ಪ್ರಶಾಂತ್ ಸಂಬರ್ಗಿ ತಾಯಿಗೆ ಅಪಮಾನ ಮಾಡಿದ ರೂಪೇಶ್ ರಾಜಣ್ಣ: ಆ 2 ಪದಕ್ಕೆ ಬಹಿರಂಗ ಕ್ಷಮೆಯಾಚನೆ

Written by Soma Shekar

Published on:

---Join Our Channel---

ಕನ್ನಡ ಬಿಗ್ ಬಾಸ್ ಸೀಸನ್ 9 ರಲ್ಲಿ ಇಡೀ ಮನೆಯ ಸದಸ್ಯರು ಒಂದು ಕಡೆಯಾದರೆ, ರೂಪೇಶ್ ರಾಜಣ್ಣ ಮತ್ತು ಪ್ರಶಾಂತ್ ಸಂಬರ್ಗಿ ಇನ್ನೊಂದು ಕಡೆ ಎನ್ನುವಂತೆ ಆಟ ಸಾಗಿದ್ದು, ಇವರಿಬ್ಬರ ನಡುವೆ ಒಂದಲ್ಲಾ ಒಂದು ವಿಚಾರಕ್ಕೆ ಇಬ್ಬರ ನಡುವೆ ಬಿಗ್ ಬಾಸ್ ನ ಆರಂಭದಿಂದಲೂ ಸಹಾ ಜಗಳಗಳು ನಡೆಯುತ್ತಲೇ ಇದೆ. ಅವರ ನಡುವಿನ ಕಿತ್ತಾಟವನ್ನು ನೋಡಿದಾಗ ಅದು ಟಾಸ್ಕ್ ಗಾಗಿ ಅಲ್ಲ ಬದಲಾಗಿ ಅವರ ನಡುವಿನ ವೈಯಕ್ತಿಕ ವಿಚಾರಗಳ ಕಾರಣದಿಂದ ಜಗಳ ನಡೆಯುತ್ತಿದೆಯೋನೋ ಎನ್ನುವಂತೆ ಕಾಣುತ್ತಿದೆ. ಮನೆಯ ಇತರೆ ಸದಸ್ಯರು ಟಾಸ್ಕ್ ವಿಚಾರಕ್ಕೆ ಜಗಳ ಆಡಿದರೆ, ಇವರು ಟಾಸ್ಕ್ ನ ಮುಂದೆ ಇಟ್ಟು ಕೊಂಡು ವೈಯಕ್ತಿಕ ಕಾರಣಗಳಿಂದ ಜಗಳ ಆಡಿದಂತೆ ಕಾಣುತ್ತಿದೆ. ಅವರ ಈ ಜಗಳದಲ್ಲಿ ಅವರ ಕುಟುಂಬದ ಸದಸ್ಯರಿಗೆ ಮುಜುಗರ ಆಗುವಂತಹ ಮಾತುಗಳು ಸಹಾ ಕೇಳಿ ಬರುತ್ತಿದ್ದು, ಇದು ಸಹಜವಾಗಿಯೇ ಬಿಗ್ ಬಾಸ್ ಪ್ರೇಮಿಗಳಿಗೆ ಬೇಸರ ಉಂಟು ಮಾಡಿದೆ.

ಹೌದು, ಬಿಗ್ ಬಾಸ್ ಮನೆಯಲ್ಲಿ ಪ್ರಶಾಂತ್ ಸಂಬರ್ಗಿ ಮತ್ತು ರೂಪೇಶ್ ರಾಜಣ್ಣ ಅವರ ನಡುವಿನ ಜಗಳದಲ್ಲಿ ಅವರು ತಮ್ಮ ಕುಟುಂಬದ ಸದಸ್ಯರಿಗೆ ಅವಮಾನ ಆಗುವಂತಹ ಮಾತುಗಳನ್ನು ಆಡಿದ್ದಾರೆ. ಚಿನ್ನದ ಗಣಿ ಟಾಸ್ಕ್ ನ ವೇಳೆ ಇಬ್ಬರ ನಡುವಿನ ಮಾತಿನ ಚಕಮಕಿ ಜೋರಾಗಿ ನಡೆದಿದ್ದು, ಅವರು ತಮ್ಮ ಮಾತಿನ ಮೂಲಕವೇ ತಮ್ಮ ಮರ್ಯಾದೆ ತಾವೇ ಕಳೆದುಕೊಂಡಿದ್ದಾರೆ. ಮಾತಿನ ಭರದಲ್ಲಿ ರೂಪೇಶ್ ರಾಜಣ್ಣ ಅವರು ಪ್ರಶಾಂತ್ ಸಂಬರ್ಗಿ ಅವರ ತಾಯಿಗೆ ಅಪಮಾನ ಮಾಡುವ ರೀತಿ ಮಾತನಾಡಿದ್ದು, ಇದು ಅವರ ವ್ಯಕ್ತಿತ್ವಕ್ಕೆ ಅವರೇ ಮಾಡಿಕೊಂಡಂತಹ ಧಕ್ಕೆಯಾಗಿ ಈಗ ಕಂಡಿದೆ.

ರೂಪೇಶ್ ರಾಜಣ್ಣ ಅವರು ಆಡಿದ ಮಾತಿಗೆ ಪ್ರಶಾಂತ್ ಸಂಬರ್ಗಿ ಅವರ ಸಿಟ್ಟು ತಾರಕಕ್ಕೇರಿತು. ಈ ವಿಚಾರವಾಗಿ ಇಬ್ಬರ ನಡುವೆ ಪದೇ ಪದೇ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಪ್ರಶಾಂತ್ ಸಂಬರ್ಗಿ, ನನ್ನ ತಾಯಿಗೆ ನೀವು ಅಪಮಾನ ಮಾಡಿದ್ದೀರಿ. ಇದು ಮಾನನಷ್ಟ ಮೊಕದ್ದಮೆ ಹೂಡುವಂತಹ ಪದವಾಗಿದೆ. ನಮ್ಮ ತಾಯಿಯ ಮಾನವನ್ನು ಕರ್ನಾಟಕದ ಜನರ ಮುಂದೆ ಹರಾಜು ಹಾಕಿದ್ದೀರಿ. ನಾನು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ರೂಪೇಶ್ ರಾಜಣ್ಣ ಅವರ ಮೇಲೆ ಕೂಗಾಡಿದ್ದಾರೆ. ಈ ವೇಳೆ ಕೊನೆಗೂ ರೂಪೇಶ್ ರಾಜಣ್ಣ ಅವರಿಗೆ ತಾನು ಮಾತಿನ ಭರದಲ್ಲಿ ಆಡಿದಂತಹ ಮಾತುಗಳು ತಪ್ಪು ಎನ್ನುವ ಅರಿವಾಗಿದೆ.

ತಪ್ಪು ಅರಿವಾದ ರೂಪೇಶ್ ರಾಜಣ್ಣ ಅವರು ಬಹಿರಂಗವಾಗಿಯೇ ಕ್ಷಮೆಯಾಚಿಸಿದ್ದಾರೆ. ನಾನು ಆ ಎರಡು ಪದಗಳನ್ನು ಆಡಬಾರದಿತ್ತು. ಆಡಿದ್ದಕ್ಕೆ ಕ್ಷಮೆ ಕೇಳುತ್ತೇನೆ. ಆದರೆ ಉಳಿದ ಪದಗಳಿಗೆ ನಾನು ಬದ್ಧನಾಗಿದ್ದೇನೆ ಎನ್ನುವ ಮೂಲಕ ಪ್ರಶಾಂತ್ ಸಂಬರ್ಗಿಗೆ ತಮ್ಮ ಉತ್ತರವನ್ನು ನೀಡಿದ್ದಾರೆ. ಚಿನ್ನದ ಗಣಿ ಟಾಸ್ಕ್ ನಲ್ಲಿ ರೂಪೇಶ್ ರಾಜಣ್ಣ ಮತ್ತು ಪ್ರಶಾಂತ್ ಸಂಬರ್ಗಿ ನಡುವೆ ಸಾಕಷ್ಟು ಮಾತಿನ ಕಾಳಗ ನಡೆದಿದೆ. ರೂಪೇಶ್ ರಾಜಣ್ಣ ಪ್ರಶಾಂತ್ ಸಂಬರ್ಗಿ ಅವರನ್ನು ಕುತಂತ್ರಿ, ಹೇಡಿ, ರಾಜಾ ಇಲಿ ಎಂದಿದ್ದರು. ಇದಕ್ಕೆ ಸಂಬರ್ಗಿ ರೂಪೇಶ್ ರಾಜಣ್ಣ ಅವರನ್ನು ರೋಲ್ ಕಾಲ್ ಹೋರಾಟಗಾರ ಎಂದು ಜರಿದಿದ್ದರು.

Leave a Comment