ಪವಿತ್ರಾ ಲೋಕೇಶ್ ಹೆಗಲ ಮೇಲೆ ಕೈ ಇಟ್ಟು ನಿಂತು ಧನ್ಯವಾದ ಹೇಳಿದ ನರೇಶ್: ವೀಡಿಯೋ ವೈರಲ್

Written by Soma Shekar

Published on:

---Join Our Channel---

ಕನ್ನಡ ಮೂಲದ ನಟಿ ಪವಿತ್ರ ಲೋಕೇಶ್ ಮತ್ತು ತೆಲುಗಿನ ಹಿರಿಯ ನಟ ನರೇಶ್ ನಡುವಿನ ಸಂಬಂಧದ ಕುರಿತಾಗಿ ಕೆಲವೇ ದಿನಗಳ ಹಿಂದೆಯಷ್ಟೇ ಮಾದ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ಇದೇ ವಿಚಾರವಾಗಿ ನಟ ನರೇಶ್ ಅವರ ಪತ್ನಿ ರಮ್ಯಾ ರಘುಪತಿ ಅವರು ದೊಡ್ಡ ಗಲಾಟೆಯನ್ನೇ ಮಾಡಿದ್ದರು. ಮೈಸೂರಿನ ಹೊಟೇಲ್ ಒಂದರಲ್ಲಿ ನರೇಶ್ ಮತ್ತು ಪವಿತ್ರಾ ಇಬ್ಬರೂ ಹೊಟೇಲ್ ಒಂದರಲ್ಲಿ ಜೊತೆಯಾಗಿ ಸಿಕ್ಕಿ ಹಾಕಿಕೊಂಡಾಗ ಅದು ದೊಡ್ಡ ಗ ಲ ಭೆ ಗೆ ಕಾರಣವಾಗಿತ್ತು. ಅನಂತರ ಈ ಘಟನೆ ಕುರಿತಾಗಿ ಹತ್ತು ಹಲವು ವಿಚಾರಗಳು ಹರಿದಾಡಿದವು. ನಟ ನರೇಶ್ ಮತ್ತು ನಟಿ ಪವಿತ್ರ ಲೋಕೇಶ್ ಅವರನ್ನು ಇದೇ ವಿಚಾರವಾಗಿ ಸಿಕ್ಕಾಪಟ್ಟೆ ಟ್ರೋಲ್ ಸಹಾ ಮಾಡಲಾಯಿತು. ಅನಂತರ ದಿನ ಕಳೆದ ಹಾಗೆ ಈ ವಿಚಾರ ಸಹಾ ತೆರೆ ಮರೆಯಾಗುತ್ತಾ ಸಾಗಿತು.

ಇಷ್ಟೆಲ್ಲಾ ಸುದ್ದಿಗಳು ಹರಿದಾಡಿ, ಸಾಕಷ್ಟು ಚರ್ಚೆಗಳನ್ನು ಹುಟ್ಟು ಹಾಕಿದ ಈ ಜೋಡಿಯ ಮೇಲೆ ಮಾತ್ರ ಯಾವುದೇ ಘಟನೆಗಳು ಸಹಾ ಏನೂ ಪರಿಣಾಮವೇ ಬೀರಿಲ್ಲ ಎನ್ನುವ ಹಾಗೆ ಇವರಿಬ್ಬರೂ ಜೊತೆಯಾಗಿ ಕಾಣಿಸಿಕೊಳ್ಳುವುದನ್ನು ಮಾತ್ರ ಬಿಟ್ಟಿಲ್ಲ. ಈಗ ಈ ಜೋಡಿಯು ಒಂದು ವೀಡಿಯೋವನ್ನು ಮಾಡಿದ್ದು, ಇದು ಈಗ ವೈರಲ್ ಆಗುತ್ತಾ ಸಾಗಿದೆ. ಈ ವೀಡಿಯೋದಲ್ಲಿ ನಟ ನರೇಶ್ ಅವರು ಬಹಳ ಆತ್ಮೀಯತೆ ಮತ್ತು ರೋಮ್ಯಾಂಟಿಕ್ ಆಗಿ ಕಾಣುವ ಹಾಗೆ ನಟಿ ಪವಿತ್ರ ಲೋಕೇಶ್ ಅವರ ಹೆಗಲ ಮೇಲೆ ಕೈ ಇಟ್ಟು ತಾವಿಬ್ಬರೂ ಜೊತೆಯಾಗಿ ನಟಿಸಿರುವ ಹೊಸ ಸಿನಿಮಾದ ವಿಚಾರವಾಗಿ ಮಾತನಾಡಿದ್ದಾರೆ.

ಹೌದು, ಈ ಜೋಡಿ ಅಂದರೂ ಬಾಗುಂಡಾಲಿ, ಅಂದಲೋ ನೇನುಂಡಾಲಿ ಎನ್ನುವ ಹೊಸ ಸಿನಿಮಾದಲ್ಲಿ ನಟಿಸಿದ್ದು, ಈ ಸಿನಿಮಾ ಓಟಿಟಿಯಲ್ಲಿ ಬಿಡುಗಡೆಯಾಗಿದ್ದು, ಸಿನಿಮಾದಲ್ಲಿ ಗಂಡ ಹೆಂಡತಿಯಾಗಿ ಕಾಣಿಸಿಕೊಂಡಿರುವ ನಟ ನರೇಶ್ ಮತ್ತು ನಟಿ ಪವಿತ್ರ ಲೋಕೇಶ್ ಅವರ ಜೋಡಿಯನ್ನು ಪ್ರೇಕ್ಚಕರು ಮೆಚ್ಚಿದ್ದು, ಸಿನಿಮಾ ನೋಡಿದ ಪ್ರೇಕ್ಷಕರು ನೀಡುತ್ತಿರುವ ಅತ್ಯತ್ತಮವಾದ ಪ್ರತಿಕ್ರಿಯೆಗಳು, ನಟ ನರೇಶ್ ಅವರಿಗೆ ಹರಿದು ಬರುತ್ತಿರುವ ನೂರಾರು ಸಂದೇಶಗಳಿಂದ ಅವರು ಖುಷಿಯಾಗಿದ್ದು, ಈ ವೇಳೆ ಸಂಭ್ರಮವನ್ನು ಇಬ್ಬರು ಜೊತೆಯಾಗಿ ವೀಡಿಯೋ ಮೂಲಕ ಹಂಚಿಕೊಂಡು ಪ್ರೇಕ್ಷಕರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ತೆಲುಗಿನ ಪ್ರಖ್ಯಾತ ನಟ, ಹಾಸ್ಯ ನಟನಾಗಿ ತನ್ನದೇ ಆದ ಸ್ಥಾನವನ್ನು ಪಡೆದಿರುವ ಹಿರಿಯ ನಟ ಆಲಿ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಆಹಾ ಓಟಿಟಿ ವೇದಿಕೆಯಲ್ಲಿ ಈ ಸಿನಿಮಾ ಬಿಡುಗಡೆ ಆಗಿದೆ. ಸಿನಿಮಾದಲ್ಲಿ ತಮ್ಮ ಪಾತ್ರಗಳಿಗೆ ಸಿಕ್ಕ ಅಪಾರ ಮೆಚ್ಚುಗೆಯಿಂದ ಖುಷಿಗೊಂಡಿರುವ ನರೇಶ್ ಮತ್ತು ಪವಿತ್ರ ಲೋಕೇಶ್ ಇಬ್ಬರೂ ವೀಡಿಯೋ ಮೂಲಕ ನಿರ್ಮಾಪಕ, ನಿರ್ದೇಶಕ ಮತ್ತು ಚಿತ್ರತಂಡಕ್ಕೆ ಹಾಗೂ ಇಷ್ಟೊಂದು ಅಭಿಮಾನವನ್ನು ನೀಡಿದ ಪ್ರೇಕ್ಷಕರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

Leave a Comment