ಮದುವೆಗೆ ಸಜ್ಜಾದ್ರ ವಿಜಯ್ ದೇವರಕೊಂಡ, ರಶ್ಮಿಕಾ? ಮದುವೆಗೆ ಮುಹೂರ್ತ ಫಿಕ್ಸಾ??

Written by Soma Shekar

Published on:

---Join Our Channel---

ನಟಿ ರಶ್ಮಿಕಾ ಮಂದಣ್ಣ ಸದ್ಯಕ್ಕಂತೂ ಟಾಲಿವುಡ್ ನ ಸಖತ್ ಬ್ಯುಸಿ ನಟಿ ಎನ್ನುವುದರಲ್ಲಿ ಅನುಮಾನವಿಲ್ಲ. ಅದಲ್ಲದೇ ಬಾಲಿವುಡ್ ಮತ್ತು ಮಲೆಯಾಳಂ ನಲ್ಲೂ ರಶ್ಮಿಕಾ ಹೆಜ್ಜೆ ಇಟ್ಟಾಗಿದ್ದು. ಪುಷ್ಪ ನಂತರ ರಶ್ಮಿಕಾ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಸಿಕ್ಕಾಪಟ್ಟೆ ಬ್ಯುಸಿಯಿರುವ ರಶ್ಮಿಕಾ ಅವರನ್ನು ಹೊಸ ನಿರ್ಮಾಪಕರು ಮುಂದಿನ ಒಂದೆರಡು ವರ್ಷಗಳ ಕಾಲ ತಮ್ಮ ಸಿನಿಮಾಗಳಿಗೆ ನಾಯಕಿ ಮಾಡಲು ಸಹಾ ಸಿಗದಷ್ಟು ಬ್ಯುಸಿಯಾಗಿದ್ದಾರೆ ರಶ್ಮಿಕಾ.‌ ಇಷ್ಟೊಂದು ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ ಮದುವೆ ಸುದ್ದಿ ಇದೀಗ ಸಿಕ್ಕಾಪಟ್ಟೆ ಕುತೂಹಲ ಮೂಡಿಸಿದೆ.

ಹೌದು, ವಿಶೇಷ ಏನೆಂದರೆ ಇದೇ ವರ್ಷದ ಅಂತ್ಯದ ವೇಳೆಗೆ ನಟಿಯ ಮದುವೆ ನಡೆಯಲಿದೆ ಎನ್ನುವ ಸುದ್ದಿಯೊಂದು ಇದೀಗ ಮಾದ್ಯಮಗಳಲ್ಲಿ ಹರಿದಾಡಿದೆ. ಹಾಗಾದರೆ ರಶ್ಮಿಕಾ ಮದುವೆಯಾಗಲಿರುವ ವರ ಯಾರು ? ಎನ್ನುವ ಪ್ರಶ್ನೆ ಕೂಡಾ ಸಹಜವಾಗಿಯೇ ಮೂಡುತ್ತದೆ. ಅಲ್ಲದೇ ಇದಕ್ಕೆ ಉತ್ತರ ಕೂಡಾ ಅನೇಕರ ಬಳಿ ಸಿದ್ಧವಾಗಿದೆ. ಉತ್ತರ ಎಲ್ಲರೂ ಊಹಿಸಿದಂತೆ ನಟ ವಿಜಯ್ ದೇವರಕೊಂಡ ಎನ್ನುವುದು ಈಗ ಟಾಕ್ ಆಫ್ ದಿ ಟೌನ್ ಆಗಿದೆ.

ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಗೀತ ಗೋವಿಂದಂ ಸಿನಿಮಾದಲ್ಲಿ ಮೊದಲ ಬಾರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಈ ಜೋಡಿಯ ಕೆಮಿಸ್ಟ್ರಿ ಈ ಸಿ‌ನಿಮಾದಲ್ಲಿ ಅಭಿಮಾನಿಗಳು ಹಾಗೂ ಸಿನಿ ಪ್ರೇಮಿಗಳ ಮೇಲೆ ಮಾಯೆ ಮಾಡಿತ್ತು. ಇದಾದ ನಂತರ ಡಿಯರ್ ಕಾಮ್ರೇಡ್ ಸಿನಿಮಾದಲ್ಲಿ ಮತ್ತೊಮ್ಮೆ ಇವರ ಜೋಡಿ ಅಭಿಮಾನಿಗಳಿಗೆ ಖುಷಿ ನೀಡಿತ್ತು. ಒಂದು ಜಾಹೀರಾತಿನಲ್ಲಿ ಸಹಾ ಈ ಜೋಡಿ ಕಾಣಿಸಿಕೊಂಡು ಜನರನ್ನು ರಂಜಿಸಿದ್ದು ಉಂಟು.

ಇನ್ನು ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ನಡುವಿನ ಆತ್ಮೀಯತೆ, ಸ್ನೇಹ ಎಲ್ಲವೂ ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಆಗಾಗ ಜೊತೆಯಲ್ಲಿ ಕಾಣಿಸಿಕೊಳ್ಳುತ್ತಾರೆ ಈ ಜೋಡಿ. ಜಿಮ್, ರೆಸ್ಟೋರೆಂಟ್, ಪಾರ್ಟಿ ಹೀಗೆ ಹಲವು ಕಡೆಗಳಲ್ಲಿ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡಿದ್ದರು. ಆಗಲೇ ಇವರ ನಡುವೆ ಸ್ನೇಹಕ್ಕಿಂತ ಮಿಗಿಲಾದುದು ಏನೋ ಇದೆ ಎನ್ನುವ ಗಾಸಿಪ್ ಒಂದು ದೊಡ್ಡ ಸುದ್ದಿ ಆಯಿತು. ಎಷ್ಟು ಸುದ್ದಿಗಳಾದರೂ ಸಹಾ ಈ ಜೋಡಿ ಅದಕ್ಕೆ ಗಮನ ನೀಡಲಿಲ್ಲ.

ಇನ್ನು ಇತ್ತೀಚಿಗೆ ಇಬ್ಬರೂ ಜೊತೆಯಾಗಿಯೇ ಗೋವಾದಲ್ಲಿ ಹೊಸ ವರ್ಷವನ್ನು ಆಚರಣೆ ಮಾಡಿದ್ದರು. ರಶ್ಮಿಕಾ ಬಾಲಿವುಡ್ ನಲ್ಲಿ ಹೊಸ ಅವಕಾಶಗಳಿಂದ ಬೀಡು ಬಿಟ್ಟಿದ್ದು ವಿಜಯ್ ದೇವರಕೊಂಡ ಸಹಾ ಲೈಗರ್ ಸಿನಿಮಾ ಕೆಲಸಗಳಿಗಾಗಿ ಮುಂಬೈನಲ್ಲೇ ಇದ್ದು ಆಗಾಗ ಇಬ್ಬರೂ ಜೊತೆಯಾಗಿ ಕಾಣಿಸಿಕೊಳ್ಳುತ್ತಾರೆ. ಈಗ ಇವೆಲ್ಲವುಗಳ ನಡುವೆ ಹೊಸ ಸುದ್ದಿಯೊಂದು ಕೇಳಿ ಬಂದಿದ್ದು ಈ ಜೋಡಿ ಈ ವರ್ಷದ ಕೊನೆಯ ವೇಳೆಗೆ ಮದುವೆ ಯಾಗಲಿದ್ದಾರೆ ಎನ್ನುವ ಗಾಸಿಪ್ ಈಗ ಗಮನ ಸೆಳೆದಿದೆ.

Leave a Comment