಕಾಲ ಪರೀಕ್ಷೆ ಬರೆದು ಬಂದಿದ್ದಾನೆ.

ಪರೀಕ್ಷೆಗಾಗಿ ಒಂದು ವರ್ಷದಿಂದ ಸಿದ್ಧತೆ ನಡೆಸಿದ್ದ ರಾಮ್ ಜೀ, ಮದುವೆಗಿಂತ ಪರೀಕ್ಷೆ ಸಹಾ ಮುಖ್ಯ ಎಂದು ಭಾವಿಸಿ ಪರೀಕ್ಷೆಗೆ ಹಾಜರಾಗಿದ್ದರು. ಇನ್ನು ಅವರ ಪತ್ನಿ ಪ್ರೀತಿ ಮಾತನಾಡುತ್ತಾ, ಅವರು ಪರೀಕ್ಷೆಗೆ ಹಾಜರಾಗದಿದ್ದರೆ ಅವರ ಒಂದು ವರ್ಷದ ಕಷ್ಟ ವ್ಯರ್ಥವಾಗಿ ಹೋಗುತ್ತಿತ್ತು. ಆದ್ದರಿಂದಲೇ ನಾನು ಬೇಸರಪಡದೇ ಅವರಿಗಾಗಿ ಕಾದಿದ್ದೆ. ಅವರು ಬಂದ ಮೇಲೆ ಸಪ್ತಪದಿ ತುಳಿದು, ನಾವು ಹೊಸ ಜೀವನಕ್ಕೆ ಅಡಿಯಿಟ್ಟೆವು ಎಂದು ಖುಷಿಯಿಂದ ಹೇಳಿದ್ದಾರೆ.

ಈ ವಿವಾಹದ ಬಗ್ಗೆ ಮಾದ್ಯಮಗಳಲ್ಲಿ ಸುದ್ದಿಯಾದ ಮೇಲೆ ಎಲ್ಲೆಲ್ಲೂ ರಾಮ್ ಜೀ ಬಗ್ಗೆ ಜನ ಮಾತನಾಡಿದ್ದಾರೆ. ಇನ್ನು ರಾಮ್ ಜೀ ಅವರು ತಾನು ಒಂದೇ ದಿನ ಜೀವನದ ಎರಡು ಮಹತ್ವದ ಪರೀಕ್ಷೆಗಳಿಗೆ ಹಾಜರಾಗಿದ್ದೇನೆ. ಈ ಎರಡು ಪರೀಕ್ಷೆಗಳು ಸಹಾ ಭವಿಷ್ಯದಲ್ಲಿ ಉತ್ತಮ ಫಲಿತಾಂಶ ನೀಡಲಿದೆ ಎನ್ನುವ ವಿಶ್ವಾಸ ಇದೆ ಎನ್ನುವ ಮಾತನ್ನು ಹೇಳಿದ್ದಾರೆ.

Leave a Comment