ಮಂಗಳ ಮುಖಿಯರ ಪಾದ ಪೂಜೆ: ಬಹಳ ವಿಶೇಷವಾಗಿ ದೀಪಾವಳಿ ಆಚರಿಸಿದ ವಿನಯ್ ಗುರೂಜಿ

Written by Soma Shekar

Published on:

---Join Our Channel---

ಅವದೂತ ಹಾಗೂ ಬಹಳಷ್ಟು ಜನರ ಪ್ರೀತಿ ಪಾತ್ರರಾಗಿರುವ ವಿನಯ್ ಗುರೂಜಿ ಅವರು ಈ ಬಾರಿ ದೀಪಾವಳಿ ಹಬ್ಬವನ್ನು ಬಹಳ ವಿಶೇಷವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಣೆಯನ್ನು ಮಾಡುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಕೊಪ್ಪ ತಾಲೂಕಿನ ಹರಿಹರಪುರದ ಹತ್ತಿರವಿರು ಗೌರಿ ಗದ್ದೆಯ ಸ್ವರ್ಣಪಿಠಿಕೇಶ್ವರಿ ದತ್ತಾಶ್ರಮದ ಅವಧೂತರಾಗಿದ್ದಾರೆ ವಿನಯ್ ಗುರೂಜಿ ಅವರು. ಇವರ ಭಕ್ತರಿಗೆ ಇವರ ಮೇಲೆ ಅಪಾರವಾದ ಗೌರವ ಹಾಗೂ ಭಕ್ತಿ, ಶ್ರದ್ಧೆಗಳು ಇದ್ದು, ಇವರನ್ನು ದೈವಾಂಶ ಸಂಭೂತರೆಂದೇ ನಂಬಿ ಅವರನ್ನು ಗೌರವಿಸಿ, ಆದರಿಸುತ್ತಾರೆ. ಇಂತಹ ವಿನಯ್ ಗುರೂಜಿ ದೀಪಾವಳಿಯನ್ನು ವಿಶೇಷವಾಗಿ ಆಚರಿಸಿದ್ದಾರೆ.

ಹೌದು ವಿನಯ್ ಗುರೂಜಿ ಅವರು ಇಂದು ದೀಪಾವಳಿ ವಿಶೇಷ ಸಂದರ್ಭದಲ್ಲಿ ಹರಿಹರಪುರದ ಗೌರಿ ಗದ್ದೆಯಲ್ಲಿನ ತಮ್ಮ ಆಶ್ರಮದಲ್ಲಿ ಮಂಗಳಮುಖಿಯರ ಪಾದ ಪೂಜೆಯನ್ನು ಮಾಡುವ ಮೂಲಕ ದೀಪಾವಳಿ ಹಬ್ಬವನ್ನು ಆಚರಣೆ ಮಾಡಿದ್ದಾರೆ. ಅಲ್ಲದೇ ಇಂದಿನ ಈ ವಿಶೇಷ ದಿನದಂದು ಅವರು 150 ಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ದಿನಸಿ ಕಿಟ್ ಅನ್ನು ನೀಡುವ ಮೂಲಕ ಹಬ್ಬದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ಆಹಾರ ಕಿಟ್ ವಿತರಣೆಗೂ ಮೊದಲು ಅದಕ್ಕೆ ಆರತಿ ಮಾಡಿದ ಗುರೂಜಿ ಅನಂತರ ಅದನ್ನು ವಿತರಣೆ ಮಾಡಿದ್ದಾರೆ.

ವಿನಯ್ ಗುರೂಜಿ ಅವರು ಹಬ್ಬಗಳನ್ನು ವಿಶೇಷ ರೀತಿಯಲ್ಲಿ ಆಚರಿಸುವ ಮೂಲಕ ಎಲ್ಲರ ಗಮನವನ್ನು ಸೆಳೆಯುತ್ತಾರೆ. ಕನ್ನಡ ರಾಜ್ಯೋತ್ಸವದ ದಿನ ಅವರು ಕೊಪ್ಪದಲ್ಲಿ ಬಸ್ ನಿಲ್ದಾಣದ ಕಸವನ್ನು ಗುಡಿಸುವ ಮೂಲಕ, ಗಾಂಧೀ ಜಯಂತಿಯ ದಿನ ಶೌಚಾಲಯ ಶುಚಿ ಮಾಡುವ ಮೂಲಕ ಆಚರಿಸಿ ಎಲ್ಲರ ಮೆಚ್ಚುಗೆ ಪಡೆದುಕೊಂಡರು. ಇನ್ನು ಇಂದು ಮಂಗಳ ಮುಖಿ ಯರ ಪಾದಪೂಜೆ, ಬಡವರಿಗೆ ಆಹಾರ ಕಿಟ್ ನೀಡಿ ದೀಪಾಗಳಿಯನ್ನು ಆಚರಣೆ ಮಾಡಿರುವುದು ಸಹಾ ಮೆಚ್ಚುಗೆಗೆ ಪಾತ್ರವಾಗಿದೆ.

Leave a Comment