ಓದಿದ್ದು B.Tech, ಮಾರೋದು ಪಾನೀಪೂರಿ: ಬುಲೆಟ್ ರಾಣಿಯ ಬಿಂದಾಸ್ ಸ್ಟೈಲ್ ಗೆ ನೆಟ್ಟಿಗರು ಫಿದಾ!

Written by Soma Shekar

Published on:

---Join Our Channel---

ಉದ್ಯೋಗಕ್ಕಾಗಿ ಪದವಿ ಎನ್ನುವ ಮಾತಿಗೆ ಖಂಡಿತ ಇತ್ತೀಚಿನ ದಿನಗಳಲ್ಲಿ ಅರ್ಥ ಸ್ವಲ್ಪ ಬದಲಾಗಿದೆ. ಏಕೆಂದರೆ ಪಡೆದ ಪದವಿಗೂ, ಮಾಡುವ ಉದ್ಯೋಗಕ್ಕೂ ಯಾವುದೇ ಸಾಮ್ಯತೆ ಇಲ್ಲ ಎನ್ನುವಂತೆ ಕೆಲವರು ತಮಗೆ ದೊರೆತ ಉದ್ಯೋಗವನ್ನು ಮಾಡುವತ್ತ ಗಮನ ನೀಡಿದರೆ, ಇನ್ನೂ ಕೆಲವರು ತಮ್ಮ ಪದವಿಗಳನ್ನು ಬದಿಗೊತ್ತಿ ತಮ್ಮದೇ ಆದ ಸ್ವಂತ ವ್ಯಾಪಾರ ನಡೆಸಿ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಮುಂದಾಗುತ್ತಿದ್ದಾರೆ. ಸ್ನಾತಕೋತ್ತರ ಪದವಿ ಪಡೆದವರು ಸಹಾ ಟೀ ಅಂಗಡಿ ನಡೆಸುವ ಕಾಲ ಇದು. ಈಗ ಈ ವಿಷಯ ಏಕೆ ಅಂತೀರಾ? ಅದಕ್ಕೊಂದು ಕಾರಣ ಇದೆ.

ಹೌದು, ಇತ್ತೀಚಿನ ದಿನಗಳಲ್ಲಿ ಮುಂಬೈನ(Mumbai) ಬಿ.ಟೆಕ್ ಪದವೀಧರೆಯಾಗಿರುವ ತಾಪ್ಸಿ(Tapsi Upadhyay) ಎನ್ನುವ 21 ರ ಹರೆಯದ ಯುವತಿಯ ವಿಚಾರವಾಗಿ ಸಾಕಷ್ಟು ಸುದ್ದಿಗಳು ಮಾದ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದನ್ನು ಮಾಡುತ್ತಿದೆ. ಇದಕ್ಕೆ ಪ್ರಮುಖ ಕಾರಣ ಏನು ಎನ್ನುವುದಾದರೆ ಬಿ.ಟೆಕ್(B.Tech) ಪದವಿ ಪಡೆದಿರುವ ಈ ಯುವತಿ ಮಾಡುತ್ತಿರುವ ಉದ್ಯೋಗವೇ ಆಗಿದೆ. ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಬಿ ಟೆಕ್ ಪಾನೀಪೂರಿ ವಾಲಿ (B. Tech Panipuri wali) ಎಂದೇ ಸುದ್ದಿಯಾಗಿರುವ ಈ ಯುವತಿಯ ಪೂರ್ತಿ ಹೆಸರು ತಾಪ್ಸಿ ಉಪಾಧ್ಯಾಯ್ ಎಂದಾಗಿದೆ.

ತಾಪ್ಸಿ ಉಪಾಧ್ಯಾಯ್ ಬಿ ಟೆಕ್ ಪದವೀಧರೆ, ಆದರೆ ಪ್ರಸ್ತುತ ಈಕೆ ತೊಡಗಿಕೊಂಡಿರುವುದು ಪಾನೀಪೂರಿ (Golgappa) ಮಾರಾಟದಲ್ಲಿ. ಮುಂಬೈ ಮಹಾನಗರದಲ್ಲಿ ಈಕೆ ಬಿಟೆಕ್ ಪಾನೀಪೂರಿ ವಾಲಿ ಮಾತ್ರವೇ ಅಲ್ಲದೇ ಬುಲೆಟ್ ರಾಣಿ ಎಂದು ಕೂಡಾ ಫೇಮಸ್ ಆಗಿದ್ದಾರೆ. ತಾಪ್ಸಿ ತಮ್ಮ ಬುಲೆಟ್ ನ ಹಿಂಭಾಗದಲ್ಲಿ ಸ್ವಲ್ಪ ಬದಲಾವಣೆಗಳನ್ನು ಮಾಡಿಸಿಕೊಂಡು ಪಾನಿ ಪೂರಿ ಮಾರಲು ಬೇಕಾದಂತೆ ಅದನ್ನು ನವೀಕರಣ ಮಾಡಿಕೊಂಡಿದ್ದಾರೆ. ತಾಪ್ಸಿ ಬೈಕ್ ನಲ್ಲಿ ಹೋಗುವಾಗ ಆಕೆಯ ಪಾನೀಪೂರಿ ಗಾಡಿ ಜನರ ಗಮನವನ್ನು ಸೆಳೆಯುತ್ತದೆ.

ಇನ್ನು ತಾಪ್ಸಿ (tapsi)ಇಂತಹುದೊಂದು ಕೆಲಸವನ್ನು ಪ್ರಾರಂಭಿಸಿರುವುದನ್ನು ನೋಡಿದ ಅನೇಕರು ಆಕೆಗೆ ಆರಾಮಾಗಿ ಮನೆಯಲ್ಲಿ ಇರುವುದು ಬಿಟ್ಟು ಇಂತ ಕೆಲಸ ಏಕೆ? ಎಂದಿದ್ದಾರೆ. ಅಲ್ಲದೇ ಇನ್ನೂ ಕೆಲವರು ಓದಿಗೆ ತಕ್ಕ ಉದ್ಯೋಗ ಮಾಡುವಂತೆಯೂ ಸಲಹೆ ನೀಡಿದ್ದಾರೆ. ಆದರೆ ತಾಪ್ಸಿ ತನ್ನ ಇಚ್ಚೆಗನುಗುಣವಾಗಿ ತನ್ನಿಷ್ಟದ ಕೆಲಸವನ್ನು ಮಾಡುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ತಾಪ್ಸಿ ವೀಡಿಯೋ ವೈರಲ್ ಆಗಿದ್ದು, ಅನೇಕರು ಯುವತಿಯ ಧೈರ್ಯಕ್ಕೆ ಮೆಚ್ಚುಗೆಗಳನ್ನು ನೀಡಿದ್ದಾರೆ.

Leave a Comment