ಭಾರತದ ಈ ಪಟ್ಟಣದಲ್ಲಿ ಮಾಂಸಾಹಾರಕ್ಕೆ ಇಲ್ಲ ಅವಕಾಶ: ಕಾರಣ ತಿಳಿದರೆ ಶಾ ಕ್ ಆಗ್ತೀರಾ!

Written by Soma Shekar

Published on:

---Join Our Channel---

ಭಾರತದಲ್ಲಿ ಸಸ್ಯಾಹಾರ ಸೇವನೆ ಮಾಡುವ ಜನರ ಸಂಖ್ಯೆ ಅನ್ಯ ದೇಶಗಳಿಗೆ ಹೋಲಿಕೆ ಮಾಡಿದಾಗ ಸ್ವಲ್ಪ ಹೆಚ್ಚಾಗಿಯೇ ಇದೆ. ಸಾಮಾನ್ಯವಾಗಿ ಯಾವುದೇ ನಗರ, ಪಟ್ಟಣ ಅಥವಾ ಗ್ರಾಮಗಳನ್ನು ಪರಿಗಣಿಸಿದಾಗ ಅಲ್ಲಿ ವಾಸಿಸುವ ಜನರಲ್ಲಿ ಸಸ್ಯಾಹಾರಿಗಳು ಮತ್ತು ಮಾಂ ಸಾ ಹಾರಿ ಜನರು ಸಹಜವಾಗಿಯೇ ಇರುತ್ತಾರೆ. ಆದರೆ ಭಾರತದ ಒಂದು ಪಟ್ಟಣ ಪ್ರದೇಶವು ಮಾತ್ರ ಸಂಪೂರ್ಣವಾಗಿ ಸಸ್ಯಹಾರಿ ಆಗಿದೆ ಎಂದು ಹೇಳಿದರೆ ನಿಮಗೆ ಅದು ಆಶ್ಚರ್ಯವನ್ನು ಉಂಟು ಮಾಡಬಹುದು. ಆದರೆ ಇದು ಸತ್ಯವಾದ ವಿಷಯವಾಗಿದೆ.

ಹಾಗಾದರೆ ಯಾವುದು ಆ ಪಟ್ಟಣ?? ಏನು ಅಲ್ಲಿನ ವಿಶೇಷತೆ ಎನ್ನುವುದನ್ನು ನಾವೆಲ್ಲ ತಿಳಿದುಕೊಳ್ಳೋಣ. ನಾವು ಹೇಳಲು ಹೊರಟಿರುವ ಈ ಸಸ್ಯಾಹಾರಿ ಪಟ್ಟಣದಲ್ಲಿ ಮಾಂ ಸ ಹಾಗೂ ಮೊಟ್ಟೆಯ ಮಾರಾಟ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇಂತಹ ಒಂದು ವಿಶೇಷವಾದ ಪಟ್ಟಣದ ಹೆಸರು ಪಲಿತಾನಾ. ಈ ಪಟ್ಟಣವು ಗುಜರಾತ್ ರಾಜ್ಯದ ಭಾವನಗರ ಜಿಲ್ಲೆಯಲ್ಲಿದೆ. ಇಲ್ಲಿ ಆಹಾರಕ್ಕಾಗಿ ಯಾವುದೇ ಪ್ರಾಣಿಯನ್ನು ಕೊ ಲ್ಲು ವುದಕ್ಕೆ ಸಂಪೂರ್ಣವಾಗಿ ನಿಷೇಧವನ್ನು ಹೇರಲಾಗಿದೆ. ಮಾಂ ಸಾ ಹಾರವನ್ನು ಸಂಪೂರ್ಣವಾಗಿ ನಿಷೇಧ ಮಾಡಿರುವ ವಿಶ್ವದ ಎರಡು ಸ್ಥಳಗಳಲ್ಲಿ ಎನ್ನುವ ಹೆಗ್ಗಳಿಕೆಯನ್ನು ಈ ಪಟ್ಟಣವು ಪಡೆದುಕೊಂಡಿದೆ.

ಟೈಮ್ಸ್ ಆಫ್ ಇಂಡಿಯಾ ನೀಡಿರುವ ವರದಿಯ ಪ್ರಕಾರ 2014 ರಲ್ಲಿ ಅಲ್ಲಿನ ಸರ್ಕಾರವು ಈ ಪಟ್ಟಣದಲ್ಲಿ ಅಸ್ತಿತ್ವದಲ್ಲಿದ್ದ ಎಲ್ಲಾ ಕ ಸಾ ಯಿ ಖಾ ನೆ ಗಳನ್ನು ಮುಚ್ಚಿದೆ ಹಾಗೂ ಪ್ರಾಣಿ ಹ ತ್ಯೆಯನ್ನು ನಿಷೇಧ ಮಾಡಿದೆ. ವಾಸ್ತವವಾಗಿ ಸುಮಾರು 200 ಜನ ಜೈನ ಸಂತರು ಉಪವಾಸ ಮಾಡಿ ಮಾಂ ಸಾ ಹಾರ ನಿಷೇಧಕ್ಕೆ ಆಗ್ರಹ ಮಾಡಿದ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಸರ್ಕಾರ ಮಾಂ ಸಾ ಹಾರವನ್ನು ನಿಷೇಧ ಮಾಡಿತು ಎಂದು ಹೇಳಲಾಗುತ್ತದೆ. ಜೈನ ಸಂತರು ಈ ಪ್ರದೇಶದಲ್ಲಿ ನಾವು ಸಾಯಲು ಸಿದ್ಧರಾಗುತ್ತೇವೆಯೇ ಹೊರತು ಆಹಾರಕ್ಕಾಗಿ ಪ್ರಾಣಿಗಳ ಹ ತ್ಯೆ ಆಗಲು ಬಿಡುವುದಿಲ್ಲ ಎಂದು ಹೇಳುತ್ತಾರೆ ಎನ್ನಲಾಗಿದೆ.

ಜೈನ ಸಂತರು ಪಟ್ಟಣದಲ್ಲಿದ್ದ ಒಟ್ಟು 250 ಕ ಸಾ ಯಿ ಖಾ ನೆಗಳನ್ನು ಮುಚ್ಚಬೇಕು ಎಂದು ಬೇಡಿಕೆಯಿಟ್ಟು ಉಪವಾಸವನ್ನು ಮಾಡಿದರು ಕೊನೆಗೆ ಸರ್ಕಾರ ಅವರ ಮಾತಿಗೆ ಒಪ್ಪಿದ್ದು ಮಾತ್ರವೇ ಅಲ್ಲದೇ ಅಲ್ಲಿನ ಕ ಸಾ ಯಿ ಖಾ ನೆಗಳನ್ನು ಮುಚ್ಚಿತು. ಅಷ್ಟು ಮಾತ್ರವೇ ಅಲ್ಲದೇ ಈ ಪ್ರದೇಶವನ್ನು ಪ್ರಾಣಿಗಳ ಹ ತ್ಯೆ ನಿಷೇಧ ವಲಯ ಎಂದು ಘೋಷಣೆ ಮಾಡಿತು. ಮೊಟ್ಟೆ ಹಾಗೂ ಮಾಂ ಸಾ ಹಾರಕ್ಕೆ ಇಲ್ಲಿ ನಿಷೇಧ ಇದೆ. ಆದರೆ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವ ಅವಕಾಶವಿದೆ. ಜನ ಸಸ್ಯಾಹಾರ ಸೇವನೆ ಜೊತೆಗೆ ಹಾಲಿನ ಉತ್ಪನ್ನಗಳನ್ನು ಬಳಸುತ್ತಾರೆ.

ವಿಶೇಷವೆಂದರೆ ಪಾಲಿತಾನಾ ಪಟ್ಟಣದಲ್ಲಿ ಹಲವು ಮಂದಿರಗಳಿವೆ. ಆದರೆ ಜೈನರಿಗೆ ಇದೊಂದು ವಿಶೇಷ ಪವಿತ್ರ ಸ್ಥಾನವೆಂದೇ ಹೇಳಲಾಗುತ್ತದೆ. ಜೈನರ ನಂಬಿಕೆಗಳ ಪ್ರಕಾರ ಅವರ ರಕ್ಷಕನಾದ ಆದಿನಾಥನು ಒಮ್ಮೆ ಈ ಪ್ರದೇಶದ ಬೆಟ್ಟಗಳ ಹಾದಿಯಲ್ಲಿ ನಡೆದುಕೊಂಡು ಹೋಗಿದ್ದರು ಎನ್ನಲಾಗಿದೆ. ಅಂದಿನಿಂದಲೂ ಈ ಪ್ರದೇಶವನ್ನು ಪವಿತ್ರ ಸ್ಥಳವೆಂದು ಜೈನರು ನಂಬಿಕೊಂಡು ಬರುತ್ತಿದ್ದಾರೆ ಎಂದು ಹೇಳಲಾಗಿದೆ.

Leave a Comment