ಮಥುರಾದಲ್ಲಿ ಮದ್ಯ ಮಾಂಸ ನಿಷೇಧ: ಹಾಲು ಮಾರಾಟ ಮಾಡಿ ಎಂದ ಯೋಗಿ ಆದಿತ್ಯನಾಥ್

Written by Soma Shekar

Published on:

---Join Our Channel---

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅವರು ಸೋಮವಾರದಿಂದ ಮಥುರಾ ದಲ್ಲಿ ಮದ್ಯ ಮತ್ತು ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧ ಮಾಡಿದ್ದಾರೆ. ಅವರು ನಿಷೇಧಕ್ಕೆ ಯೋಜನೆಗಳನ್ನು ರೂಪಿಸಲು ಹಾಗೂ ಅವುಗಳ ಮಾರಾಟದಲ್ಲಿ ತೊಡಗಿಸಿಕೊಳ್ಳಲು ಸಂಬಂಧಪಟ್ಟ ಅಧಿಕಾರಗಳಿಗೆ ಮುಖ್ಯಮಂತ್ರಿ ಅವರು ಸೂಚನೆಗಳನ್ನು ಹೊರಡಿಸಿದ್ದಾರೆ. ಲಕ್ನೋ ದಲ್ಲಿ ನಡೆದ ಕೃಷ್ಣೋತ್ಸವ 2021 ರಲ್ಲಿ ಭಾಗವಹಿಸಿದ್ದ ಯೋಗಿ ಆದಿತ್ಯನಾಥ್ ಅವರು ಮಾತನಾಡುತ್ತಾ ಆ ಸಂದರ್ಭದಲ್ಲಿ ಇಂತಹುದೊಂದು ಘೋಷಣೆಯನ್ನು ಮಾಡಿದ್ದಾರೆ. ಈ ಮೂಲಕ ಅವರು ಮಥುರಾದಲ್ಲಿ ಸಂಪೂರ್ಣವಾಗಿ ಮದ್ಯ ಮತ್ತು ಮಾಂಸದ ಮಾರಾಟಕ್ಕೆ ನಿಷೇಧವನ್ನು ಜಾರಿ ಮಾಡಿದ್ದಾರೆ.

ಮಥುರಾ ನಗರದ ಗತ ವೈಭವವನ್ನು ಪುನರುಜ್ಜೀವನ ಗೊಳಿಸುವ ಸಲುವಾಗಿ ಮದ್ಯ ಮತ್ತು ಮಾಂಸ ವ್ಯಾಪಾರದಲ್ಲಿ ತೊಡಗಿರುವ ಜನರು ಅದನ್ನು ನಿಲ್ಲಿಸಿ ಅದಕ್ಕೆ ಪರ್ಯಾಯವಾಗಿ ಹಾಲಿನ ಮಾರಾಟವನ್ನು ಮಾಡಬಹುದು ಎನ್ನುವ ಸಲಹೆಯನ್ನು ಯೋಗಿ ಆದಿತ್ಯನಾಥ್ ಅವರು ನೀಡಿದ್ದಾರೆ. ಕೃಷ್ಣೋತ್ಸವದಲ್ಲಿ ಅವರು ಶ್ರೀಕೃಷ್ಣ ನ ಪ್ರಾರ್ಥನೆಯನ್ನು ಮಾಡಿದ್ದು ಕೊರೊನಾ ಸೋಂಕು ಆದಷ್ಟು ಬೇಗ ಕೊನೆಯಾಗಲಿ ಎಂದು ಪ್ರಾರ್ಥಿಸಿದ್ದಾರೆ. ಅಲ್ಲದೇ ಬ್ರಿಜ್ ಭೂಮಿಯನ್ನು ಅಭಿವೃದ್ಧಿ ಪಡಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನೂ ಕೈಗೊಳ್ಳಲಾಗುವುದು ಹಾಗೂ ಅದಕ್ಕೆ ಅಗತ್ಯವಿರುವ ಹಣದ ಕೊರತೆ ಇಲ್ಲ ಎಂದಿದ್ದಾರೆ.

ಮಥುರಾ ದಲ್ಲಿ ಮದ್ಯದ ಮಾರಾಟವು ಕಡಿಮೆಯಾದರೆ ಆ ಮೂಲಕ ಮದ್ಯ ವ್ಯಸನಿಗಳ ಪ್ದಮಾಣವೂ ಸಹಾ ಕಡಿಮೆಯಾಗುತ್ತದೆ ಎಂದು ಹೇಳಿರುವ ಯೋಗಿ ಆದಿತ್ಯನಾಥ್ ಅವರು, ಹಾಲು ಮಾರಾಟಕ್ಕೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಅಲ್ಲಿ ಹೈನುಗಾರಿಕೆ ಅಭಿವೃದ್ದಿಯಾಗಲಿದೆ ಎಂದು ಈ ವೇಳೆ ಅವರು ತಿಳಿಸಿದ್ದಾರೆ. ಯೋಗಿ ಆದಿತ್ಯನಾಥ್ ಅವರ ಈ ಹೊಸ ಘೋಷಣೆ ದೇಶದೆಲ್ಲೆಡೆ ಸುದ್ದಿಯಾಗಿದ್ದು, ಅದು ಎಲ್ಲೆಡೆ ಒಂದು ಚರ್ಚೆಯನ್ನು ಸಹಾ ಹುಟ್ಟು ಹಾಕಿದೆ.

Leave a Comment