ಮಂಗಳಮುಖಿಯಾದ ಮಾಜಿ ಮಿಸ್ ಯೂನಿವರ್ಸ್: ಅಮ್ಮನ ಕಂಡು ಮಗಳು ನೀಡಿದ ಮೊದಲ ಪ್ರತಿಕ್ರಿಯೆ ಇದು

Written by Soma Shekar

Published on:

---Join Our Channel---

ಮಾಜಿ ಮಿಸ್ ಯೂನಿವರ್ಸ್ , ಬಾಲಿವುಡ್ ನ ಸ್ಟಾರ್ ನಟಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ನಟಿ ಸುಶ್ಮಿತಾ ಸೇನ್ ಸಿನಿಮಾ ರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. 1994 ರಲ್ಲಿ ಮಿಸ್ ಯೂನಿವರ್ಸ್ ಕಿರೀಟ ಧರಿಸಿ ಮಿಂಚಿದ್ದ ಸುಶ್ಮಿತಾ ಸೇನ್ ಅನಂತರ ದಸ್ತಕ್ ಸಿನಿಮಾದ ಮೂಲಕ ಬಾಲಿವುಡ್ ಗೆ ಎಂಟ್ರಿ ನೀಡಿದರು. ಸುಶ್ಮಿತಾ ದೊಡ್ಡ ಸಂಖ್ಯೆಯ ಸಿನಿಮಾಗಳಲ್ಲಿ ನಟಿಸದೇ ಹೋದರೂ ಸಹಾ ಸಿನಿ ಪ್ರೇಮಿಗಳು ನೆನಪಿನಲ್ಲಿ ಇಟ್ಟುಕೊಳ್ಳುವ ಪಾತ್ರಗಳನ್ನು ನಿರ್ವಹಿಸಿದರು. ಅಲ್ಲದೇ 1994 ರ ಅದೇ ವರ್ಷ ಮಿಸ್ ವರ್ಲ್ಡ್ ಆಗಿದ್ದ ಐಶ್ವರ್ಯ ರೈ ಬಾಲಿವುಡ್‌ ನಲ್ಲಿ ಸುಶ್ಮಿತಾಗೆ ಸ್ಪರ್ಧೆ ಕೂಡಾ‌ ಆಗಿದ್ದರು ಎನ್ನುವುದು ಸತ್ಯ. ಸುಶ್ಮಿತಾ ಆರಕ್ಕೇಳದ, ಮೂರಕ್ಕಿಳಿಯದ ನಟಿಯಾಗಿ ತಮ್ಮ ಛಾಪನ್ನು ಮೂಡಿಸಿದ್ದು, ಇಂದಿಗೂ ಸಾಕಷ್ಟು ಬೇಡಿಕೆಯನ್ನು ಪಡೆದಿದ್ದಾರೆ.

ಪ್ರಸ್ತುತ ವೆಬ್ ಸಿರೀಸ್ ಗಳಲ್ಲಿ ಬ್ಯುಸಿಯಾಗಿರುವ ನಟಿ ಸುಶ್ಮಿತಾ ಸೇನ್ ಹೊಸ ವೆಬ್ ಸಿರೀಸ್ ಒಂದರಲ್ಲಿ ನಟಿಸುತ್ತಿದ್ದು, ಅದರ ಬಗ್ಗೆ ಮಾಹಿತಿಯನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನಟಿ ಶೇರ್ ಮಾಡಿದ ಪೋಸ್ಟ್ ಗೆ ಅವರ ದತ್ತು ಪುತ್ರಿ ರೀನೀ ಸೇನ್ ಸೇರಿದಂತೆ ಅನೇಕರು ಪ್ರತಿಕ್ರಿಯೆಗಳನ್ನು ನೀಡುತ್ತಿದ್ದು, ನಟಿಯ ಪೋಸ್ಟ್ ವೈರಲ್ ಆಗಿದೆ. ಸುಷ್ಮಿತಾ ಸೇನ್ ಅವರ ಹೊಸ ವೆಬ್ ಸೀರೀಸ್ ವಿಚಾರಕ್ಕೆ ಬಂದರೆ ಇದೇ ಮೊದಲ ಬಾರಿಗೆ ನಟಿ ಚಾಲೆಂಜಿಂಗ್ ಆಗಿರುವ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರದ ಮೂಲಕ ತಮ್ಮ ಅಭಿಮಾನಿಗಳಿಗೆ ಸುಷ್ಮಿತಾ ಸೇನ್ ಅವರು ಅಚ್ಚರಿಯನ್ನು ನೀಡಿದ್ದಾರೆ.

ಹೌದು, ಮಾಜಿ ಮಿಸ್ ಯೂನಿವರ್ಸ್ ಸುಷ್ಮಿತಾ ಸೇನ್ ಥಾಲಿ ಎನ್ನುವ ಹೆಸರಿನ ವೆಬ್ ಸಿರೀಸ್ ನಲ್ಲಿ ನಟಿಸುತ್ತಿದ್ದು, ಇದರಲ್ಲಿ ಅವರು ಮಂಗಳಮುಖಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇದರ ಫಸ್ಟ್ ಲುಕ್ ಬಿಡುಗಡೆ ಆಗಿ ಸಖತ್ ಸದ್ದು ಮಾಡುತ್ತಿದೆ. ನೈಜ ಘಟನೆಗಳನ್ನು ಆಧರಿಸಿ ಮೂಡಿ ಬರುತ್ತಿರುವ ಈ ವೆಬ್ ಸಿರೀಸ್ ನಲ್ಲಿ, ಸಾಮಾಜಿಕ ಹೋರಾಟದ ಮೂಲಕ ಹೆಸರು ಮಾಡಿರುವ ಮಂಗಳ ಮುಖಿ ಗೌರಿ ಸಾವಂತ್ ಅವರ ಜೀವನದ ಕಥೆಯ ವಿವರಗಳನ್ನು ಇಟ್ಟುಕೊಂಡು ಕಥೆಯನ್ನು ಹೆಣೆಯಲಾಗಿದೆ ಎನ್ನಲಾಗಿದೆ. ಗೌರಿ ಸಾವಂತ್ ಅವರ ಪಾತ್ರದಲ್ಲಿ ಸುಶ್ಮಿತಾ ಸೇನ್ ನಟಿಸುತ್ತಿದ್ದಾರೆ.

ವೈವಿದ್ಯಮಯ ಪಾತ್ರಗಳನ್ನು ಪೋಷಿಸಿದ್ದ ನಟಿ ಈಗ ಮಂಗಳಮುಖಿಯ ಪಾತ್ರದಲ್ಲಿ ಕಂಡಿರುವುದನ್ನು ಅಭಿಮಾನಿಗಳಿಗೆ ಆಶ್ಚರ್ಯವನ್ನು ಉಂಟು ಮಾಡಿದೆ. ಇನ್ನು ಸುಷ್ಮಿತಾ ಸೇನ್ ಅವರ 22 ರ ಹರೆಯದ ಮಗಳು ರೀನೀ ಸೇನ್ ಇದರ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ, ಅಮ್ಮ ನಿಮ್ಮನ್ನು ಕಂಡರೆ ಹೆಮ್ಮೆ ಎನಿಸುತ್ತಿದೆ, ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ ಎಂದು ಹೇಳಿದ್ದಾರೆ. ಈ ಪಾತ್ರ ಮಾಡಲು ಸುಷ್ಮಿತಾ ಸೇನ್ ಸಹಾ ಖುಷಿಯಾಗಿದ್ದು, ಗೌರಿ ಸಾವಂತ್ ಅಂತಹ ಸುಂದರ ವ್ಯಕ್ತಿಯ ಕಥೆಯನ್ನು ಜಗತ್ತಿಗೆ ತಿಳಿಸುವ ಅವಕಾಶ ದಕ್ಕಿರುವುದು ನನಗೆ ಹೆಮ್ಮೆ ಎನಿಸುತ್ತಿದೆ ಎಂದಿದ್ದಾರೆ.

Leave a Comment