ಮದುವೆ ಆಗ್ದೇ ಮಗು ಆದ್ರೂ ನೋ ಪ್ರಾಬ್ಲಂ: ಮೊಮ್ಮಗಳಿಗೆ ಡೇಟಿಂಗ್ ಸಲಹೆ ಕೊಟ್ಟ ಜಯಾ ಬಚ್ಚನ್

Written by Soma Shekar

Published on:

---Join Our Channel---

ಬಾಲಿವುಡ್ ನ ಹಿರಿಯ ನಟ ಅಮಿತಾಬ್ ಬಚ್ಚನ್ ಅವರ ಪತ್ನಿ, ಹಿರಿಯ ನಟಿ ಜಯಾ ಬಚ್ಚನ್ ಆಗಾಗ ಯಾವುದಾದರೊಂದು ವಿಚಾರವಾಗಿ ಸುದ್ದಿಯಾಗುತ್ತಲೇ ಇರುತ್ತಾರೆ. ಈ ಬಾರಿ ಅವರು ತಮ್ಮ ಮೊಮ್ಮಗಳಿಗೆ ನೀಡಿರುವ ಡೇಟಿಂಗ್ ಸಲಹೆಯ ಕಾರಣದಿಂದ ಸಖತ್ ಸದ್ದು ಮಾಡಿದ್ದು, ಜಯಾ ಬಚ್ಚನ್ ಅವರ ಹೇಳಿಕೆ ಕಂಡು ನೆಟ್ಟಿಗರು ಬೆರಗಾಗಿದ್ದಾರೆ‌. ಸೋಶಿಯಲ್ ಮೀಡಿಯಾಗಳಲ್ಲಿ ಅವರ ಮಾತಿಗೆ ಮಿಶ್ರ ಪ್ರತಿಕ್ರಿಯೆಗಳು ಹರಿದು ಬರುತ್ತಿವೆ. ಜಯಾ ಬಚ್ಚನ್ ಕೆಲವೊಮ್ಮೆ ನೀಡುವ ಹೇಳಿಕೆಗಳಿಂದಲೇ ವಿ ವಾ ದಗಳಲ್ಲಿ ಸಹಾ ಸಿಲುಕಿ ಕೊಳ್ಳುವುದುಂಟು. ಆದರೆ ಈ ಬಾರಿ ಅವರು ಮೊಮ್ಮಗಳಿಗೆ ನೀಡಿದ ಸಲಹೆ ಎಲ್ಲರನ್ನು ಹುಬ್ಬೇರಿಸುವಂತೆ‌ ಮಾಡಿದೆ.

ಇತ್ತೀಚಿಗೆ ಜಯಾ ಬಚ್ಚನ್ ಅವರು ತಮ್ಮ ಮೊಮ್ಮಗಳು ನವ್ಯಾ ಜೊತೆಗೆ ಒಂದು ಸಂದರ್ಶನದಲ್ಲಿ ಭಾಗಿಯಾಗಿದ್ದರು. ಈ ವೇಳೆ ಅವರು ಸಂಬಂಧಗಳ ವಿಚಾರದಲ್ಲಿ ಯುವ ಪೀಳಿಗೆಗೆ ಸಲಹೆಯನ್ನು ನೀಡಿದ್ದಾರೆ. ಜಯಾ ಬಚ್ಚನ್ ಅವರು ಮಾತನಾಡುತ್ತಾ, ನಾನು ವಿಷಯಗಳನ್ನು ಕ್ಲಿನಿಕಲ್ ಆಗಿ ನೋಡುತ್ತೇನೆ. ಬೆಸ್ಟ್ ಫ್ರೆಂಡ್ ನನ್ನು ಮದುವೆಯಾಗಿ ಎಂದು ಹೇಳುತ್ತೇನೆ. ನಿಮಗೆ ಉತ್ತಮ ಸ್ನೇಹಿತ ಇರಬೇಕು, ಎಲ್ಲಾ ವಿಷಯಗಳನ್ನು ನಿನ್ನೊಂದಿಗೆ ಚರ್ಚಿಸಬೇಕು ಮತ್ತು ಮಗುವನ್ನು ಪಡೆಯಬೇಕು. ನಿಮ್ಮನ್ನು ತುಂಬಾ ಇಷ್ಟ ಪಡಬೇಕು ಮತ್ತು ಒಳ್ಳೆಯವರು ನಿಮ್ಮನ್ನು ಮದುವೆಯಾಗುತ್ತೇನೆ ಎಂದು ಹೇಳಬೇಕು. ‌

ಮದುವೆ ಎನ್ನುವುದನ್ನು ಸಮಾಜ ಕೇಳುತ್ತದೆ. ಆದರೆ ಮದುವೆಯಾಗದೇ ಮಗುವನ್ನು ಪಡೆದರೂ ನನಗೇನೂ ಸಮಸ್ಯೆ ಇಲ್ಲ ಎಂದು ಅವರು ಹೇಳಿದ್ದಾರೆ. ಸಂಬಂಧಗಳಲ್ಲಿ ದೈಹಿಕ ಆಕರ್ಷಣೆ ಮತ್ತು ಹೊಂದಾಣಿಕೆ ಎರಡೂ ಸಹಾ ಮುಖ್ಯ. ನಮ್ಮ ಕಾಲದಲ್ಲಿ ತುಂಬಾ ಪ್ರಯೋಗ ಮಾಡಲು ಸಾಧ್ಯವಿರಲಿಲ್ಲ. ಆದರೆ ಇಂದಿನ ಪೀಳಿಗೆಯವರು ಮಾಡುತ್ತಾರೆ. ಅದು ದೀರ್ಘಕಾಲದ ಸಂಬಂಧಕ್ಕೆ ಕಾರಣವಾಗುತ್ತದೆ. ದೈಹಿಕ ಸಂಬಂಧ ಇಲ್ಲದೇ ಹೋದರೆ ಸಂಬಂಧ ದೀರ್ಘಕಾಲ ಉಳಿಯುವುದಿಲ್ಲ. ಕೇವಲ ಪ್ರೀತಿ ಮತ್ತು ಹೊಂದಾಣಿಕೆಯಿಂದ ಸಂಬಂಧಗಳು ದೀರ್ಘಕಾಲ ಇರಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಆದ ಕಾರಣ ದೈಹಿಕ ಸಂಬಂಧ ಬಹಳ ಮುಖ್ಯ ಎಂದಿದ್ದಾರೆ ಜಯಾ ಬಚ್ಚನ್.

Leave a Comment