ಬಿಗ್ ಬಾಸ್ ಮನೆಯಿಂದ ಪ್ರಶಾಂತ್ ಸಂಬರ್ಗಿಗೆ ಗೇಟ್ ಪಾಸ್: ಪ್ರಶಾಂತ್ ಗೇಮ್ ಗೆ ಬ್ರೇಕ್ ಹಾಕಿದ ಪ್ರೇಕ್ಷಕರು

Written by Soma Shekar

Published on:

---Join Our Channel---

ಬಿಗ್ ಬಾಸ್ ಕನ್ನಡ (Big Boss Kannada) ಸೀಸನ್ 9 ರಲ್ಲಿ ಪ್ರವೀಣ ಸ್ಪರ್ಧಿಯಾಗಿ ಮನೆಗೆ ಎಂಟ್ರಿ ನೀಡಿದವರು ಪ್ರಶಾಂತ್ ಸಂಬರ್ಗಿ (Prashant Sambargi). ಅವರು ಸೀಸನ್ ಎಂಟರಲ್ಲಿ ಸಹಾ ಸಖತ್ ಸದ್ದು ಮಾಡಿದ್ದರು. ಈ ಬಾರಿ ಸಹಾ ಮನೆಯಲ್ಲಿ ಪ್ರತಿದಿನ ಒಂದಲ್ಲಾ ಒಂದು ವಿಷಯವಾಗಿ ಮಾತನಾಡುತ್ತಿದ್ದ ಸ್ಪರ್ಧಿ ಎಂದರೆ ಪ್ರಶಾಂತ್ ಸಂಬರ್ಗಿ. ಮನೆಯಲ್ಲಿ ನಡೆದಂತಹ ಹತ್ತು ಹಲವು ಚರ್ಚೆಗಳಲ್ಲಿ ಪ್ರಶಾಂತ್ ಸಂಬರ್ಗಿ(Prashant Sambargi) ಹೈಲೈಟ್ ಆಗ್ತಾ ಇದ್ದರು. ಆದರೆ ಇದೀಗ ಹನ್ನೆರಡನೆಯ ವಾರಕ್ಕೆ ಪ್ರಶಾಂತ್ ಸಂಬರ್ಗಿ ಅವರ ಬಿಗ್ ಬಾಸ್ (Big Boss) ಮನೆಯ ಆಟಕ್ಕೆ ಬ್ರೇಕ್ ಬಿದ್ದಿದೆ. ಅವರ ಮಾತಿಗೂ ಸಹಾ ಇನ್ನು ಬಿಗ್ ಬಾಸ್ ಮನೆಯಲ್ಲಿ ಮೌನ ಆವರಿಸಿದೆ.

ಬಿಗ್ ಬಾಸ್ (Big Boss) ಸೀಸನ್ ಎಂಟರಲ್ಲಿ ಪ್ರಶಾಂತ್ ಸಂಬರ್ಗಿ(Prashant Sambargi) ಮನೆಯ ಪ್ರಬಲ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದವರು. ಅದೇ ಹಿನ್ನೆಲೆಯ ಕಾರಣದಿಂದಲೇ ಈ ಬಾರಿ ಅವರು ಬಿಗ್ ಬಾಸ್ (Kannada Big Boss) ಸೀಸನ್ ಒಂಬತ್ತಕ್ಕೆ (Season 9) ಪ್ರವೀಣರ ಸಾಲಿನಲ್ಲಿ ಮನೆಗೆ ಎರಡನೇ ಬಾರಿಗೆ ಸ್ಪರ್ಧಿಯಾಗಿ ಎಂಟ್ರಿ ನೀಡುವ ಅದ್ಭುತ ಅವಕಾಶವನ್ನು ಪಡೆದುಕೊಂಡರು. ಈ ಸೀಸನ್ ನಲ್ಲೂ ಸಹಾ ಅವರು ಪ್ರಬಲ ಸ್ಪರ್ಧಿಯಾಗಿಯೇ ಗುರುತಿಸಿಕೊಂಡರು. ಫಿನಾಲೆ ತಲುಪುತ್ತಾರೆ ಎನ್ನುವಂತೆ ಕಂಡಿದ್ದರು.

ಬಿಗ್ ಬಾಸ್ (Big Boss) ಮನೆಯಲ್ಲಿ ಅವರು ಆಡಿದ ಕೆಲವು ಮಾತುಗಳಿಂದ ಹೊರಗೆ ದೊಡ್ಡ ವಿ ವಾ ದಗಳು ಸಹಾ ಹುಟ್ಟಿಕೊಂಡಿತ್ತು. ಇನ್ನು ಬಿಗ್ ಬಾಸ್ ನ ಈ ಸೀಸನ್ ಹನ್ನೆರಡು ವಾರಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ಹನ್ನೆರಡನೆಯ ವಾರಾಂತ್ಯಕ್ಕೆ ಪ್ರಶಾಂತ್ ಸಂಬರ್ಗಿ ಆಟಕ್ಕೆ ಬ್ರೇಕ್ ಬಿದ್ದಿದ್ದು ಎಲಿಮಿನೇಟ್ (Eliminate) ಆಗಿದ್ದಾರೆ. ಬಿಗ್ ಬಾಸ್ ಎರಡನೇ ಬಾರಿಗೆ ಚಾನ್ಸ್ ನೀಡಿದ್ದ ಪ್ರಶಾಂತ್ ಸಂಬರ್ಗಿ ತಮಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡು ಹನ್ನೆರಡು ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇದ್ದರು. ಆದರೆ ಅದೇಕೋ ಪ್ರೇಕ್ಷಕರು ಈ ವಾರ ಅವರನ್ನು ಹೊರಗೆ ಬರುವಂತೆ ಮಾಡಿದ್ದು, ಪ್ರಶಾಂತ್ (Prashant) ಅವರ ಬಿಗ್ ಬಾಸ್ ಆಟಕ್ಕೆ ಪೂರ್ಣ ವಿರಾಮವನ್ನು ಹಾಕಿದ್ದಾರೆ.

Leave a Comment