ಭಾರತದಲ್ಲಿರುವಾಗಲೇ ಪುಟ್ಟ ಅಭಿಮಾನಿಯನ್ನು ಕಳೆದುಕೊಂಡ ಡೇವಿಡ್ ಮಿಲ್ಲರ್: ಭಾವುಕ ಪೋಸ್ಟ್ ನೋಡಿ ಮಿಡಿದ ನೆಟ್ಟಿಗರು

Written by Soma Shekar

Updated on:

---Join Our Channel---

ದಕ್ಷಿಣ ಆಫ್ರಿಕಾ ತಂಡದ ಸ್ಪೋ ಟ ಕ ಬ್ಯಾಟ್ಸ್ ಮನ್ ಎನಿಸಿಕೊಂಡಿರುವ ಕ್ರಿಕೆಟ್ ಆಟಗಾರ ಡೇವಿಡ್ ಮಿಲ್ಲರ್ ಅವರು ತಮ್ಮ ಅಭಿಮಾನಿಯನ್ನು ಕಳೆದುಕೊಂಡಿದ್ದಾರೆ. ಹಲವು ವರ್ಷಗಳಿಂದ ಅವರ ಅಭಿಮಾನಿ ಕ್ಯಾನ್ಸರ್ ನಿಂದ ಬಳಲುತ್ತಿದ್ದಳು ಎನ್ನಲಾಗಿದೆ. ಡೇವಿಡ್ ಮಿಲ್ಲರ್ ಅವರು ಭಾರತದಲ್ಲಿ ಏಕ ದಿನ ಸರಣಿ ಆಡುವಾಗಲೇ ಅಭಿಮಾನಿ ಮೃತಪಟ್ಟಿರುವ ಸುದ್ದಿ ಆ ಘಾ ತವನ್ನು ನೀಡಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಮಿಲ್ಲರ್ ಅವರು ತಮ್ಮ ನೋವನ್ನು ಹಂಚಿಕೊಂಡಿದ್ದು, ಅವರ ಅಭಿಮಾನಿಗಳು ಸಹಾ ಸೋಶಿಯಲ್ ಮೀಡಿಯಾಗಳ ಮೂಲಕ ಸಂತಾಪವನ್ನು ಸೂಚಿಸುತ್ತಿದ್ದಾರೆ.

ಮಿಲ್ಲರ್ ತಮ್ಮ ಪೋಸ್ಟ್ ನಲ್ಲಿ, ನನ್ನ ಪುಟ್ಟ ರಾಜಕುಮಾರಿಯನ್ನು ಕಳೆದುಕೊಂಡಿದ್ದೇನೆ. ನನ್ನ ರಾಜಕುಮಾರಿ ಜೀವನದಲ್ಲಿ ಹಲವು ಕಷ್ಟದ ಹಾದಿ ಗಳನ್ನು ಎದುರಿಸುತ್ತಾ‌ ನಗುತ್ತಲೇ ಇದ್ದಳು. ಇದೀಗ ನನ್ನನ್ನು ಬಿಟ್ಟು ಹೋಗಿದ್ದಾಳೆ. ಐ ಲವ್ ಯೂ, ರಿಪ್ ಎಂದು ಬರೆದುಕೊಂಡು ಮಿಲ್ಲರ್ ಅವರು ತಮ್ಮ ಅಭಿಮಾನಿಯ. ಜೊತೆಗಿನ ಹಲವು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಅವರು ಹಂಚಿಕೊಂಡ ಫೋಟೋಗಳನ್ನು ನೋಡಿದ ಅವರ ಅಭಿಮಾನಿಗಳು ಹಾಗೂ ಅಸಂಖ್ಯಾತ ಮಂದಿ ನೆಟ್ಟಿಗರು ಭಾವುಕರಾಗಿದ್ದಾರೆ. ಅನೇಕ ಮಂದಿ ಅವರ ಆ ಬಾಲಕಿಯ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿದ್ದಾರೆ.

ಮಿಲ್ಲರ್ ಅವರು ಭಾರತದ ವಿ ರು ದ್ಧ ಸರಣಿಗಾಗಿ ಭಾರತಕ್ಕೆ ಆಗಮಿಸಿದ್ದರು. ಈಗಾಗಲೇ ನಡೆದಿರುವ ಟಿ 20 ಸರಣಿಯಲ್ಲಿ ಸಹಾ ಅವರು ಶತಕವನ್ನು ಬಾರಿಸಿ ಮಿಂಚಿದ್ದರು. ಏಕದಿನ ಸರಣಿಯಲ್ಲೂ ಸಹಾ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಸಖತ್ ಸದ್ದು ಮಾಡಿ, ಅಭಿಮಾನಿಗಳಿಗೆ ಖುಷಿಯನ್ನು ನೀಡಿದ್ದರು. ಆದರೆ ಈಗ ಎರಡನೇ ಏಕದಿನ ಪಂದ್ಯಕ್ಕೆ ಮೊದಲೇ ಅವರಿಗೆ ಮಾನಸಿಕವಾಗಿ ಆ ಘಾ ತ ವಾಗಿದೆ. ಇಂದು ರಾಂಚಿಯಲ್ಲಿ ಎರಡನೇ ಏಕದಿನ ಪಂದ್ಯ ನಡೆಯಲಿದ್ದು,ಮಿಲ್ಲರ್ ಅಭಿಮಾನಿಯನ್ನು ಕಳೆದುಕೊಂಡ ನೋವಿನಲ್ಲೇ ತಂಡದ ಭಾಗವಾಗಿದ್ದಾರೆ.

Leave a Comment