ಬಿಕಿನಿಯಲ್ಲಿ ಹಿಂದೂ ದೇವತೆಗಳ ಚಿತ್ರ ಹಾಕಿ ಹಿಂದೂಗಳ ಧಾರ್ಮಿಕ ಭಾವನೆ ಕೆಣಕಿದ ಕಂಪನಿ: ಜೀಸಸ್ ಫೋಟೋ ಏಕಿಲ್ಲ ಎಂದ ನೆಟ್ಟಿಗರು

Written by Soma Shekar

Published on:

---Join Our Channel---

ಧಾರ್ಮಿಕ ವಿಚಾರಗಳಲ್ಲಿ ಇತ್ತೀಚಿನ ದಿನಗಳಲ್ಲಿ ಕೆಲವರು ವ್ಯಂಗ್ಯ ವಾಡುವುದು ಅದೇಕೋ ಉದ್ದಟತನವಾಗುತ್ತಾ ಸಾಗಿದೆ. ಈಗಾಗಲೇ ಸೀರೆಗಳ ಮೇಲೆ, ಪಾದರಕ್ಷೆಗಳ ಮೇಲೆ ಹಿಂದೂ ದೇವತೆಗಳ ಚಿತ್ರಗಳನ್ನು ಬಳಸುವ ಮೂಲಕ ಕೆಲವೊಂದು ಕಂಪನಿಗಳು ವಿ ವಾ ದಗಳನ್ನು ಮೈ ಮೇಲೆ ಎಳೆದುಕೊಂಡಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ. ಈಗ ಮತ್ತೊಮ್ಮೆ ಭಾರತೀಯರ ಧಾರ್ಮಿಕ ಭಾವನೆಗಳನ್ನು ವ್ಯಂಗ್ಯ ಮಾಡುವ, ಭಾರತೀಯರ ನಂಬಿಕೆಗಳನ್ನು ಅ ವ ಹೇಳ ನ ಮಾಡಿ ಭಾರತೀಯಯ ಭಾವನೆಗಳಿಗೆ ನೋವುಂಟು ಮಾಡುವ ಹೊಸ ಘಟನೆಯೊಂದು ನಡೆದಿದೆ.

ಈ ಬಾರಿ ಬಿಕಿನಿಯಲ್ಲಿ ಹಿಂದೂ ದೇವತೆಗಳ ಫೋಟೋವನ್ನು ಪ್ರಿಂಟ್ ಮಾಡುವ ಅಸಂಖ್ಯಾತ ಹಿಂದೂಗಳ ಭಾವನೆಗೆ ನೋವನ್ನು ಉಂಟು ಮಾಡುವ ಉದ್ದಟತನವನ್ನು ಮೆರೆಯಲಾಗಿದೆ. ಸಹಾರಾ ರೇ ಸ್ವಿಮ್ ಎನ್ನುವ ಹೆಸರಿನ ಒಂದು ಬಟ್ಟೆ ಕಂಪನಿಯು ಇಂತಹುದೊಂದು ಉದ್ದಟತ‌ನವನ್ನು ಮೆರೆದಿದ್ದು, ಈಗ ವಿ ವಾ ದಕ್ಕೆ ಸಿಲುಕಿದೆ. ಈ ಕಂಪನಿ ಹೊಸದಾಗಿ ಬಿಡುಗಡೆ ಮಾಡಿರುವ ಸ್ವಿಮ್ ಸೂಟ್ ನಲ್ಲಿ ಹಿಂದೂ ದೇವತೆಗಳ ಚಿತ್ರವನ್ನು ಬಳಕೆ ಮಾಡಿದೆ.

ಇನ್ನು ಹಿಂದೂ ದೇವತೆಗಳ ಚಿತ್ರ ಇರುವ ಈ ಒಳ ಉಡುಪುಗಳನ್ನು ರೂಪದರ್ಶಿಯೊಬ್ಬರು ಧರಿಸಿ ಮಾಡಿರುವ ಫೋಟೋ ಶೂಟ್ ನ ಫೋಟೋಗಳನ್ನು ದಿ ಟ್ರೈಡೆಂಟ್ ಎನ್ನುವ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಈಗ ಸೌಂದರ್ಯ ಶಾಸ್ತ್ರದ‌ ಹೆಸರಿನಲ್ಲಿ ಅವರು ಬಿ ಕಿ ನಿ ಬಾಟಮ್ಸ್ ಮತ್ತು ಟಾಪ್ ಗಳಲ್ಲಿ ಹಿಂದೂ ದೇವರುಗಳನ್ನು ಪ್ರಿಂಟ್ ಮಾಡುತ್ತಿದ್ದಾರೆ. ಇದು ಸಹಾರಾ ರೇ ಅವರ ಸ್ವಿಮ್ ಸೂಟ್ ಕಂಪನಿ. ಜಸ್ಟಿನ್ ಅವರ ಮಾಜಿ. ಇದು ಕೇವಲ ವಿನ್ಯಾಸಕ್ಕಾಗಿಯೇ? ಅಥವಾ ಇದರ ಹಿಂದೆ ಬೇರೆ ಉದ್ದೇಶ ಇದೆಯಾ??

ಅವರು ಅಷ್ಟೊಂದು ಧಾರ್ಮಿಕ ನಂಬಿಕೆ ಉಳ್ಳವರಾದರೆ ಇದರ ಮೇಲೆ ಜೀಸನ್ ಚಿತ್ರವನ್ನು ಏಕೆ ಮುದ್ರಿಸಿಲ್ಲ? ಎಂದು ಬರೆದುಕೊಂಡು ಪ್ರಶ್ನೆ ಮಾಡಿದ್ದಾರೆ. ಈ ಫೋಟೋಗಳು ಈಗ ವೈರಲ್ ಆಗಿದ್ದು, ನೆಟ್ಟಿಗರು ಸಿಟ್ಟನ್ನು ಹೊರಹಾಕಿದ್ದಾರೆ. ಹಿಂದೂ ದೇವರುಗಳ ಹೆಸರಿನಲ್ಲಿ ಇಂತಹ ಹೀನ ಕೃತ್ಯಗಳನ್ನು ಮಾಡುವ ಕಿಡಿಗೇಡಿ ಕಂಪನಿಗಳಿಗೆ ಧಾರ್ಮಿಕ ವಿಚಾರಗಳ ಬಗ್ಗೆ ಅಷ್ಟೊಂದು ಪ್ರೀತಿ ಇದ್ದರೆ ಅವರ ಧರ್ಮದ ದೇವರುಗಳ ಫೋಟೋಗಳನ್ನು ಏಕೆ ಬಳಸಬಾರದೆಂದು ಆ ಕ್ರೋ ಶ ಹೊರ ಹಾಕುತ್ತಿದ್ದಾರೆ.

Leave a Comment