ಮದುವೆ ದಿನವೇ ಪತ್ನಿಗೆ ವಿಶೇಷ ಗಿಫ್ಟ್ ಕೊಟ್ಟ ಪತಿ: ಈ ಗಿಫ್ಟ್ ನೋಡಿ ನೆಟ್ಟಿಗರು ಶಾಕ್!!

Written by Soma Shekar

Published on:

---Join Our Channel---

ಪ್ರೀತಿ ಪಾತ್ರರಿಗೆ ವಿಶೇಷ ಸಂದರ್ಭಗಳಲ್ಲಿ ಉಡುಗೊರೆಗಳನ್ನು (Gift) ನೀಡುವುದು ವಾಡಿಕೆ. ಅಲ್ಲದೇ ತಮ್ಮ ಪ್ರೀತಿ ಪಾತ್ರರು ಯಾವ ಉಡುಗೊರೆ ನೀಡುತ್ತಾರೆ ಎನ್ನುವ ನಿರೀಕ್ಷೆಗಳು ಅನೇಕರಿಗೆ ಇರುತ್ತದೆ.‌ ಅಲ್ಲದೇ ತಮ್ಮ ಪ್ರೀತಿ ಪಾತ್ರರಿಗೆ ಅತ್ಯುತ್ತಮ ಉಡುಗೊರೆಗಳನ್ನು ನೀಡಬೇಕೆನ್ನುವ ಆಸೆಯಿಂದ ಉಡುಗೊರೆಗಳಿಗಾಗಿ ಸಾಕಷ್ಟು ತಲೆ ಕೆಡಿಸಿಕೊಳ್ಳುವ ಮಂದಿ ಇರುತ್ತಾರೆ. ಆದರೆ ಕೆಲವೊಮ್ಮೆ ಕೆಲವರು ನೀಡುವ ಉಡುಗೊರೆಗಳು ಮಾತ್ರ ಸಖತ್ ಸುದ್ದಿಯಾಗುತ್ತವೆ. ಈಗ ಯೂಟ್ಯೂಬರ್ (You tuber) ಒಬ್ಬರು ಪತ್ನಿಗೆ ನೀಡಿದ ಉಡುಗೊರೆಯ ವಿಷಯವಾಗಿ ದೊಡ್ಡ ಸುದ್ದಿಯಾಗಿದ್ದು, ಫೋಟೋಗಳು ವೈರಲ್ ಆಗಿದೆ.

https://www.instagram.com/p/Cl54RyLDx2u/?igshid=YmMyMTA2M2Y=

ಪಾಕಿಸ್ತಾನದ ಯೂಟ್ಯೂಬರ್ (Pakistanti you tuber ) ಒಬ್ಬರು ಮದುವೆ ದಿನದಂದು ತಮ್ಮ ಪತ್ನಿ ಗೆ (Wife) ಒಂದು ವಿಶೇಷವಾದ ಉಡುಗೊರೆಯನ್ನು ನೀಡಿದ್ದಾರೆ. ಹೌದು, ಕರಾಚಿಯ (Karachi) ಯೂಟ್ಯೂಬರ್ ಅಜ್ಲಾನ್ ಶಾ ಎನ್ನುವವರು ಈಗ ಪತ್ನಿಗೆ ನೀಡಿದ ಗಿಫ್ಟ್ ನ ವಿಚಾರವಾಗಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದಾರೆ. ಪತ್ನಿಗೆ ಇಷ್ಟವೆಂದು ನೀಡಿದ ಗಿಫ್ಟ್ವನ ಫೋಟೋಗಳು ವೈರಲ್ ಆಗುತ್ತಿವೆ. ಹಾಗಾದ್ರೆ ಈತ ಕೊಟ್ಟ ಗಿಫ್ಟ್ ಏನು? ಎನ್ನುವುದನ್ನು ತಿಳಿಯುವ ಕುತೂಹಲ ನಿಮ್ಮಲ್ಲಿ ಮೂಡಿದ್ದರೆ ಅದೇನು ಎಂದು ತಿಳಿಯುವ ನಿಮ್ಮ ಆಸಕ್ತಿಗೆ ಉತ್ತರ (Answer) ಇಲ್ಲಿದೆ.

ಯೂಟ್ಯೂಬರ್ (You tuber) ಅಜ್ಲಾನ್ ಶಾ ವಾರಿಷಾ ಎನ್ನುವ ಯುವತಿಯನ್ನು ವರಿಸಿದ್ದು, ಅವರು ತಮ್ಮ ಪ್ರೀತಿಯ ಪತ್ನಿಗೆ ಕತ್ತೆ (Donkey) ಬಹಳ ಇಷ್ಟವೆಂದು ತಿಳಿದುಕೊಂಡು, ಆರತಕ್ಷತೆ ಕಾರ್ಯಕ್ರದಲ್ಲಿ ಅವರು ತಮ್ಮ‌ ಪತ್ನಿಗೆ ಕತ್ತೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ವಾರಿಷಾ ಕತ್ತೆಯನ್ನು ನೋಡಿ ಅಚ್ಚರಿ ಪಟ್ಟಿದ್ದಾರೆ. ಅನಂತರ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಅಜ್ಲಾನ್ ಮಾತನಾಡುತ್ತಾ ವಾರಿಷಾ ಕತ್ತೆಗಳನ್ನು ಪ್ರೀತಿಸುವಳೆನ್ನುವ ವಿಷಯ ತಿಳಿದು ಮದುವೆಗೆ ಅವಳಿಗೆ ವಿಶೇಷ ಉಡುಗೊರೆಯಾಗಿ ಕತ್ತೆಯನ್ನು ತಂದಿರುವುದಾಗಿ ಹೇಳಿದ್ದಾರೆ.

https://www.instagram.com/tv/Cl6tOLxj33Y/?igshid=YmMyMTA2M2Y=

ಅಲ್ಲದೇ ಅವರು ಕತ್ತೆಯನ್ನು ಜಗತ್ತಿನ ಅತ್ಯಂತ ಶ್ರಮ ಶೀಲ ಹಾಗೂ ಪ್ರೀತಿ ಪಾತ್ರವಾದ ಪ್ರಾಣಿಯಾಗಿದೆ ಎಂದಿದ್ದಾರೆ. ವಾರಿಷಾ ಗೆ ಕತ್ತೆಯನ್ನು ಉಡುಗೊರೆಯಾಗಿ ನೀಡಿದ ವೀಡಿಯೋವನ್ನು ಅಜ್ಲಾನ್ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಈ ವೀಡಿಯೋ ಸಹಾ ಈಗ ವೈರಲ್ ಆಗಿದೆ ಮಾತ್ರವೇ ಅಲ್ಲದೇ ದೊಡ್ಡ ಸಂಖ್ಯೆಯಲ್ಲಿ ಮೆಚ್ಚುಗೆಗಳು ಹರಿದು ಬಂದಿದೆ. ಆದರೆ ಇದೇ ವೇಳೆ ನೆಟ್ಟಿಗರು ಭರ್ಜರಿ ಟ್ರೋಲ್ ಸಹಾ ಮಾಡಿದ್ದ, ಕಾಮೆಂಟ್ ಗಳ ಮೂಲಕ ವ್ಯಂಗ್ಯವಾಡಿ, ಒಂದು ಕತ್ತೆಗೆ ಇನ್ನೊಂದು ಕತ್ತೆ ಫ್ರೀ ಎಂದಿದ್ದಾರೆ.

Leave a Comment