ಬಿಗ್ ಬಾಸ್ ಮನೆಯಲ್ಲಿ ಸೋನುನ ಮರೆತ ರಾಕೇಶ್: ಅಮೂಲ್ಯ, ರಾಕೇಶ್ ಸ್ನೇಹ ಪ್ರೇಕ್ಷಕರ ಮೇಲೆ ಮಾಡುತ್ತಾ ಮೋಡಿ?

Written by Soma Shekar

Published on:

---Join Our Channel---

ಒಂದು ಕಡೆ ಓಟಿಟಿ ಕನ್ನಡ ಬಿಗ್ ಬಾಸ್ ನ ಮೊದಲ ಸೀಸನ್ ಮುಗಿದ ಕೂಡಲೇ, ಕೆಲವೇ ದಿನಗಳ ಅಂತರದಲ್ಲಿ ಟಿವಿ ಯಲ್ಲಿ ಬಿಗ್ ಬಾಸ್ ಕನ್ನಡ ಹೊಸ ಸೀಸನ್ ಪ್ರಾರಂಭವಾಗಿದ್ದು, ಸಖತ್ ಸದ್ದು ಮಾಡುತ್ತಿದೆ. ನಾಲ್ಕು ಜನ ಸ್ಪರ್ಧಿಗಳು ಓಟಿಟಿಯಿಂದ ಆಯ್ಕೆಯಾಗಿ ಟಿವಿ ಬಿಗ್ ಬಾಸ್ ಗೂ ಸ್ಪರ್ಧಿಗಳಾಗಿ ಬರುವ ವಿಷಯ ಪ್ರೇಕ್ಷಕರಿಗೆ ಮೊದಲೇ ತಿಳಿದಿತ್ತು. ಉಳಿದಂತೆ ಹಿಂದಿನ ಸೀಸನ್ ಗಳ ಯಾವ ಸ್ಪರ್ಧಿಗಳು ಪ್ರವೀಣರ ಸ್ಥಾನದಲ್ಲಿ ಬರುವರು ಮತ್ತು ಯಾರೆಲ್ಲಾ ಹೊಸ ಸ್ಪರ್ಧಿಗಳಾಗಿ ಬಿಗ್ ಬಾಸ್ ಮನೆಯನ್ನು ಪ್ರವೇಶ ಮಾಡುತ್ತಾರೆ ಎನ್ನುವ ಪ್ರೇಕ್ಷಕರ ಕುತೂಹಲಕ್ಕೆ ಈಗಾಗಲೇ ತೆರೆ ಬಿದ್ದಾಗಿದೆ. ಇದೀಗ ಬಿಗ್ ಬಾಸ್ ಮನೆಯಲ್ಲಿ ಮನೆಯ ಸದಸ್ಯರು ಆಟ ಶುರುವಾಗಿದ್ದು, ಮನೆಯ ಸದಸ್ಯರ ನಡುವೆ ಪರಿಚಯಗಳು ನಡೆಯುತ್ತಾ, ಸ್ನೇಹ ಚಿಗುರೊಡೆಯುತ್ತಿದೆ.

ಈಗ ಅಂತಹುದೊಂದು ಸ್ನೇಹ ಓಟಿಟಿ ಬಿಗ್ ಬಾಸ್ ನಿಂದ ಟಿವಿ ಬಿಗ್ ಬಾಸ್ ಗೆ ಪ್ರವೇಶ ನೀಡಿರುವ ನಟ ರಾಕೇಶ್ ಅಡಿಗ ಮತ್ತು ಕಿರುತೆರೆಯ ಜನಪ್ರಿಯ ನಟಿ ಅಮೂಲ್ಯ ಗೌಡ ನಡುವೆ ಬೆಸೆದಂತೆ ಕಾಣುತ್ತಿದೆ. ಅಮೂಲ್ಯ ಗೌಡ ಅವರು ಪಾತ್ರೆ ತೊಳೆಯುವಾಗ ರಾಕೇಶ್ ಆಡಿಗ ಅವರೊಂದಿಗೆ ಮಾತನಾಡುತ್ತಾ, ಗಾಡಿ ಕಳೆಯುತ್ತಿದ್ದೀರಾ ಎಂದು ತಮಾಷೆ ಮಾಡಿದ್ದಾರೆ. ಅಮೂಲ್ಯ ಮತ್ತು ರಾಕೇಶ್ ನಡುವಿನ ಮಾತುಕತೆ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆಯನ್ನು ನೀಡಿದೆ. ಜನರಿಗೆ ಅವರ ಮಾತುಕತೆ ಇಷ್ಟವಾಗಿದೆ ಮತ್ತು ಅವರಿಬ್ಬರ ನಡುವಿನ ಮಾತುಕತೆ ಗಮನಸೆಳೆಯುತ್ತಿದೆ.

ರಾಕೇಶ್ ಪಾತ್ರೆ ತೊಳೆಯುತ್ತಾ ಇರುವ ವೇಳೆಯಲ್ಲಿ ಅಲ್ಲಿದ್ದ ಅಮೂಲ್ಯ ಗೌಡ ಅವರನ್ನು, ನೀವು ಕೆಲಸ ಮಾಡುತ್ತೀರಾ ಎಂದು ಕೇಳಿದ್ದಾರೆ ರಾಕೇಶ್. ಅದಕ್ಕೆ ಉತ್ತರ ನೀಡಿದ ಅಮೂಲ್ಯ, ಫ್ರೀ ಇದ್ದಾಗ ತಾನು ಎಲ್ಲಾ ಕೆಲಸವನ್ನು ಮಾಡುತ್ತೇನೆ ಎಂದು ಹೇಳಿದ್ದಾರೆ. ಆಗ ರಾಕೇಶ್ ಮತ್ತೊಂದು ಪ್ರಶ್ನೆಯನ್ನು ಕೇಳುತ್ತಾ, ಹಬ್ಬದ ಸಮಯದಲ್ಲಿ ಕೆಲಸ ಮಾಡುತ್ತೀರಾ ಎಂದಿದ್ದಾರೆ. ನಂತರ ಅಮೂಲ್ಯ ಅವರು ಪಾತ್ರೆ ತೊಳೆಯುವಾಗ ಮತ್ತೆ ಮಾತು ಬೆಳೆಸಿದ ರಾಕೇಶ್ ಅಡಿಗ, ಅಮೂಲ್ಯ ಅವರು ಪಾತ್ರೆ ತೊಳೆಯುವ ಶೈಲಿಯನ್ನು ನೋಡಿ, ನೀವು ಗಾಡಿ ಹೊಡೆಯುತ್ತಿದ್ದಾರೆ ಎಂದು ಕಾಲೆಳೆದಿದ್ದಾರೆ.

ರಾಕೇಶ್ ಆಡಿದ ಮಾತಿಗೆ ಅಮೂಲ್ಯ ಕೂಡಾ ಸ್ಮೈಲ್ ಕೊಟ್ಟು ಸುಮ್ಮನಾಗಿದ್ದಾರೆ.. ಕೆಲವೇ ದಿನಗಳ ಹಿಂದೆ ಓಟಿಟಿ ಬಿಗ್ ಬಾಸ್ ನಲ್ಲಿ ರಾಕೇಶ್ ಅಡಿಗ ಮತ್ತು ಸೋನು ಶ್ರೀನಿವಾಸಗೌಡ ನಡುವಿನ ಸಂಭಾಷಣೆಗಳು ಪ್ರೇಕ್ಷಕರಿಗೆ ಸಾಕಷ್ಟು ಮನರಂಜನೆಯನ್ನು ನೀಡಿದ್ದವು. ಅವರಿಬ್ಬರ ಕುರಿತಾಗಿ ಸಾಕಷ್ಟು ಸುದ್ದಿ ಗಳಾಗಿದ್ದವು. ಆದರೆ ಸೋನುಗೆ ಟಿವಿ ಬಿಗ್ ಬಾಸ್ ಪ್ರವೇಶ ಮಾಡುವ ಅವಕಾಶ ಸಿಗಲಿಲ್ಲ. ಮನೆಯನ್ನು ಪ್ರವೇಶಿಸಿರುವ ರಾಕೇಶ್ ಮತ್ತು ಅಮೂಲ್ಯ ಅವರ ನಡುವೆ ಮುಂದಿನ ದಿನಗಳಲ್ಲಿ ಸ್ನೇಹ ಬೆಳೆದು ಅವರ ಜೋಡಿ ಪ್ರೇಕ್ಷಕರ ಮೇಲೆ ಮೋಡಿ ಮಾಡಲಿದೆಯಾ ಎನ್ನುವುದನ್ನು ಕಾದುನೋಡಬೇಕಾಗಿದೆ.

Leave a Comment