ಸಿನಿಮಾಗಿಂತ ಬಾಯ್ ಫ್ರೆಂಡ್ ಮುಖ್ಯ: ಶೃತಿ ಹಾಸನ್ ವರ್ತನೆ ಕಂಡು ಸಿಡಿದೆದ್ದ ಸಿನಿ ಪ್ರಿಯರು, ನಟಿ ಮಾಡಿದ್ದೇನು?

Written by Soma Shekar

Published on:

---Join Our Channel---

ನಟಿ ಶ್ರುತಿ ಹಾಸನ್(Shruti Hasan) ಗೆ ಇದು ಬಹಳ ವಿಶೇಷವಾದ ಸಮಯ, ಏಕೆಂದರೆ ಈ ವಾರದಲ್ಲಿ ನಟಿಯ ಎರಡು ಸಿನಿಮಾಗಳು ತೆರೆಗೆ ಬಂದಿವೆ. ಎರಡೂ ಸಿನಿಮಾಗಳು ಕೂಡಾ ಟಾಲಿವುಡ್ ನ ದಿಗ್ಗಜ ನಟರ ಜೊತೆಗೆ ಎನ್ನುವುದು ವಿಶೇಷ. ಟಾಲಿವುಡ್ ನ ಹಿರಿಯ ಸ್ಟಾರ್ ನಟ ನಂದಮೂರಿ ಬಾಲಕೃಷ್ಣ(Nandamuri Balakrishna) ನಾಯಕನಾಗಿರುವ ವೀರ ಸಿಂಹಾ ರೆಡ್ಡಿ (Veera Simha Reddy) ಮತ್ತು ಮೆಗಾಸ್ಟಾರ್ ಚಿರಂಜೀವಿ(Mega star Chiranjeevi) ನಾಯಕನಾಗಿರುವ ವಾಲ್ತೇರು ವೀರಯ್ಯ(Walteru Veerayya) ಈ ಎರಡು ಸಿನಿಮಾಗಳಲ್ಲಿ ಕೂಡಾ ಶೃತಿ ಹಾಸನ್ ನಾಯಕಿಯಾಗಿದ್ದಾರೆ.

ಎರಡೂ ಸಿನಿಮಾಗಳು ಸಹಾ ಸಂಕ್ರಾಂತಿ ವಿಶೇಷವಾಗಿ ಒಂದು ದಿನದ ಅಂತರದಲ್ಲಿ ತೆರೆಗೆ ಬಂದಿದೆ. ಎರಡು ಸಿನಿಮಾಗಳು ತೆರೆಗೆ ಬರುವ ಸಂದರ್ಭದಲ್ಲಿ ನಟಿ ಶೃತಿ ಹಾಸನ್(shruti hasan) ಮಾಡಿರುವ ಕೆಲಸಕ್ಕೆ ಈಗ ನೆಟ್ಟಿಗರು ಮತ್ತು ಸಿನಿ ಪ್ರೇಮಿಗಳು ಸಿಟ್ಟಾಗಿದ್ದಾರೆ. ಹೌದು, ನಟಿ ಸಿನಿಮಾ ಪ್ರಮೋಷನ್ ಕೆಲಸಗಳಿಗೆ ಹಾಜರಾಗದೇ ಮುಂಬೈನಲ್ಲಿ ತಮ್ಮ ಬಾಯ್ ಫ್ರೆಂಡ್ ಜೊತೆ ಸುತ್ತಾಟ ನಡೆಸಿರುವುದು ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ. ವಾಲ್ತೇರು ವೀರಯ್ಯ ಸಿನಿಮಾ ಪ್ರಿ ರಿಲೀಸ್ ಫಂಕ್ಷನ್ ಗೆ ಶೃತಿ ಹಾಸನ್ ಹಾಜರಾಗಿರಲಿಲ್ಲ.

ಇದರಿಂದ ಕೆಲವು ಕಡೆ, ನಟಿಗೆ ಮಾನಸಿಕ ಆರೋಗ್ಯ ಸರಿಯಿಲ್ಲದ ಕಾರಣ ಹಾಜರಾಗಿಲ್ಲ ಎನ್ನುವ ವರದಿಗಳು ಸಹಾ ಆಗಿತ್ತು. ಅನಂತರ ಪ್ರತಿಕ್ರಿಯೆ ನೀಡಿದ್ದ ನಟಿ ಅನಾರೋಗ್ಯದ ಕಾರಣದಿಂದ ತಾನು ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ ಎನ್ನುವ ಮಾತನ್ನು ಹೇಳಿದ್ದಾರೆ. ಆದರೆ ಶಾ ಕಿಂ ಗ್ ವಿಚಾರ ಏನೆಂದರೆ ವಾಲ್ತೇರು ವೀರಯ್ಯ ಕಾರ್ಯಕ್ರಮ ಇದ್ದ ದಿನವೇ ಶೃತಿ ಹಾಸನ್ ತಮ್ಮ ಬಾಯ್ ಫ್ರೆಂಡ್ ಶಂತನು (Shantanu) ಜೊತೆಗೆ ಮುಂಬೈನಲ್ಲಿ(Mumbai) ಸುತ್ತಾಡಿದ್ದರು.

ನಟಿಯ ಫೋಟೊಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ನಟಿ ಹಂಚಿಕೊಂಡ ಫೋಟೋಗಳನ್ನು ನೋಡಿ ಅನೇಕರು ಸಿಟ್ಟಾಗಿದ್ದಾರೆ. ನಟಿ ತಾನು ನಟಿಸಿರುವ ವಾಲ್ತೇರು ವೀರಯ್ಯ ಸಿನಿಮಾ ಬಗ್ಗೆ ಆಗಲೀ, ವೀರ ಸಿಂಹಾ ರೆಡ್ಡಿ ಸಿನಿಮಾ ಬಗ್ಗೆ ಆಗಲೀ ಒಂದು ಮಾತು ಆಡಿಲ್ಲ, ಒಂದು ಪೋಸ್ಟ್ ಹಂಚಿಕೊಂಡಿಲ್ಲ, ತಮ್ಮ ಅಭಿಮಾನಿಗಳಿಗೆ ಸಿನಿಮಾ ನೋಡಿ ಎಂದು ಹೇಳಿಲ್ಲ ಎನ್ನುವುದು ಈಗ ನೆಟ್ಟಿಗರ ಸಿಟ್ಟು ಮತ್ತು ಅಸಮಾಧಾನಕ್ಕೆ ಕಾರಣವಾಗಿದೆ.

ಅನೇಕರು ಸಿಟ್ಟಿನಿಂದ ಕಾಮೆಂಟ್ ಗಳನ್ನು ಸಹಾ ಮಾಡಿದ್ದಾರೆ.‌ ತೆಲುಗು ಸಿನಿಮಾ ಎನ್ನುವ ಕಾರಣದಿಂದಲೇ ಶೃತಿ ಹಾಸನ್(Shruti Hasan) ಇಂತಹುದೊಂದು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ಅದೇ ತಮಿಳು ಸಿನಿಮಾ ಆಗಿದಿದ್ದರೆ ನಟಿ ಸಿನಿಮಾ ಪ್ರಚಾರ ಕಾರ್ಯಗಳಲ್ಲಿ ಭಾಗವಹಿಸುತ್ತಿದ್ದರು ಎನ್ನುವ ಮಾತುಗಳು ಸಹಾ ಕೇಳಿ ಬಂದಿದೆ. ಪ್ರಭಾಸ್ ಅಭಿನಯದ ಹೊಸ ಸಿನಿಮಾ ಸಲಾರ್ ನಲ್ಲೂ ಸಹಾ ಶೃತಿ ನಾಯಕಿಯಾಗಿದ್ದಾರೆ ಎನ್ನುವುದು ಸಹಾ ವಿಶೇಷವಾಗಿದೆ.

Leave a Comment