ಮದುವೆಯ 4 ತಿಂಗಳ ನಂತರ ಅವಳಿ ಮಕ್ಕಳಿಗೆ ತಂದೆ ತಾಯಿಯಾದ ನಯನತಾರಾ, ವಿಘ್ನೇಶ್: ಅಚ್ಚರಿಪಟ್ಟ ಅಭಿಮಾನಿಗಳು

Written by Soma Shekar

Published on:

---Join Our Channel---

ಕನಸಿನ ಮದುವೆಯ ನಾಲ್ಕು ತಿಂಗಳ ನಂತರ ದಕ್ಷಿಣದ ಸ್ಟಾರ್ ನಟಿ ನಯನ ತಾರಾ ಮತ್ತು ತಮಿಳು ಸಿನಿಮಾ ನಿರ್ದೇಶಕ ವಿಘ್ನೇಶ್ ಶಿವನ್ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಹೌದು ವಿಘ್ನೇಶ್ ಶಿವನ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಒಂದು ಬಹಳ ಮುದ್ದಾದ ಫೋಟೋ ವನ್ನು ಶೇರ್ ಮಾಡಿಕೊಂಡು, ಅದರೊಡನೆ ಬರೆದು ಕೊಂಡಿರುವ ಸಾಲುಗಳನ್ನು ನೋಡಿದ ಅವರ ಅಭಿಮಾನಿಗಳು ಮತ್ತು ನೆಟ್ಟಿಗರು ಒಂದು ಕಡೆ ಶಾಕ್ ಆಗಿದ್ದಾರೆ. ಮತ್ತೊಂದು ಕಡೆ ಎಲ್ಲರೂ ಶುಭವನ್ನು ಸಹಾ ಹಾರೈಸುತ್ತಾ ಸಾಗಿದ್ದು, ವಿಘ್ನೇಶ್ ಶಿವನ್ ಅವರ ಪೋಸ್ಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ವಿಘ್ನೇಶ್ ಶಿವನ್ ಅವರು ತಾನು ಮತ್ತು ನಯನ ತಾರಾ ಇಬ್ಬರು ಅವಳಿ ಗಂಡು ಮಕ್ಕಳನ್ನು ಸ್ವಾಗತಿಸುತ್ತಿರುವುದಾಗಿ ಪೋಸ್ಟ್ ನಲ್ಲಿ ತಿಳಿಸಿದ್ದಾರೆ. ವಿಘ್ನೇಶ್ ಅವರು ಬಹಳ ಉತ್ಸುಕತೆಯಿಂದ, ‘ನಯನ್ ಮತ್ತು ನಾನು ಅಮ್ಮ ಮತ್ತು ಅಪ್ಪ ಆಗಿದ್ದೇವೆ. ನಾವು ಅವಳಿ ಗಂಡು ಮಕ್ಕಳೊಂದಿಗೆ ಆಶೀರ್ವದಿಸಲ್ಪಟ್ಟಿದ್ದೇವೆ‌. ನಮ್ಮೆಲ್ಲರ ಪ್ರಾರ್ಥನೆಗಳು, ನಮ್ಮ ಪೂರ್ವಜರ ಆಶೀರ್ವಾದವು ಎಲ್ಲಾ ಉತ್ತಮ ಅಭಿವ್ಯಕ್ತಿಗಳೊಂದಿಗೆ ಒಟ್ಟಾಗಿ 2 ರ ರೂಪದಲ್ಲಿ ಬಂದಿವೆ. ನಮಗಾಗಿ ವರವಾದ ಶಿಶುಗಳು. ನಮ್ಮ ಉಯಿರ್ ಮತ್ತು ಉಲಗಂಗೆ ನಿಮ್ಮೆಲ್ಲರ ಆಶೀರ್ವಾದ ಬೇಕು. ಜೀವನವು ಪ್ರಕಾಶಮಾನವಾಗಿ ಮತ್ತು ಸುಂದರವಾಗಿ ಕಾಣುತ್ತದೆ. ದೇವರು ಡಬಲ್ ಗ್ರೇಟ್ ಎಂದು ಬರೆದುಕೊಂಡಿದ್ದಾರೆ.

ಒಂದಷ್ಟು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಇಬ್ಬರೂ ಕಳೆದ ಜೂನ್ 9 ರಂದು ಮಹಾಬಲಿಪುರಂ ನ ರೆಸಾರ್ಟ್ ಒಂದರಲ್ಲಿ ವೈವಾಹಿಕ ಜೀವನಕ್ಕೆ ಅಡಿಯಿಟ್ಟಿದ್ದರು. ನಾನು ರೌಡಿ ದಾನ್ ಸಿನಿಮಾದ ಚಿತ್ರೀಕರಣದ ವೇಳೆಯಲ್ಲಿ ನಯನತಾರ ಮತ್ತು ವಿಘ್ನೇಶ್ ಪ್ರೀತಿಯಲ್ಲಿ ಬಿದ್ದರು. ಅನಂತರ ಅವರ ಪ್ರೀತಿ ಮುಂದುವರೆಯಿತು. 2021 ರಲ್ಲಿ ನಟಿ ನಯನತಾರಾ ಸಿನಿಮಾವೊಂದರ ಪ್ರಮೋಷನ್ ಗಾಗಿ ವಿಜಯ್ ಟಿವಿ ಕಾರ್ಯಕ್ರಮಕ್ಕೆ ಆಗಮಿಸಿದಾಗ ಅಲ್ಲಿ ವಿಘ್ನೇಶ್ ಜೊತೆ ಆಗಿದ್ದ ತಮ್ಮ ಸೀಕ್ರೆಟ್ ಎಂಗೇಜ್ಮೆಂಟ್ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದರು.

Leave a Comment