Weekend With Ramesh: ಪ್ರೊಮೋ ಬಂದಿದ್ದೇ ತಡ ಹರಿದು ಬರ್ತಿದೆ ಬೇಡಿಕೆಗಳ ಮಹಾಪೂರ: ಪ್ರೇಕ್ಷಕರ ಬೇಡಿಕೆ ಏನು?

Written by Soma Shekar

Published on:

---Join Our Channel---

ಕನ್ನಡ ಕಿರುತೆರೆಯಲ್ಲಿ(Kannada Small screen) ಜನ ಮೆಚ್ಚಿದ ಶೋ‌ ಗಳಲ್ಲಿ ಒಂದು ಸ್ಯಾಂಡಲ್ವುಡ್ ನಟ ರಮೇಶ್ ಅರವಿಂದ್(Ramesh Arvind) ಅವರು ನಿರೂಪಣೆ‌ ಮಾಡುತ್ತಿದ್ದ ವೀಕೆಂಡ್ ವಿತ್ ರಮೇಶ್(Weekend with Ramesh) ಕಾರ್ಯಕ್ರಮ. ಯಶಸ್ವಿ ನಾಲ್ಕು ಸೀಸನ್ ಗಳನ್ನು ಮುಗಿಸಿದ್ದ ಈ ಕಾರ್ಯಕ್ರಮದ ಐದನೇ ಸೀಸನ್ ಯಾವಾಗ? ಎನ್ನುವುದು ಪ್ರೇಕ್ಷಕರ ನಿರೀಕ್ಷೆಯಾಗಿತ್ತು. ಇನ್ನು ಈ ಕಾರ್ಯಕ್ರಮದ ಹೊಸ ಸೀಸನ್ ಪ್ರಸಾರಕ್ಕಾಗಿ ಕಾಯುತ್ತಿದ್ದ ಎಲ್ಲರಿಗೂ ಸಹಾ ಉತ್ತರ ಸಿಗುವ ಸಮಯ ಹತ್ತಿರವಾಗಿದ್ದು, ಶೀಘ್ರದಲ್ಲೇ ಈ ಕಾರ್ಯಕ್ರಮ ಪ್ರಸಾರವಾಗಲಿದ್ದು, ವಾಹಿನಿಯಲ್ಲಿ ಪ್ರೋಮೋ ಬಿಡುಗಡೆ ಆಗಿ ಕುತೂಹಲವನ್ನು ಮೂಡಿಸಿದೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರೊಮೋ ಪ್ರಸಾರವಾಗುತ್ತಿದೆಯಾದರೂ ಇನ್ನೂ ದಿನಾಂಕವನ್ನು ಘೋಷಣೆ ಮಾಡಲಾಗಿಲ್ಲ. ವಾಹಿನಿ ಬಿಡುಗಡೆ ಮಾಡಿರುವ ಪ್ರೊಮೊದಲ್ಲಿ ನಾವು ನಟ ರಮೇಶ್ ಅರವಿಂದ್(Ramesh Arvind) ಅವರ ಜೊತೆಗೆ ಸ್ಯಾಂಡಲ್ವುಡ್ ನಟಿ ರಾಧಿಕಾ ಚೇತನ್(Radhika Chethan) ಅವರನ್ನು ನೋಡಬಹುದಾಗಿದ್ದು, ಪ್ರೋಮೋ ಬಹಳ ಸುಂದರವಾಗಿ ಮೂಡಿ ಬಂದಿದೆ. ‌ಸ್ಪೂರ್ತಿದಾಯಕ ಕಥೆಗಳೊಂದಿಗೆ ವೀಕೆಂಡ್ ಗೆ ಸಾರ್ಥಕತೆ ತುಂಬೋದಿಕ್ಕೆ ಬರ್ತಿದ್ದಾರೆ ರಮೇಶ್ ಅರವಿಂದ್! ವೀಕೆಂಡ್ ವಿತ್ ರಮೇಶ್ 5 ಎನ್ನುವ ಬರಹದ ಜೊತೆಗೆ ಪ್ರೊಮೋ ಗಮನ ಸೆಳೆದಿದೆ.

ಇದನ್ನೂ ಓದಿ: ಭಾರತದ ನಕ್ಷೆಯ ಮೇಲೆ ಕಾಲಿಟ್ಟ ಅಕ್ಷಯ್ ಕುಮಾರ್: ನಿನಗೆ ನಾಚಿಕೆ ಆಗ್ಬೇಕು ಎಂದು ಸಿಡಿದೆದ್ದ ನೆಟ್ಟಿಗರು

ಪ್ರೋಮೋ ಪ್ರಸಾರವಾಗಿದ್ದೇ ತಡ ಎನ್ನುವಂತೆ ಸೋಶಿಯಲ್ ಮೀಡಿಯಾಗಳಲ್ಲಿ ನೆಟ್ಟಿಗರು ಸಾಕಷ್ಟು ಬೇಡಿಕೆಗಳನ್ನು ಇಡಲು ಪ್ರಾರಂಭಿಸಿದ್ದಾರೆ. ಹೌದು, ವೀಕೆಂಡ್ ವಿತ್ ರಮೇಶ್ ಗೆ ಅತಿಥಿಗಳು ಯಾರೆಲ್ಲಾ ಬರಬೇಕು ಎನ್ನುವ ವಿಚಾರವಾಗಿ ವೈವಿದ್ಯಮಯ ಕಾಮೆಂಟ್ ಗಳು ಹರಿದು ಬರುತ್ತಿವೆ. ಬಹಳಷ್ಟು ಜನರು ಶೋ ಮತ್ತೆ ಬರುವ ವಿಚಾರಕ್ಕೆ ಖುಷಿಯನ್ನು ಹಂಚಿಕೊಂಡಿದ್ದಾರೆ. ಇದಲ್ಲದೇ ವೈವಿದ್ಯಮಯ ರೀತಿಯಲ್ಲಿ ಕಾಮೆಂಟ್ ಗಳನ್ನು ಮಾಡಿರುವುದು ಗಮನ ಸೆಳೆದಿದೆ.

ಈ ಬಾರಿ ಕಾರ್ಯಕ್ರಮಕ್ಕೆ ಸಿನಿಮಾ ಮತ್ತು ರಾಜಕೀಯ ಹೊರತು ಪಡಿಸಿ ಸಾಧಕರನ್ನು ಕರೆ ತನ್ನಿ ಎನ್ನುವುದು ಒಂದು ಬೇಡಿಕೆಯಾಗಿದೆ. ಉದ್ಯಮಿಗಳು, ಸ್ಟಾರ್ಟಪ್ ಸಿಇಓ, ವೈದ್ಯರು, ಕ್ರೀಡೆ, ರೈತರು ಹೀಗೆ ಬೇರೆ ಬೇರೆ ಕ್ಷೇತ್ರಗಳ ಸಾಧಕರನ್ನು ಕರೆಸಿ ಎನ್ನುವುದು ಪ್ರೇಕ್ಷಕರ ಬೇಡಿಕೆ ಆಗಿದೆ. ಅಲ್ಲದೇ ಒಂದಷ್ಟು ಹೆಸರುಗಳನ್ನು ಸಹಾ ಸೂಚಿಸಿದ್ದಾರೆ ನೆಟ್ಟಿಗರು. ಡಾಲಿ ಧನಂಜಯ್, ಅನುಷ್ಕಾ ಶೆಟ್ಟಿ, ಡಾಕ್ಟರ್ ಬ್ರೋ, ಯಡಿಯೂರಪ್ಪ, ಹೀಗೆ ಒಂದಷ್ಟು ಹೆಸರುಗಳು ಹರಿದಾಡಿವೆ. ಒಟ್ಟಾರೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಕರೆಸಿ ಎನ್ನುವುದು ಅನೇಕರ ಬೇಡಿಕೆಯಾಗಿದೆ.

Leave a Comment