ಪವಡಿಸು ಪರಮಾತ್ಮ ಎಂದು ಸೂರ್ಯಕಾಂತ್ ಹಾಡಿದ ಹಾಡಿದೆ ಗದ್ಗದಿತರಾಗಿ ಕಣ್ಣೀರು ಹಾಕಿದ ಜಡ್ಜ್ ಗಳು

Written by Soma Shekar

Updated on:

---Join Our Channel---

ಕರ್ನಾಟಕದ ಕಿರುತೆರೆಯ ಜನಪ್ರಿಯ ಹಾಡುಗಾರಿಕೆ ರಿಯಾಲಿಟಿ ಶೋ ಗಳಲ್ಲಿ ಒಂದಾಗಿತ್ತು ಎದೆ ತುಂಬಿ ಹಾಡುವೆನು. ಅಗಲಿದ ಗಾನ ಗಂಧರ್ವ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಘನ ಸಾರಥ್ಯದಲ್ಲಿ ಅಪಾರ ಕನ್ನಡಿಗರ ಮನೆಸೂರೆಗೊಂಡಿದ್ದ ಈ ಶೋ ಬರೋಬ್ಬರಿ ಆರು ವರ್ಷಗಳ ನಂತರ ಮತ್ತೊಮ್ಮೆ ಕಿರುತೆರೆಗೆ ಕಾಲಿಟ್ಟಿದೆ. ಎಸ್ ಪಿ ಬಿ ಅವರ ಸ್ಮರಣೆಯಲ್ಲಿ, ಅವರ ಆಶೀರ್ವಾದದೊಂದಿಗೆ ಕನ್ನಡದ ಸುಪ್ರಸಿದ್ಧ ಸಂಗೀತ ನಿರ್ದೇಶಕರುಗಳಾದ ಗುರು ಕಿರಣ್, ರಘು ದೀಕ್ಷಿತ್ ಹಾಗೂ ಸುಪ್ರಸಿದ್ಧ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ಅವರು ಜಡ್ಜ್ ಗಳಾಗಿರುವ ಈ ಕಾರ್ಯಕ್ರಮ ಈಗಾಗಲೇ ಸಂಗೀತ ಪ್ರಿಯರ ಗಮನವನ್ನು ಸೆಳೆದಿದೆ.

ಈ ಶೋ ನಲ್ಲಿ ಕರ್ನಾಟಕದ ಮೂಲೆ ಮೂಲೆಯಿಂದ ಬಂದಿರುವ ಗಾನ ಪ್ರತಿಭೆಗಳು, ತಮ್ಮ ಇಂಪಾದ ಕಂಠ ಸಿರಿಯಿಂದ, ಕನ್ನಡ ದ ಅದ್ಭುತ ಹಾಗೂ ಇಂಪಾದ ಹಾಡುಗಳನ್ನು ಬಹಳ ಸೊಗಸಾಗಿ ಹಾಡುವ ಮೂಲಕ ಗಾನ ಸುಧೆಯ ಒಂದು ರಸದೌತಣವನ್ನು ಉಣ ಬಡಿಸುವ ಮೂಲಕ ಪ್ರೇಕ್ಷಕರ ಕಿವಿಗಳಿಗೆ ಮಧುರವಾದ ಹಾಡುಗಳ ಸಿರಿಯನ್ನು ಹರಿಸುತ್ತಿದ್ದು, ಸಂಗೀತ ಪ್ರಿಯರಿಗೆ ಹಾಗೂ ಹಾಡುಗಳನ್ನು ಇಷ್ಟಪಡುವ ಪ್ರೇಕ್ಷಕರಿಗೆ ಸಂಗೀತ ಲೋಕದ ಅದ್ಭುತ ಪಯಣವನ್ನು ಮಾಡಿಸುತ್ತಿದೆ. ಎದೆ ತುಂಬಿ ಹಾಡುವೆನು.

ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಈ ಬಾರಿ ಆಡಿಷನ್ ಹಂತದಿಂದಲೇ ಎಲ್ಲರ ಗಮನ ಸೆಳೆದಿರುವ ಗಾಯಕ, ಸ್ಪರ್ಧಿ ಎಂದರೆ ಕಲಬುರ್ಗಿ ಜಿಲ್ಲೆಯಿಂದ ಬಂದಿರುವ ಸೂರ್ಯಕಾಂತ್. ಹೌದು ಮಾತನಾಡಲು ತೊದಲಿನ ಸಮಸ್ಯೆ ಇರುವ ಸೂರ್ಯಕಾಂತ್ ಹಾಡಲು ಪ್ರಾರಂಭಿಸಿದರೆ ಅವರ ಆ ಸಮಸ್ಯೆ ಎಲ್ಲೋ ಮರೆಯಾಗಿ ಬಿಡುತ್ತದೆ. ತೊದಲುವಿಕೆ ಅವರ ಹಾಡಿನ ಪ್ರತಿಭೆಯ ಮುಂದೆ ಮಂಕಾಗಿ ಬಿಡುತ್ತದೆ.

ಇಂತಹ ಅದ್ಭುತ ಪ್ರತಿಭೆಯನ್ನು ನೋಡಿದ ಪ್ರೇಕ್ಷಕರು ಹಾಗೂ ಜಡ್ಜ್ ಗಳು ಇದೇ ಸಂಗೀತದಲ್ಲಿನ ಮಾಯೆ, ಶಕ್ತಿ ಎಂದೆಲ್ಲಾ ಹೇಳುತ್ತಿದ್ದಾರೆ. ಆಡಿಷನ್ ನಲ್ಲೇ ರವೀಂದ್ರ ಹಂದಿಗನೂರು ಅವರ ಸಂಗೀತ ಸಂಯೋಜಿತವಾದ ಬಹಳ ಕಠಿಣವಾದ ತತ್ವಪದವನ್ನು ಹಾಡಿ ಎಲ್ಲರನ್ನೂ ಮೂಕವಿಸ್ಮಿತಗೊಳಿಸಿದ್ದರು ಸೂರ್ಯಕಾಂತ್. ಆಗಲೇ ಜಡ್ಜ್ ಗಳ ಸೂರ್ಯಕಾಂತ್ ಅವರ ಪ್ರತಿಭೆಗೆ ಮೆಚ್ಚಿದರೆ, ರಾಜೇಶ್ ಕೃಷ್ಣನ್ ಸೂರ್ಯಕಾಂತ್ ಈಗಾಗಲೇ ಸ್ಪರ್ಧೆ ಗೆದ್ದಿದ್ದಾರೆ ಎಂದಿದ್ದರು.

ಈಗ ಇವೆಲ್ಲವುಗಳ ನಡುವೆ ಇತ್ತೀಚಿನ ಎಪಿಸೋಡ್ ನಲ್ಲಿ ಸೂರ್ಯಕಾಂತ್ ಶ್ರೀನಿವಾಸ ಕಲ್ಯಾಣ ಸಿನಿಮಾದಲ್ಲಿ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಸಿರಿ ಕಂಠದಲ್ಲಿ ಹೊಮ್ಮಿದ್ದ ಪವಡಿಸೋ ಪರಮಾತ್ಮ ಶ್ರೀವೆಂಕಟೇಶ ಎನ್ನುವ ಹಾಡನ್ನು ಹಾಡಿದರು. ಸೂರ್ಯಕಾಂತ್ ಎಷ್ಟು ಭಾವನಾತ್ಮಕವಾಗಿ ಆ ಹಾಡಿನಲ್ಲಿ ತಲ್ಲೀನರಾಗಿ ಹಾಡಿದರೆಂದು ಹಾಡು ಕೇಳುವಾಗಲೇ ಶೋ ಜಡ್ಜ್ ಗಳಲ್ಲಿ ಒಬ್ಬರಾದ ರಘು ದೀಕ್ಷಿತ್ ಅವರು ಭಾವುಕರಾಗಿದ್ದಾರೆ.

ರಘು ದೀಕ್ಷಿತ್ ಅವರು ಹಾಡನ್ನು ಕೇಳುತ್ತಾ ಭಾವುಕರಾಗಿ, ತಲೆಯನ್ನು ಬಗ್ಗಿಸಿ ಕಣ್ಣೀರು ಸುರಿಸಿ ಅವರು ಗದ್ಗದಿತರಾಗಿದ್ದಾರೆ. ಅವರ ಬಾಯಿಂದ ಮಾತು ಹೊರಬರದಷ್ಟು ಅವರು ಭಾವುಕರಾಗಿ ಹೋದಂತಹ ಕ್ಷಣಕ್ಕೆ ಎದೆ ತುಂಬಿ ಹಾಡುವೆನು ವೇದಿಕೆ ಸಾಕ್ಷಿಯಾಯಿತು. ಒಂದು ಕ್ಷಣ ಈ ದೃಶ್ಯವು ನೋಡುಗರನ್ನು ಸಹಾ ಭಾವುಕರನ್ನಾಗಿಸಿದ್ದು ವಾಸ್ತವ

ಇನ್ನು ಈ ವೇಳೆ ಹಾಡು ಮುಗಿದ ನಂತರ ಗುರು ಕಿರಣ್ ಅವರು ತಾನು ಈ ಹಾಡನ್ನು ಎಸ್ ಪಿ ಬಿ ಅವರು ಹಾಡಿದ ನಂತರ ಅಷ್ಟು ಚೆನ್ನಾಗಿ ಹಾಡಿದ್ದನ್ನು ರಾಜೇಶ್ ಕೃಷ್ಣನ್ ಅವರ ಧ್ವನಿಯಲ್ಲಿ ಕೊನೆಯದಾಗಿ ಕೇಳಿದ್ದೆ. ಆದರೆ ಈಗ ಮತ್ತೊಮ್ಮೆ ಅಷ್ಟು ಭಾವನಾತ್ಮಕವಾಗಿ ಹಾಡಿದ್ದನ್ನು ನಿಮ್ಮ ಧ್ವ‌ನಿಯಲ್ಲಿ ಕೇಳಿದೆ ಎಂದು ಸೂರ್ಯಕಾಂತ್ ಅವರಿಗೆ ಹೇಳಿದರೆ, ರಾಜೇಶ್ ಕೃಷ್ಣನ್ ಅವರು ಇಂದು ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಇದ್ದು, ನಿಮ್ಮ ಹಾಡನ್ನು ಕೇಳಿಸಿಕೊಂಡಿದ್ದರೆ ಖಂಡಿತವಾಗಿ ಅವರು ನಿಮ್ಮನ್ನು ಅಪ್ಪಿಕೊಂಡು ಬಿಡುತ್ತಿದ್ದರು ಎಂದು ಸೂರ್ಯಕಾಂತ್ ಗೆ ಮೆಚ್ಚುಗೆ ಮಾತನ್ನು ಹೇಳಿದ್ದಾರೆ. ಸೂರ್ಯಕಾಂತ್ ಅವರ ಗಾಯನ ಪ್ರತಿಭೆ ಇನ್ನಷ್ಟು ಬೆಳಗಲೆಂದು ನಾವು ಸಹಾ ಹಾರೈಸೋಣ.

Leave a Comment