ಮತ್ತೊಂದು ಸ್ಟಾರ್ ಜೋಡಿಯ ವಿಚ್ಛೇದನ? ನಟಿಯ ರಿಪ್ಲೈ ಕಂಡು ಶಾಕ್ ಆದ ಅಭಿಮಾನಿಗಳು, ನೆಟ್ಟಿಗರು

Written by Soma Shekar

Published on:

---Join Our Channel---

ದಕ್ಷಿಣದ ಸ್ಟಾರ್ ನಟಿಯರಲ್ಲಿ ನಟಿ ಸ್ನೇಹಾ ಕೂಡಾ ಒಬ್ಬರು. ತೆಲುಗು ಸಿನಿಮಾ ರಂಗದಲ್ಲಿ ನಟಿ ಸೌಂದರ್ಯ ನಂತರ ಸೀರೆಯಲ್ಲಿ ಮಿಂಚಿ, ಸಿನಿ ಪ್ರೇಮಿಗಳ ಮನಸ್ಸನ್ನು ಗೆದ್ದ ನಟಿ ಯಾರೆಂದರೆ ಅದು ಸ್ನೇಹ ಎನ್ನುವುದರಲ್ಲಿ ಎರಡು ಮಾತಿಲ್ಲ. ಮಲೆಯಾಳಂ ಸಿನಿಮಾ ಮೂಲಕ ಚಿತ್ರರಂಗಕ್ಕೆ ಅಡಿಯಿಟ್ಟ ಸ್ನೇಹ ಅನಂತರ ದಕ್ಷಿಣದ ನಾಲ್ಕು ಭಾಷೆಗಳಲ್ಲಿ ನಟಿಸಿ, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದರು. ನಟಿ ಸ್ನೇಹ ಕೌಟುಂಬಿಕ ಸಿನಿಮಾಗಳಲ್ಲಿ ಹೀರೋಯಿನ್ ಆಗಿ ನಟಿಸುತ್ತಲೇ ಕುಟುಂಬ ಕಥಾ ಚಿತ್ರಗಳಿಗೆ ತಕ್ಕ ನಟಿ ಎನಿಸಿಕೊಂಡು ತನಗಾಗಿ ಒಂದು ಪ್ರತ್ಯೇಕವಾದ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈಗಲೂ ಸಿನಿಮಾಗಳ ಪ್ರಮುಖವಾದ ಪೋಷಕ ಪಾತ್ರಗಳಲ್ಲಿ ನಟಿ ಮಿಂಚುತ್ತಿದ್ದಾರೆ.

ನಟಿ ಸ್ನೇಹ ಅವರು ತಮಿಳಿನ ನಟ, ನಿರ್ದೇಶಕ ಪ್ರಸನ್ನಕುಮಾರ್ ಅವರನ್ನು 2011 ರಲ್ಲಿ ಪ್ರೇಮ ವಿವಾಹವಾಗಿದ್ದರು. ಮದುವೆಯ ನಂತರ ಸಿನಿಮಾಗಳಿಂದ ಒಂದು ಬ್ರೇಕ್ ಪಡೆದಿದ್ದ ನಟಿ ಅನಂತರ ಪ್ರಮುಖ ಪಾತ್ರಗಳ ಮೂಲಕ ಮತ್ತೆ ಸಿನಿಮಾಗಳಿಗೆ ರೀ ಎಂಟ್ರಿ ನೀಡಿದ್ದರು. ಸೋಶಿಯಲ್ ಮೀಡಿಯಾಗಳಲ್ಲಿ ಸಹಾ ಸಕ್ರಿಯವಾಗಿರುವ ನಟಿ ತಮ್ಮ ಕುಟುಂಬಕ್ಕೆ ಸಂಬಂಧಿಸಿದ ಸುಂದರ ಕ್ಷಣಗಳ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಆದರೆ ಇತ್ತೀಚಿಗೆ ನಟಿ ಸ್ನೇಹ ಅವರ ಸಾಂಸಾರಿಕ ಜೀವನದ ಕುರಿತಾಗಿ ಒಂದಷ್ಟು ವಿಚಾರಗಳು ಹರಿದಾಡಿ, ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ.

ಕಳೆದ ಕೆಲವು ಸಮಯದಿಂದಲೂ ನಟಿ ಸ್ನೇಹ ಅವರು ತಮ್ಮ ಪತಿ ಪ್ರಸನ್ನ ಕುಮಾರ್ ಅವರಿಂದ ದೂರವಾಗಿ ಬದುಕಿದ್ದಾರೆ ಎಂದು, ಇಬ್ಬರ ನಡುವೆ ಮೂಡಿದ ಭಿನ್ನಾಭಿಪ್ರಾಯಗಳ ಕಾರಣದಿಂದಾಗಿ ಇಬ್ಬರೂ ದೂರ ದೂರವಾಗಿದ್ದಾರೆ ಎನ್ನುವ ಸುದ್ದಿ ಸದ್ದು ಮಾಡಿತ್ತು. ಅಲ್ಲದೇ ಈ ಜೋಡಿ ಶೀಘ್ರದಲ್ಲೇ ವಿಚ್ಛೇದನ ಸಹಾ ಪಡೆಯಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ದಕ್ಷಿಣ ಸಿನಿಮಾ ರಂಗದಲ್ಲಿ ಈಗಾಗಲೇ ಸಮಂತಾ, ನಾಗಚೈತನ್ಯ ಜೋಡಿ ಮತ್ತು ಧನುಷ್, ಸೌಂದರ್ಯ ಜೋಡಿ ವಿಚ್ಚೇದನದ ಸುದ್ದಿ ಕೇಳಿ ಶಾ ಕ್ ಆಗಿದ್ದ ಸಿನಿ ಪ್ರೇಮಿಗಳು, ಸ್ನೇಹ ಮತ್ತು ಪ್ರಸನ್ನ ಅವರ ವಿಚ್ಚೇದನದ ಸುದ್ಧಿಗೆ ಮತ್ತೆ ಶಾ ಕ್ ಆಗಿದ್ದರು.

ಹೀಗೆ ಸ್ನೇಹ ಮತ್ತು ಪ್ರಸನ್ನ ದಂಪತಿ ಕುರಿತಾಗಿ ಸುದ್ದಿಗಳು ಹರಿದಾಡುತ್ತಿರುವ ಬೆನ್ನಲ್ಲೇ ನಟಿ ಸ್ನೇಹ ಇದಕ್ಕೆ ಸ್ಪಷ್ಟನೆ ನೀಡುವಂತೆ, ಎಲ್ಲಾ ಸುದ್ದಿಗಳಿಗೆ ತೆರೆ ಎಳೆಯುವಂತೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. ನಟಿಯು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ಪತಿ ಪ್ರಸನ್ನ ಅವರ ಜೊತೆಗಿನ ಸೆಲ್ಫಿ ಒಂದನ್ನು ಶೇರ್ ಮಾಡಿಕೊಂಡು, ಟ್ವಿನ್ನಿಂಗ್ ಹ್ಯಾಪಿ ವೀಕೆಂಡ್ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಪತಿ, ಪತ್ನಿ ದೂರವಾಗಿದ್ದಾರೆ ಎಂದು ಹರಡಿದ್ದ ಗಾಸಿಪ್ ಗಳಿಗೆ ನಟಿ ತೆರೆ ಎಳೆದಿದ್ದು, ಅವರ ಅಭಿಮಾನಿಗಳು ಫೋಟೋ ನೋಡಿ ಖುಷಿಯಾಗಿದ್ದಾರೆ.

Leave a Comment