ಆಸ್ಕರ್ ಅಲ್ಲ ಭಾಸ್ಕರ್ ಕೂಡಾ ಸಿಗಲ್ಲ ಎಂದಿದ್ದ ಪ್ರಕಾಶ್ ರೈಗೆ ಖಡಕ್ ತಿರುಗೇಟು ಕೊಟ್ಟ ನಟ ಅನುಮಪ್ ಖೇರ್

Written by Soma Shekar

Published on:

---Join Our Channel---

ದಕ್ಷಿಣ ಸಿನಿಮಾ ರಂಗದ ಪ್ರಖ್ಯಾತ ನಟ ಪ್ರಕಾಶ್ ರೈ(Prakash Rai) ತಮ್ಮ ಸಿನಿಮಾಗಳ ಪಾತ್ರಗಳ ಮೂಲಕ ಅಪಾರ ಸಂಖ್ಯೆಯ ಸಿನಿ ಪ್ರೇಮಿಗಳ ಮನಸ್ಸನ್ನು ಗೆದ್ದಿದ್ದಾರೆ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ.. ಆದರೆ ದೇಶದ ರಾಜಕೀಯ ಹಾಗೂ ಕೆಲವೊಂದು ಸಿನಿಮಾಗಳ ವಿಚಾರದಲ್ಲಿ ಅವರು ಆಗಾಗ ನೀಡುವ ಹೇಳಿಕೆಗಳು ಒಂದಷ್ಟು ಚರ್ಚೆಗಳು ಮತ್ತು ವಿ ವಾ ದ ಗಳಿಗೆ ಕಾರಣವಾಗುತ್ತಿದ್ದು, ಅವರ ಅನಿಸಿಕೆ ಅಭಿಪ್ರಾಯಗಳನ್ನು ಟೀಕಿಸುವವರ ಸಂಖ್ಯೆ ಕೂಡಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಪ್ರಕಾಶ್ ರೈ(Prakash Raj) ಅವರ ಸೋಶಿಯಲ್ ಮೀಡಿಯಾ ಪೋಸ್ಟ್ ಗಳು ಸಹಾ ವೈರಲ್ ಆಗಿ, ಟ್ರೋಲ್ ಆಗುತ್ತಲೇ ಇರುತ್ತದೆ.‌

ಇತ್ತೀಚಿನ ದಿನಗಳಲ್ಲಿ ಪ್ರಕಾಶ್ ರೈ ಅವರು ತಮ್ಮ ಸಿನಿಮಾ ವಿಚಾರಗಳಿಗಿಂತ ಹೆಚ್ಚಾಗಿ ಮೋದಿ ಸರ್ಕಾರವನ್ನು ಟೀಕಿಸುವ ಹಾಗೂ ಕೆಲವು ಸಿನಿಮಾಗಳ ಬಗ್ಗೆ ನೀಡಿದಂತಹ ಹೇಳಿಕೆಗಳಿಂದಾಗಿ ಹೆಚ್ಚು ಸುದ್ದಿಯಾಗಿದ್ದಾರೆ. ಕೆಲವೇ ದಿನಗಳ ಹಿಂದೆಯಷ್ಟೇ ನಟ ಪ್ರಕಾಶ್ ರೈ ಅವರು ಕೇರಳದಲ್ಲಿ (Kerala) ನಡೆದಂತಹ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ದಿ ಕಶ್ಮೀರ್ ಫೈಲ್ಸ್(The Kashmir files) ಸಿನಿಮಾವನ್ನು ಅದೊಂದು ಅಸಂಬದ್ಧ ಸಿನಿಮಾ ಎಂದು ಟೀಕೆ ಮಾಡಿದ್ದರು. ಅಲ್ಲದೇ ಆ ಸಿನಿಮಾವನ್ನು ಅಂತರಾಷ್ಟ್ರೀಯ ಜ್ಯುರಿ ನೋಡಿ ಉಗಿದಿದ್ದಾರೆ. ಇದನ್ನೂ ಓದಿ: ಪ್ರಭಾಸ್ ನಂತರ ಈಗ ಮತ್ತೊಬ್ಬ ದಕ್ಷಿಣದ ಸ್ಟಾರ್ ಸಿನಿಮಾಕ್ಕೆ ಸೈಫ್ ಅಲಿ ಖಾನ್: ದಕ್ಷಿಣದಲ್ಲಿ ಸೈಫ್ ಡಿಮ್ಯಾಂಡ್!

ಆ ಸಿನಿಮಾ ಮಾಡಿದವರಿಗೆ ಇನ್ನೂ ನಾಚಿಕೆ ಇಲ್ಲ. ಆ ಸಿನಿಮಾದ ನಿರ್ದೇಶಕ ತನಗೇಕೆ ಆಸ್ಕರ್ ಬರಲಿಲ್ಲ ಎಂದು ಪ್ರಶ್ನೆ ಮಾಡುತ್ತಿದ್ದಾರೆ, ಆ ಸಿನಿಮಾಕ್ಕೆ ಆಸ್ಕರ್ (Oscar) ಅಲ್ಲ, ಭಾಸ್ಕರ್ ಅವಾರ್ಡ್ ಕೂಡಾ ಬರುವುದಿಲ್ಲ ಎಂದು ವ್ಯಂಗ್ಯ ಮಾಡಿದ್ದರು. ಪ್ರಕಾಶ್ ರೈ ಅವರು ನೀಡಿದಂತಹ ಹೇಳಿಕೆಗೆ ದಿ ಕಾಶ್ಮೀರ್ ಫೈಲ್ ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದ ಬಾಲಿವುಡ್ ನ ಹಿರಿಯ ನಟ ಅನುಪಮ್ ಖೇರ್(Anupam Kher) ಅವರು ಈಗ ಪ್ರತಿಕ್ರಿಯೆ ನೀಡಿ, ತಮ್ಮ ಪ್ರತಿಕ್ರಿಯೆಯ ಮೂಲಕ ಪ್ರಕಾಶ್ ರೈ ಅವರಿಗೆ ತಿರುಗೇಟು ನೀಡಿದ್ದಾರೆ.

ಇತ್ತೀಚಿಗೆ ನಟ ಅನುಪಮ್ ಖೇರ್ ಅವರು ಸಂದರ್ಶನ ಒಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಅವರನ್ನು ಪ್ರಕಾಶ್ ರೈ ಹೇಳಿಕೆಯ ಬಗ್ಗೆ ಪ್ರಶ್ನೆ ಮಾಡಲಾಯಿತು. ಇದಕ್ಕೆ ಉತ್ತರ ನೀಡಿದ ನಟ, ಅವರವರ ಯೋಗ್ಯತೆಗೆ ಅನುಸಾರವಾಗಿ ಜನ ಮಾತನಾಡುತ್ತಾರೆ. ಕೆಲವರಿಗೆ ತಮ್ಮ ಇಡೀ ಜೀವನ ಪೂರ್ತಿ ಸುಳ್ಳು ಹೇಳಬೇಕಾಗುತ್ತದೆ. ಮತ್ತೆ ಕೆಲವರು ಇಡೀ ಜೀವನ ಸತ್ಯವನ್ನೇ ಹೇಳುತ್ತಾರೆ. ನಾನು ಸತ್ಯವನ್ನು ಹೇಳುವವರ ಗುಂಪಿಗೆ ಸೇರುತ್ತೇನೆ. ಸುಳ್ಳು ಹೇಳಿ ಬದುಕಬೇಕು ಎನ್ನುವುದು ಅವರ ಇಚ್ಛೆಯಾಗಿದೆ ಎನ್ನುವ ಮೂಲಕ ಪ್ರಕಾಶ್ ರೈ ಅವರು ಆಡುವ ಮಾತುಗಳು ಕೇವಲ ಸುಳ್ಳಷ್ಟೇ ಎಂದು ಹೇಳಿದ್ದಾರೆ.

Leave a Comment