‘ಪ್ರೂವ್ ಮಾಡಿದ್ರೆ ನೇಣಿಗೆ ಸಿದ್ಧ’ ಪ್ರಶಾಂತ್ ಸಂಬರ್ಗಿಗೆ ರೂಪೇಶ್ ರಾಜಣ್ಣ ಸವಾಲ್: ಇಷ್ಟಕ್ಕೂ ಈ ಸವಾಲ್ ಯಾಕೆ?

Written by Soma Shekar

Published on:

---Join Our Channel---

ಕನ್ನಡ ಬಿಗ್ ಬಾಸ್ ಸೀಸನ್ 9 ಭರ್ಜರಿ ಮನರಂಜನೆ ನೀಡುತ್ತಿದೆ. ಇದೇ ವೇಳೆ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ಮಾತಿನ ಚಕಮಕಿಯ ವಿಚಾರಕ್ಕೆ ಬಂದರೆ ಬಹಳಷ್ಟು ಜನರ ನಡುವೆ ಇದು ನಡೆದಿದೆಯಾದರೂ, ಇಲ್ಲಿ ಪ್ರಮುಖವಾಗಿ ಕೇಳಿ ಬರುವ ಎರಡು ಹೆಸರುಗಳೆಂದರೆ ರೂಪೇಶ್ ರಾಜಣ್ಣ ಮತ್ತು ಪ್ರಶಾಂತ್ ಸಂಬರ್ಗಿ ಅವರದ್ದಾಗಿದೆ. ಬಿಗ್ ಬಾಸ್ ಆರಂಭದಿಂದಲೂ ಸಹಾ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಮತ್ತು ಪ್ರಶಾಂತ್ ಸಂಬರ್ಗಿ ನಡುವೆ ಒಂದಲ್ಲಾ ಒಂದು ವಿಚಾರಕ್ಕೆ ಜಗಳ ನಡೆಯುತ್ತಲೇ ಇದೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಅಲ್ಲಿ ಅವರು ವೈಯಕ್ತಿಕ ವಿಚಾರಗಳನ್ನು ಮಾತನಾಡಿಕೊಂಡು ಕ್ಯಾಮರಾ ಮುಂದೆ ತಮ್ಮ ಗೌರವ ತಾವೇ ಕಳೆದುಕೊಳ್ಳುವಂತೆ ಮಾತನಾಡುತ್ತಿದ್ದಾರೆ.

ಮನೆಯ ಕ್ಯಾಪ್ಟನ್ ಆಯ್ಕೆಗಾಗಿ ನಡೆದಿರುವ ಕ್ಯಾಪ್ಟನ್ಸಿ ಟಾಸ್ಕ್ ಚಿನ್ನದ ಗಣಿ ಟಾಸ್ಕ್ ನ ವೇಳೆ ಇಬ್ಬರ ನಡುವೆ ಮತ್ತೊಮ್ಮೆ ಮಾತಿನ ಚಕಮಕಿ ನಡೆದಿದೆ. ಇಬ್ಬರೂ ಗಲಾಟೆ ಮಾಡಿಕೊಂಡಿದ್ದಾರೆ. ಟಾಸ್ಕ್ ನಲ್ಲಿ ವಿಸರ್ಜಕರ ಜೊತೆ ಡೀಲ್ ಮಾಡಿಕೊಂಡು ಪ್ರಶಾಂತ್ ಸಂಬರ್ಗಿಯನ್ನು ರೂಪೇಶ್ ರಾಜಣ್ಣ ಮತ್ತು ರೂಪೇಶ್ ರಾಜಣ್ಣ ಅವರನ್ನು ಪ್ರಶಾಂತ್ ಸಂಬರ್ಗಿ ಔಟ್ ಮಾಡಿದರು. ಹೀಗೆ ಗೇಮ್ ನಿಂದ ಹೊರ ಬಂದ ಮೇಲೆ ಗೇಮ್ ನ ಈ ಬೆಳವಣಿಗೆಯ ವಿಚಾರವಾಗಿ ಅವರ ನಡುವೆ ಮಾತಿಗೆ ಮಾತು ಬೆಳೆದು ಅದು ತಾರಕಕ್ಕೇರಿ ಮನೆಯ ವಾತಾವರಣವನ್ನೇ ಬದಲಾಯಿಸಿ ಹಾಕಿತು.

ರೂಪೇಶ್ ರಾಜಣ್ಣ ಮಾತನಾಡುತ್ತಾ ಕುತಂತ್ರಿ ಬುದ್ಧಿಯಿಂದ ತನ್ನನ್ನು ಔಟ್ ಮಾಡಿಸಿದರು ಎಂದು ಕೂಗಾಡಿದರು. ಸಂಬರ್ಗಿಯನ್ನು ಹೇಡಿ, ರಾಜಾ ಇಲಿ ಎಂದರು. ಅನಂತರ ಪ್ರಶಾಂತ್ ಸಂಬರ್ಗಿ, ಡಬ್ಬಾ ನನ್ ಮಗ, ಹೆದರುಪುಕ್ಲ ರೂಪೇಶ್ ರಾಜಣ್ಣ, ಯಾರ್ಯಾರ ಬಳಿ ರೋಲ್ ಮಾಡಿದ್ದಾರೋ ಏನೋ, ಕನ್ನಡದ ಕಂದ, ಹೇಡಿ ಎಂದೆಲ್ಲಾ ಜರಿದಿದ್ದಾರೆ.‌ ರೋಲ್ ಕಾಲ್ ವಿಚಾರ ಕೇಳಿ ರೂಪೇಶ್ ರಾಜಣ್ಣ ಅವರ ಸಿಟ್ಟು ನೆತ್ತಿಗೇರಿತ್ತು. ಪ್ರಶಾಂತ್ ಕಡೆ ಕೋಪದಿಂದ ನೋಡಿದ ರೂಪೇಶ್ ರಾಜಣ್ಣ ಪ್ರಶಾಂತ್ ಸಂಬರ್ಗಿ ಮಾತಿಗೆ ಖಾರವಾದ ಪ್ರತಿಕ್ರಿಯೆ ನೀಡಿದ್ದಾರೆ.‌

ರೂಪೇಶ್ ರಾಜಣ್ಣ ಕೋಪದಿಂದ ಮಾತನಾಡುತ್ತಾ, ನಾನೇನಾದರೂ ರೋಲ್ ಕಾಲ್ ಮಾಡಿದ್ದರೆ, ಯಾರಿಂದಾದರೂ ನಯಾ ಪೈಸೆ ಪಡೆದಿದ್ದರೆ, ಅದನ್ನು ಸಂಬರ್ಗಿ ಸಾಬೀತು ಮಾಡಲಿ.ನಾನು ರೋಲ್ ಕಾಲ್ ಮಾಡಿದ್ದೀನಿ ಅಂತ ಪ್ರೂವ್ ಮಾಡಿದರೆ ಹ್ಯಾಂಗ್ ಮಾಡಿಕೊಳ್ಳಲು ಸಿದ್ಧ ಎಂದು ಸವಾಲನ್ನು ಹಾಕಿದ್ದಾರೆ ರೂಪೇಶ್ ರಾಜಣ್ಣ. ಅಲ್ಲದೇ ಅವರು ಇದೇ ವೇಳೆ ಹೊರಗಡೆ ಕೋಟಿ ಕೋಟಿ ವ್ಯವಹಾರ ಮಾಡುವ ಕುತಂತ್ರಿಗಳು ನಾವಲ್ಲ ಎಂದು ಪ್ರಶಾಂತ್ ಸಂಬರ್ಗಿಗೆ ಟಾಂಗ್ ನೀಡಿದ್ದಾರೆ. ರೂಪೇಶ್ ರಾಜಣ್ಣ ಮತ್ತು ಪ್ರಶಾಂತ್ ಸಂಬರ್ಗಿ ನಡುವೆ ಆಗಾಗ ಜಗಳಗಳು ನಡೆಯುತ್ತಲೇ ಇದ್ದು, ಕನ್ನಡದ ವಿಚಾರವಾಗಿ ಈಗಾಗಲೇ ಜಗಳ ಮಾಡಿಕೊಂಡಿದ್ದಾರೆ

Leave a Comment