ಒಳ್ಳೆ ಮನಸ್ಸಿನಿಂದ ನೋಡಿ: ಪಠಾಣ್ ಬಗ್ಗೆ ಜನರ ಮುಂದೆ ಹೊಸ ಮನವಿ ಮಾಡಿದ ಶಾರೂಖ್

Written by Soma Shekar

Published on:

---Join Our Channel---

Pathan : ಸದ್ಯಕ್ಕಂತೂ ಎಲ್ಲೆಡೆ ಶಾರೂಖ್ ಖಾನ್ (Shahrukh Khan) ಅಭಿನಯದ ಹೊಸ ಸಿನಿಮಾ ಪಠಾಣ್ ದೇ (Pathan) ಸುದ್ದಿಗಳಾಗಿದೆ. ಸದಾ ಒಂದಲ್ಲಾ ಒಂದು ವಿಚಾರವಾಗಿ ಈ ಸಿನಿಮಾ ಸುದ್ದಿಯಾಗುತ್ತಲೇ ಇದೆ. ಮೊದಲ ಹಾಡಿನ ಬಿಡುಗಡೆ ನಂತರ ನಟಿ ದೀಪಿಕಾ ಪಡುಕೋಣೆ(Deepika Padukone) ಧರಿಸಿದ ಬಟ್ಟೆ, ಅನಂತರ ಅದರ ಬಣ್ಣ, ಸಿನಿಮಾದ ಟೈಟಲ್ ಹೀಗೆ ಸಾಕಷ್ಟು ವಿಚಾರಗಳ ಕಾರಣವಾಗಿ ಫಠಾಣ್ ಸಿನಿಮಾ ಮಾದ್ಯಮಗಳ ಪ್ರಮುಖ ಸುದ್ದಿಗಳಲ್ಲಿ ಹರಿದಾಡಿದೆ. ಮತ್ತೊಂದು ಕಡೆ ಸಿನಿಮಾ ಬಗ್ಗೆ ಎದ್ದಿರುವ ಚರ್ಚೆ ಮತ್ತು ವಿ ಮ ರ್ಶೆಗಳನ್ನು ಗಮನಿಸಿದ ಸಿನಿಮಾದ ನಾಯಕ ನಟ ಶಾರೂಖ್ ಖಾನ್(Shahrukh) ಪ್ರತಿಕ್ರಿಯೆ ನೀಡುತ್ತಾ ಇದರಿಂದ ತಮ್ಮ ಸಿನಿಮಾಕ್ಕೆ ದೊಡ್ಡ ಪ್ರಚಾರ ಸಿಕ್ಕಿದೆ ಎನ್ನುವ ಮಾತನ್ನು ಹೇಳಿದ್ದರು.

ಇನ್ನು ನಿನ್ನೆಯಷ್ಟೇ ಸಿನಿಮಾದ ಎರಡನೇ ಹಾಡು ಬಿಡುಗಡೆ ಆಗಿದ್ದು, ಅಭಿಮಾನಿಗಳು ಮೆಚ್ಚುಗೆಯ ಮಳೆಯನ್ನೇ ಹರಿಸಿದ್ದಾರೆ. ಕೆಲವೇ ಗಂಟೆಗಳಲ್ಲಿ ಈ ಎರಡನೇ ಹಾಡು ಸಹಾ ಲಕ್ಷ ಲಕ್ಷ ಸಂಖ್ಯೆಯಲ್ಲಿ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡುವಾಗಲೇ ನಟ ಶಾರೂಖ್ ಖಾನ್ (Sharukh) ಸಿನಿಮಾ ಕುರಿತಾಗಿ ಹೊಸದೊಂದು ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಹಾಗಾದರೆ ಈಗ ನಟ ಶಾರೂಖ್ ಖಾನ್ ಹೇಳಿದ್ದೇನು? ಎನ್ನುವುದನ್ನು ತಿಳಿಯೋಣ ಬನ್ನಿ. ಕೆಲವೇ ದಿನಗಳ ಹಿಂದೆ ನಟ ಶಾರೂಖ್ ತಮ್ಮ ಫಠಾಣ್ ಆ್ಯಕ್ಷನ್ ಹಾದಿಯಲ್ಲಿ ಸಾಗುವ ದೇಶ ಭಕ್ತಿಯ ಸಿನಿಮಾ ಎಂದು ಹೇಳಿ ಟ್ರೋಲ್ ಆಗಿದ್ದರು.

ಇನ್ನು ಈಗ ಎರಡನೇ ಹಾಡಿನ ಭರ್ಜರಿ ಸಕ್ಸಸ್ ನೋಡಿರುವ ನಟ ಮತ್ತೊಂದು ಪ್ರತಿಕ್ರಿಯೆ ನೀಡಿದ್ದು, ಒಳ್ಳೆಯ ಮನಸ್ಸಿನಿಂದ ನೀವು ಹಾಡನ್ನು ನೋಡಿದ್ದೀರಿ, ಅದಕ್ಕೆ ಅದು ನಿಮಗೆ ಮೆಚ್ಚುಗೆಯಾಗಿದೆ. ಹೀಗೆಯೇ ಸಿನಿಮಾವನ್ನು ಸಹಾ ಒಳ್ಳೆಯ ಮನಸ್ಸಿನಿಂದ ನೋಡಿರಿ ಎನ್ನುವ ಮಾತನ್ನು ಹೇಳಿದ್ದಾರೆ. ಒಂದು ಸಿನಿಮಾವನ್ನು ಸಿನಿಮಾ ಆಗಿಯೇ ತೆಗೆದುಕೊಳ್ಳಿ ಎನ್ನುವ ಮನವಿಯನ್ನು ಸಹಾ ಈ ವೇಳೆ ನಟ ಮಾಡಿದ್ದಾರೆ. ಎರಡನೇ ಹಾಡಿಗೆ ಸಿಕ್ಕಿರುವ ಪ್ರತಿಕ್ರಿಯೆಯನ್ನು ಕಂಡು ಶಾರೂಖ್ ಖಾನ್ ಮತ್ತು ದೀಪಿಕಾ(Shahrukh and Deepika) ಇಬ್ಬರೂ ಸಹಾ ಖುಷಿಯಾಗಿದ್ದಾರೆ.

Leave a Comment