ಹಿಂದೆ ಮುಂದೆ ನೋಡದೇ ಹಿರಿಯ ನಟನ ಚಿಕಿತ್ಸೆಗೆ ಲಕ್ಷ ಲಕ್ಷ ಖರ್ಚು ಮಾಡಿದ ಮೆಗಾಸ್ಟಾರ್ ಚಿರಂಜೀವಿ

Written by Soma Shekar

Published on:

---Join Our Channel---

Cinema News : ಕೆಲವು ನಟರು ತೆರೆಯ ಮೇಲೆ ಮಾತ್ರವೇ ಅಲ್ಲದೇ ನಿಜ ಜೀವನದಲ್ಲಿ ಸಹಾ ನಾಯಕರಾಗಿ ಜನರ ಮೆಚ್ಚುಗೆಗಳನ್ನು ಪಡೆದುಕೊಳ್ಳುತ್ತಾರೆ. ಅವರು ಮಾಡುವ ಕೆಲಸದಿಂದಾಗಿ ಅವರ ಅಭಿಮಾನಿಗಳು ಅವರನ್ನು ಇನ್ನಷ್ಟು ಅಭಿಮಾನಿಸುತ್ತಾರೆ. ಈಗ ಅಂತಹುದೇ ಒಂದು ಮಾನವೀಯ ಕಾರ್ಯವನ್ನು ಮಾಡಿದ್ದಾರೆ ತೆಲುಗಿನ ಹಿರಿಯ ಸ್ಟಾರ್ ನಟ ಮೆಗಾಸ್ಟಾರ್ ಚಿರಂಜೀವಿ(Mega star Chiranjeevi) ಅವರು. ಹಾಗಾದರೆ ಏನಿದು ಘಟನೆ? ಎನ್ನುವಿರಾ. ಬನ್ನಿ ಅದರ ಸಂಪೂರ್ಣ ವಿವರಗಳನ್ನು ತಿಳಿಯೋಣ.

ದಕ್ಷಿಣ ಸಿನಿಮಾ ರಂಗದಲ್ಲಿ ಖಳನಟನಾಗಿ ಹೆಸರನ್ನು ಪಡೆದಿದ್ದಾರೆ ನಟ ಪೊನ್ನಾಂಬಳಂ (Ponnambalam). ಕಳೆದ ಕೆಲವು ತಿಂಗಳುಗಳಿಂದ ನಟ ಪೊನ್ನಾಂಬಳಂ ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಆರ್ಥಿಕ ನೆರವನ್ನು ಅನೇಕರಿಂದ ಕೋರಿದ್ದರು. ಹಾಗೆ ಸಂಗ್ರಹಿಸಿದ ಹಣವು ಅವರ ವೈದ್ಯಕೀಯ ವೆಚ್ಚಕ್ಕೆ ಸಾಕಾಗಿದೆ. ಇನ್ನೂ ಹೆಚ್ಚಿನ ಹಣ ಬೇಕಾಗಿದ್ದ ಕಾರಣ ಅವರು ತಮ್ಮ ಸ್ನೇಹಿತರ ನೆರವನ್ನು ಪಡೆದುಕೊಂಡು, ಮೆಗಾಸ್ಟಾರ್ ಚಿರಂಜೀವಿ ಅವರನ್ನು ಸಂಪರ್ಕ ಮಾಡಿದ್ದಾರೆ. ಆದರೆ ಅನಂತರ ನಡೆದಿದ್ದು ಮಾತ್ರ ಅಚ್ಚರಿ ಮೂಡಿಸಿದೆ.

ಪೊನ್ನಾಂಬಳಂ ಅವರು ಚಿರಂಜೀವಿ(Chiranjeevi help to Ponnambalam) ಅವರು ಒಂದೆರಡು ಲಕ್ಷ ರೂ ಗಳ ನೆರವನ್ನು ನೀಡಬಹುದು ಎಂದು ಕೊಂಡಿದ್ದರು. ಆದರೆ ಚಿರಂಜೀವಿ ಅವರು ಮೆರೆದ ಮಾನವೀಯತೆ ಈಗ ಸುದ್ದಿಯಾಗಿದೆ. ಹೌದು, ಪೊನ್ನಾಂಬಳಂ ಅವರು ಚಿರಂಜೀವಿ ಅವರ ಮೊಬೈಲ್ ನಂಬರ್ಗೆ ಮೆಸೆಜ್ ಮಾಡಿ ಸಹಾಯ ಕೋರಿದ್ದಾರೆ. ಅವರು ಮೆಸೆಜ್ ಮಾಡಿದ ಹತ್ತು ನಿಮಿಷದಲ್ಲಿ ಚಿರಂಜೀವಿ ಅವರು ಸ್ವತಃ ಪೊನ್ನಾಂಬಳಂ ಅವರಿಗೆ ಕಾಲ್ ಮಾಡಿದ್ದು, ಕೂಡಲೇ ಹೈದರಾಬಾದ್ ಗೆ ಬನ್ನಿ ಚಿಕಿತ್ಸೆಗೆ ಸಹಾಯ ಮಾಡುವೆ ಎಂದು ಹೇಳಿದ್ದಾರೆ.

ಪೊನ್ನಾಂಬಳಂ ಅವರು ಆಗ ನಡೆಯಲು ಆಗದ ಪರಿಸ್ಥಿತಿ ಯಲ್ಲಿ ಇರುವುದಾಗಿ ಹೇಳಿದ್ದು, ಚಿರಂಜೀವಿ ಅವರು ಪೊನ್ನಾಂಬಳಂ ಅವರಿಗೆ ಹತ್ತಿರದಲ್ಲೇ ಇರುವ ಅಪೋಲೋ ಆಸ್ಪತ್ರೆಗೆ ಸೇರಿ, ಚಿಕಿತ್ಸೆಗೆ ವ್ಯವಸ್ಥೆ ಆಗಿರುತ್ತದೆ ಎಂದು ಹೇಳಿದ್ದಾರೆ. ಅದಾದ ನಂತರ ಪೊನ್ನಾಂಬಳಂ ಅವರು ಆಸ್ಪತ್ರೆಗೆ ಸೇರಿ ಸಂಪೂರ್ಣ ಚಿಕಿತ್ಸೆ ಯನ್ನು ಪಡೆದಿದ್ದಾರೆ. ಅಲ್ಲದೇ ಆಸ್ಪತ್ರೆಗೆ ಹೋದಾಗ ಕನಿಷ್ಠ ಪ್ರವೇಶ ಶುಲ್ಕ ಕೂಡಾ ಪಡೆಯಲಿಲ್ಲ. ಚಿಕಿತ್ಸೆಗೆ ಒಟ್ಟು 45 ಲಕ್ಷ ಖರ್ಚಾಗಿದ್ದು, ಎಲ್ಲವನ್ನೂ ಚಿರಂಜೀವಿ ಅವರೇ ಭರಸಿದ್ದಾರೆ ಎಂದು ಪೊನ್ನಾಂಬಳಂ ತಿಳಿಸಿದ್ದಾರೆ.

Leave a Comment