ಪ್ರಭಾಸ್ ಫ್ಯಾನ್ಸ್ ಅಬ್ಬರಕ್ಕೆ ಓಟಿಟಿಯಲ್ಲಿ ಸುನಾಮಿ! ಜನಪ್ರಿಯ ಶೋ ಪ್ರಸಾರವೇ ತಡವಾಯ್ತು

Written by Soma Shekar

Updated on:

---Join Our Channel---

ಪ್ಯಾನ್ ಇಂಡಿಯಾ ಸ್ಟಾರ್, ಬಾಹುಬಲಿ(Bahubali) ಖ್ಯಾತಿಯ ನಟ ಪ್ರಭಾಸ್(Prabhas) ಅವರಿಗೆ ತೆಲುಗು ರಾಜ್ಯಗಳಲ್ಲಿ ಅಭಿಮಾನಿಗಳಿಗೆ ಕೊರತೆಯೇನಿಲ್ಲ. ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಪ್ರಭಾಸ್(Prabhas) ಅವರನ್ನು ಅಭಿಮಾನಿಸುತ್ತಾರೆ. ಬಾಹುಬಲಿ ನಂತರ ಪ್ರಭಾಸ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾಗಳು ಗೆಲುವನ್ನು ಸಾಧಿಸದೇ ಇರಬಹುದು ಆದರೆ ಅವರ ಅಭಿಮಾನಿಗಳ ಅಭಿಮಾನಕ್ಕೆ ಇದು ಯಾವುದೇ ಅಡ್ಡಿಯನ್ನು ಉಂಟು ಮಾಡಿಲ್ಲ. ಈಗ ಮತ್ತೊಮ್ಮೆ ಪ್ರಭಾಸ್ ಅಭಿಮಾನಿಗಳ ಅಬ್ಬರ ಹೇಗಿದೆ ಎನ್ನುವುದನ್ನು ತೋರಿಸುವ ಹೊಸದೊಂದು ಘಟನೆ ಸಖತ್ ಸದ್ದು ಮಾಡುತ್ತಿದೆ.

ಪ್ರಭಾಸ್ ತಲೆಗೆ ವಿಗ್ ಹಾಕ್ತಾರಾ? ನಟನ ತಲೆಗೂದಲ ರಹಸ್ಯ ಬಯಲು! ವೈರಲ್ ಸುದ್ದಿ

ತೆಲುಗಿನ ಆಹಾ ಓಟಿಟಿ ವೇದಿಕೆಯಲ್ಲಿ ನಂದಮೂರಿ ಬಾಲಕೃಷ್ಣ(Nandamuri Balakrishna) ಅವರ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ದಿ ಅನ್ ಸ್ಟಾಪಬಲ್(The unstoppable) ಟಾಕ್ ಶೋ ಎರಡನೇ ಸೀಸನ್ ಭರ್ಜರಿ ಯಶಸ್ಸನ್ನು ಪಡೆದು ಮುಂದೆ ಸಾಗಿದ್ದು, ಈ ವಾರ ಇದಕ್ಕೆ ನಟ ಪ್ರಭಾಸ್ ಅತಿಥಿಯಾಗಿ ಆಗಮಿಸಿದ್ದು, ಈಗಾಗಲೇ ಶೋ ನ ಪ್ರೋಮೋಗಳು ಸಖತ್ ವೈರಲ್ ಆಗಿ ಅಭಿಮಾನಿಗಳು ಶೋ ನೋಡಲು ಬಹಳ ಕಾತರರಾಗಿದ್ದರು. ಅವರ ಈ ಕಾತರತೆ ಹಾಗೂ ಅಭಿಮಾನವೇ ಆಹಾ(Aha Ott) ಆ್ಯಪ್ ಕ್ರಾಷ್ ಆಗುವಂತೆ ಮಾಡಿದೆ ಎಂದರೆ ನಿಮಗೆ ಅಚ್ಚರಿಯಾಗಬಹುದು. ಆದರೆ ಇದು ನಿಜ.

ಹೌದು, ನಿನ್ನೆ ರಾತ್ರಿ ಪ್ರಸಾರವಾಗಬೇಕಿದ್ದ ಎಪಿಸೋಡ್ ನೋಡಲು ಕಾತರರಾಗಿದ್ದರು ಪ್ರಭಾಸ್ ಅಭಿಮಾನಿಗಳು. ಇನ್ನು ಓಟಿಟಿಯಲ್ಲಿ ಎಪಿಸೋಡ್ ಸ್ಟ್ರೀಮಿಂಗ್ ಶುರುವಾದ ಕೂಡಲೇ ಅಭಿಮಾನಿಗಳ ಟ್ರಾಫಿಕ್ ಒಂದೇ ಬಾರಿಗೆ ಹೆಚ್ಚಾಗಿದ್ದರಿಂದ ಆಹಾ ಓಟಿಟಿ ಆ್ಯಪ್ ಕ್ರಾಷ್ ಆಗಿದೆ. ಇದಕ್ಕೆ ಅಧಿಕೃತ ಪ್ರತಿಕ್ರಿಯೆ ನೀಡಿರುವ ಆಹಾ ಓಟಿಟಿ ವೇದಿಕೆ, ನಿಮ್ಮ ಪ್ರೀತಿಯು ಅನಂತ ಡಾರ್ಲಿಂಗ್ಸ್! ನಮ್ಮ ಅಪ್ಲಿಕೇಶನ್ ಆಫ್‌ಲೈನ್ ಆಗಿದೆ. ಆದರೆ ನಮ್ಮ ಪ್ರೀತಿಯಲ್ಲ. ಅದನ್ನು ಸರಿಪಡಿಸಲು ನಮಗೆ ಸ್ವಲ್ಪ ಸಮಯ ಕೊಡಿ. ಕೆಲವೇ ಕ್ಷಣಗಳಲ್ಲಿ ನಾವು ಮತ್ತೆ ಭೇಟಿಯಾಗುತ್ತೇವೆ! #PrabhasOnAHA” ಎಂದು ಸ್ವಲ್ಪ ಸಮಯದ ಟ್ವೀಟ್ ಮಾಡಿ ತಿಳಿಸಿದೆ.

ಆಹಾ ಆ್ಯಪ್ ಆರಂಭವಾದಾಗಿನಿಂದ ಇದೇ ಮೊದಲ ಬಾರಿಗೆ ಕ್ರಾಷ್ ಆಗಿದೆ ಎನ್ನಲಾಗಿದೆ. ಪ್ರಭಾಸ್(Prabhas) ಅವರ ಎಪಿಸೋಡ್ ಕುರಿತಾಗಿ ಅಭಿಮಾನಿಗಳಲ್ಲಿ ಮೂಡಿದಂತಹ ಅತೀವವಾದ ಆಸಕ್ತಿ, ಕುತೂಹಲವೇ ಆ್ಯಪ್ ನ ಕ್ರಾಷ್ ಗೆ ಕಾರಣವಾಗಿದೆ. ಈ ವಿಷಯವನ್ನು ಆಹಾ(Aha) ಆ್ಯಪ್ ಕೂಡಾ ಅಧಿಕೃತವಾಗಿ ದೃಢೀಕರಣ ಮಾಡಿದೆ. ಇನ್ನು ಈ ವಿಷಯ ಸುದ್ದಿಯಾದ ಮೇಲೆ ಪ್ರಭಾಸ್ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಪ್ರಭಾಸ್ ಮೇಲೆ ಅಭಿಮಾನಿಗಳು ತಮ್ಮ ಕ್ರೇಜ್ ಹೇಗಿದೆ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

Leave a Comment