ಬೇಷರಮ್ ರಂಗ್ ಹಾಡು ಕದ್ದಿದ್ದು!! ಶಾರೂಖ್, ದೀಪಿಕಾ ಹಾಡಿನ ಮೇಲೆ ಪಾಕಿಸ್ತಾನಿ ಗಾಯಕನ ಆರೋಪ

Written by Soma Shekar

Published on:

---Join Our Channel---

ಬಾಲಿವುಡ್ (Bollywood) ನಟ ಕಿಂಗ್ ಖಾನ್ ಶಾರೂಖ್ ಖಾನ್ (Shah Rukh Khan) ತಮ್ಮ‌ ಜೀರೋ (Zero) ಸಿನಿಮಾದ ನಂತರ ಅಂದರೆ ಬರೋಬ್ಬರಿ ನಾಲ್ಕು ವರ್ಷಗಳ ನಂತರ ಮತ್ತೆ ಬಾಲಿವುಡ್ ಗೆ ಪಠಾಣ್(Pathan) ಸಿನಿಮಾದ ಮೂಲಕ ಹಿಂತಿರುಗುತ್ತಿದ್ದು, ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ನಟಿ ದೀಪಿಕಾ ಪಡುಕೋಣೆ (Deepika Padukone) ನಾಯಕಿಯಾಗಿರುವ ಈ ಸಿನಿಮಾ (Cinema) ಈಗಾಗಲೇ ಒಂದು ಹಾಡಿನಿಂದಾಗಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಸಿನಿಮಾದ ಬೇಷರಮ್ ರಂಗ್(Besharam Rung) ಬಹಳಷ್ಟು ಚರ್ಚೆಯ ವಿಚಾರವಾಗಿ ಮಾರ್ಪಾಟಾಗಿದೆ.

ದೀಪಿಕಾ ಪಡುಕೋಣೆ ಹಿಂದೆಂದಿಗಿಂತಲೂ ಸಿಕ್ಕಾಪಟ್ಟೆ ಬೋಲ್ಡ್ ಮತ್ತು ಹಾಟ್ ಆಗಿ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದು, ನಟಿ ಬಿ ಕಿ ನಿ ಧರಿಸಿದ್ದು, ನಟಿಯ ಕನಿಷ್ಠ ವಸ್ತ್ರಗಳನ್ನು ನೋಡಿ ನೆಟ್ಟಿಗರು ಅಸಮಾಧಾನಗೊಂಡಿದ್ದಾರೆ. ಇಷ್ಟೊಂದು ಎಕ್ಸ್ ಪೋಸ್ ಬೇಕಿರಲಿಲ್ಲ ಎಂದಿದ್ದಾರೆ. ಈಗ ಇವೆಲ್ಲವುಗಳ ಬೆನ್ನಲ್ಲೇ ಇದೇ ಬೇಷರಮ್ ರಂಗ್ ಹಾಡಿನ ಬಗ್ಗೆ ಹೊಸದೊಂದು ವಿಚಾರ ಈಗ ಮತ್ತೆ ಸುದ್ದಿಯಾಗಿದ್ದು, ಈ ಹಾಡು ಮೂಲ ಪಾಕಿಸ್ತಾನದ್ದು ಎನ್ನುವ ಮಾತು ಕೇಳಿ ಬಂದಿದೆ. ಹಾಗೆಂದು ಪಾಕಿಸ್ತಾನದ ಗಾಯಕರೊಬ್ಬರು ವೀಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ.

ವಿವಾದಗಳ ನಡುವೆಯೇ ಹೊಸ ದಾಖಲೆ ಬರೆದ ಪಠಾಣ್ ನ ಬೇಷರಮ್ ರಂಗ್ ಹಾಡು: ಇದೆಂತಾ ಅಚ್ಚರಿ??

ಪಾಕಿಸ್ತಾನದ ಗಾಯಕ ಸಜ್ಜದ್ ಅಲಿ(Sajjad Ali) ಅವರು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಹಾಡೊಂದನ್ನು ಶೇರ್ ಮಾಡಿದ್ದು, ಹೊಸ ಸಿನಿಮಾದ ಹಾಡನ್ನು ಕೇಳಿದ ನಂತರ ನಾನು 26 ವರ್ಷಗಳ ಹಿಂದೆ ಬಿಡುಗಡೆ ಮಾಡಿದ್ದ ನನ್ನ ಹಾಡನ್ನು ನೆನಪಿಸಿದೆ ಎಂದು ಅಬ್ ಕೆ ಹಮ್ ಬಿಚಡೇ ತೋ ಹಾಡನ್ನು ಹಾಡಿದ್ದಾರೆ.‌ ಈ ವೀಡಿಯೋ ನೋಡಿದ ನೆಟ್ಟಿಗರು ಹೌದು ನಿಜಕ್ಕೂ ಈ ಹಾಡಿನ ಕಾಪಿ ಎಂದಿದ್ದಾರೆ. ಅಲ್ಲದೇ ಭಾರತ ಪಾಕ್ ಗಾಯಕರ ಹಾಡನ್ನು ಕಾಪಿ ಮಾಡುತ್ತದೆ ಆದರೆ ಕ್ರೆಡಿಟ್ ಕೊಡುವುದಿಲ್ಲ ಎಂದು ಕೂಡಾ ಟೀಕೆಗಳನ್ನು ಮಾಡಿದ್ದಾರೆ.

ಬಾಲಿವುಡ್ ಬಹುತೇಕ ಹಾಡುಗಳನ್ನು ಕಾಪಿ ಮಾಡಿದೆ. ಬಾಲಿವುಡ್ ಜಪಾನೀಸ್ ಹಾಡುಗಳನ್ನು, ಹೊಸದು ಮತ್ತು ಹಳೆಯ ಪಾಕಿಸ್ತಾನಿ ಹಾಡುಗಳನ್ನು ಕೂಡಾ ಕಾಪಿ ಮಾಡಿದೆ ಎಂದು ಕೆಲವರು ಟೀಕೆ ಮಾಡಿದ್ದಾರೆ. ಸಜ್ಜದ್ ಅಲಿ ಅವರು ಈ ವೀಡಿಯೋವನ್ನು ಕೆಲವೇ ದಿನಗಳ ಹಿಂದೆಯಷ್ಟೇ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಆದರೆ ಕೆಲವರು ಈ ಹಾಡು ಪಠಾಣ್(Pathan) ಸಿನಿಮಾದ ಬೇಷರಮ್ ರಂಗ್(Besharam Rung) ಹಾಡಿನ ಹಾಗಿದೆ ಎಂದಿದ್ದಾರೆ. ಮತ್ತೆ ಕೆಲವರು ಎಲ್ಲೋ ಸ್ವಲ್ಪ ಹಾಗಿದೆ ಅಷ್ಟೇ ಎಂದಿದ್ದಾರೆ.

https://www.instagram.com/reel/CmoyPmKDuWA/?igshid=YmMyMTA2M2Y=

ಸೋಶಿಯಲ್ ಮೀಡಿಯಾಗಳಲ್ಲಿ ಈಗ ಈ ಹಾಡಿನ ಬಗ್ಗೆ ಪರ, ವಿ ರೋ ಧದ ಮಾತುಗಳು ಕೇಳಿ ಬರುತ್ತಿವೆ. ಕೆಲವರು ಸಜ್ಜದ್ ಅಲಿ ಅವರನ್ನು ನಿಮ್ಮ ಹಾಡುಗಳೇ ಕಾಪಿ ಎಂದು ಆ ರೋ ಪ ವನ್ನು ಮಾಡಿದ್ದಾರೆ. ಇಷ್ಟು ದಿನ ಬೇಷರಮ್ ರಂಗ್ ಹಾಡಿನಲ್ಲಿನ ಹಾಟ್ ಮತ್ತು ಬೋಲ್ಡ್ ನೆಸ್ ನಿಂದ ಸಾಕಷ್ಟು ವಿ ವಾ ದ ಕ್ಕೆ ಕಾರಣವಾಗಿತ್ತು. ಈಗ ಮತ್ತೊಂದು ವಿಚಾರಕ್ಕೆ ಇದು ಸುದ್ದಿಯಾಗಿದೆ. ಇದಕ್ಕೆ ಚಿತ್ರತಂಡ ಯಾವ ರೀತಿ ಪ್ರತಿಕ್ರಿಯೆ ನೀಡಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

Leave a Comment