ಮಗಳ ಮೇಲಿನ ಪ್ರೀತಿಯಿಂದ ತಂದೆ ಹೀಗೆ ಮಾಡಿದ್ರು: ಆದ್ರೆ ಆಮೇಲೆ ಆಗಿದ್ದು ಶಾಕಿಂಗ್!! ವೈರಲ್ ವೀಡಿಯೋ

Written by Soma Shekar

Published on:

---Join Our Channel---

ಸಾಮಾನ್ಯವಾಗಿಯೇ ತಂದೆಗೆ ಮಗಳ ಮೇಲೆ ಪ್ರೀತಿ ಹೆಚ್ಚಾಗಿಯೇ ಇರುತ್ತದೆ. ಮಗಳಿಗಾಗಿ ಅಪ್ಪ ಯಾವುದೇ ಕೆಲಸವನ್ನು ಮಾಡಲು ಸಹಾ ಸದಾ ಸಿದ್ಧನಾಗಿರುತ್ತಾನೆ. ಎಷ್ಟೇ ಕಷ್ಟವಾದರೂ ಕೂಡಾ ತನ್ನ ಮುದ್ದಿನ ಮಗಳಿಗಾಗಿ ಯಾವುದೇ ಕಷ್ಟವನ್ನೇ ಆಗಲಿ ಎದುರಿಸಲು ಸಿದ್ಧವಾಗಿ ಬಿಡುತ್ತಾರೆ. ಇನ್ನೂ ಕೆಲವು ತಂದೆಯಂದಿರಾದರೆ ಬೆಳೆದು ದೊಡ್ಡವಳಾದ ಮಗಳು ತನಗಿಷ್ಟದ ಕೆಲಸವನ್ನು ಮಾಡುತ್ತೇನೆ ಎಂದರೂ ಬೇಡ ಎನ್ನದೇ ಮಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಆಕೆಗೆ ಸಂತೋಷವನ್ನು ನೀಡಲು ಮುಂದಾಗುತ್ತಾರೆ. ಈಗ ಅಂತಹುದೇ ಸನ್ನಿವೇಶದ ವೀಡಿಯೋ ಒಂದು ವೈರಲ್ ಆಗಿದೆ.

ವೈರಲ್ ವೀಡಿಯೋದಲ್ಲಿ ನೋಡಿದಾಗ ಮಗಳು ಬಹಳ ಇಷ್ಟಪಟ್ಟು ತಾನು ಸ್ಕೂಟಿಯನ್ನು ಓಡಿಸುವುದನ್ನು ಕಲಿಯಲು ಆಸಕ್ತಿಯನ್ನು ತೋರಿಸುತ್ತಾಳೆ. ಆಗ ತಂದೆ ಮಗಳ ಮೇಲಿನ ನಂಬಿಕೆಯಿಂದ ಆಕೆಗೆ ಸ್ಕೂಟಿಯನ್ನು ನೀಡಿದ್ದಾರೆ. ಆದರೆ ಅನಂತರ ಇದ್ದಕ್ಕಿದ್ದಂತೆ ನಡೆದ ಘಟನೆಯಿಂದ ಆ ತಂದೆ ಶಾಕ್ ಆಗಿದ್ದಾರೆ. ಈ ಘಟನೆಯನ್ನು ಒಳಗೊಂಡ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಾ ಸಾಗಿದ್ದು, ನೆಟ್ಟಿಗರ ಗಮನವನ್ನು ಸೆಳೆಯುತ್ತಿದೆ.

ವೀಡಿಯೋದಲ್ಲಿ ನೋಡಿದಾಗ ತಂದೆ ತಮ್ಮ ಮಗಳಿಗೆ ಬಹಳ ಇಷ್ಟಪಟ್ಟು ಸ್ಕೂಟಿಯನ್ನು ಕೊಡಿಸಿದ್ದಾರೆ. ಅಲ್ಲದೇ ಮನೆಯ ಮುಂದಿನ ಖಾಲಿ ಜಾಗದಲ್ಲೇ ಮಗಳಿಗೆ ಸ್ಕೂಟಿಯನ್ನು ಕಲಿಸುವ ಪ್ರಯತ್ನವನ್ನು ಸಹಾ ಅವರು ಮಾಡಿದ್ದಾರೆ. ತಾನೇ ಮಗಳಿಗೆ ಹತ್ತಿರವಿದ್ದು ಸ್ಕೂಟಿ ಕಲಿಸಲು ಮುಂದಾಗಿದ್ದಾರೆ. ಮಗಳು ಸ್ಕೂಟಿ ಸ್ಟಾರ್ಟ್ ಮಾಡಿ ಮುಂದೆ ಬರುವಾಗ, ಮಗಳ ಮೇಲಿನ ನಂಬಿಕೆಯಿಂದ ಮಗಳ ಕೈಗೆ ಸ್ಕೂಟಿ ಕೊಟ್ಟು ತಾವು ಮುಂದೆ ಹೋಗುತ್ತಿದ್ದಾರೆ. ಆದರೆ ಆ ಯುವತಿ ಸ್ಕೂಟಿಯ ನಿಯಂತ್ರಣ ತಪ್ಪಿದ್ದಾಳೆ.

https://www.instagram.com/reel/CaOtHmopwRi/?utm_medium=copy_link

ಸ್ಕೂಟಿಯ ವೇಗವನ್ನು ಕಡಿಮೆ ಮಾಡುವುದು ಆಕೆಗೆ ಗೊತ್ತಾಗಿಲ್ಲ, ಬಹುಶಃ ಮೊದಲ ಬಾರಿಗೆ ಸ್ಕೂಟಿ ಓಡಿಸುತ್ತಿರುವ ಆತಂಕ ಕೂಡಾ ಆಕೆ ಯಲ್ಲಿ ಇತ್ತು ಎನಿಸುತ್ತದೆ. ಆದ್ದರಿಂದಲೇ ಸ್ಕೂಟಿಯ ವೇಗವನ್ನು ಕಡಿಮೆ ಮಾಡಲು ವಿಫಲಳಾಗಿದ್ದಾಳೆ. ಸ್ಕೂಟಿಯಲ್ಲಿ ನೇರವಾಗಿ ಹೋಗಿ ಅವರ ಅಪ್ಪನಿಗೇ ಡಿಕ್ಕಿ ಹೊಡೆದಿದ್ದಾಳೆ. ಅಪ್ಪ, ಮಗಳು ಇಬ್ಬರೂ ಕೂಡಾ ನೆಲದ ಮೇಲೆ ಬಿದ್ದಿದ್ದಾರೆ. ಈ ವೀಡಿಯೋ ವೈರಲ್ ಆಗಿದ್ದು ನೆಟ್ಟಿಗರು ಹಾಸ್ಯ ಮಾಡುತ್ತಾ ಕಾಮೆಂಟ್ ಮಾಡುತ್ತಿದ್ದಾರೆ. ಡ್ಯಾಡಿ ಪ್ರಿನ್ಸೆಸ್ , ಮ ರ್ಡ ರ್ ಅಟೆಂಪ್ಟ್ ಎಂದು ಕಾಮೆಂಟ್ ಮಾಡಿ ಹಾಸ್ಯ ಮಾಡಿದ್ದಾರೆ.

Leave a Comment