ನೀವು ಬುದ್ಧಿವಂತರೇ ಆದಲ್ಲಿ ಈ ಚಿತ್ರದಲ್ಲಿ ಅಡಗಿರುವ ಒಟ್ಟು ಮುಖಗಳೆಷ್ಟು, ಎಲ್ಲಿವೆ? ಹೇಳಿ: ಬುದ್ಧಿವಂತರೇ ಸೋತ ಟಾಸ್ಕ್ !!

Written by Soma Shekar

Published on:

---Join Our Channel---

ನಿಮ್ಮ ಮೆದುಳು ವಿವರಗಳನ್ನು ಸಂಗ್ರಹಿಸುವಲ್ಲಿ ಬಹಳ ಚುರುಕಾಗಿದೆ ಎಂದು ನೀವು ನಂಬಿದ್ದೀರಾ?? ಮತ್ತು ನಿಮ್ಮ ಬುದ್ಧಿ ಶಕ್ತಿಯು ಯಾವುದೇ ವಸ್ತುವಿನಲ್ಲಿ ಸೂಕ್ಷ್ಮವಾದ ಅಂಶಗಳನ್ನು ಹುಡುಕಲು ಪ್ರಯತ್ನಿಸುತ್ತದೆ ಮತ್ತು ಕೇವಲ ಚುರುಕಾದ ನೋಟವನ್ನು ನಿಮ್ಮದ ಎನ್ನುವುದಾದರೆ ಖಂಡಿತ ನೀವು ಇತರರು ನೋಡಲು ಸಾಧ್ಯವಾಗದ ವಿಷಯಗಳನ್ನು ನೋಡುವ ಸಾಮರ್ಥ್ಯವನ್ನು ಪಡೆದಿರುವಿರಿ ಎಂದರ್ಥ. ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ನಿಮ್ಮ ಮೆದುಳಿಗೆ ವ್ಯಾಯಾಮ ನೀಡುವಂತಹ, ಬುದ್ಧಿಗೆ ಸವಾಲು ಹಾಕುವ ದೃಷ್ಟಿ ಭ್ರಮೆಯ ಚಿತ್ರಗಳು ವೈರಲ್ ಆಗುತ್ತಲೇ ಇರುತ್ತವೆ.

ಈಗ ಅಂತಹುದೇ ಒಂದು ಚಿತ್ರ ವೈರಲ್ ಆಗಿದ್ದು, ಪರ್ವತವೊಂದರ ಹಿನ್ನೆಲೆಯಲ್ಲಿ ಇಬ್ಬರು ಕುದುರೆ ಸವಾರರು ಬರುತ್ತಿರುವಂತೆ ನಮಗೆ ಚಿತ್ರವು ಕಾಣುತ್ತದೆ. ಆದರೆ ಈ ಚಿತ್ರದಲ್ಲಿ ಒಂದಲ್ಲಾ ಎರಡಲ್ಲಾ ಒಟ್ಟು ಹದಿಮೂರು ಮುಖಗಳಿವೆ ಎಂದರೆ ನಿಮಗೆ ಅಚ್ಚರಿ ಮತ್ತು ಶಾಕ್ ಆಗಬಹುದು. ಆದರೆ ಇದೇ ವಾಸ್ತವ. ಈ ಆಪ್ಟಿಕಲ್ ಇಲ್ಯೂಷನ್ ಅಥವಾ ದೃಷ್ಟಿ ಭ್ರಮೆಯ ಚಿತ್ರವನ್ನು ಬೆವ್ ಡೂಲಿಟಲ್ ರಚಿಸಿದ್ದಾರೆ ಮತ್ತು ಇದು “ದಿ ಫಾರೆಸ್ಟ್ ಹ್ಯಾಸ್ ಐಸ್” ಎನ್ನುವ ಹೆಸರಿನಿಂದ ಜನಪ್ರಿಯತೆ ಪಡೆದುಕೊಂಡಿದೆ.

ಹಾಗಾದರೆ ಇನ್ನೇಕೆ ತಡ, ಈ ಚಿತ್ರದಲ್ಲಿ ಅಡಗಿರುವ ಒಟ್ಟು ಹದಿಮೂರು ಮುಖಗಳು ಎಲ್ಲಿವೆ ಎನ್ನುವುದನ್ನು ಕಂಡು ಹಿಡಿಯಲು ನಿಮ್ಮ ಪ್ರಯತ್ನವನ್ನು ಪ್ರಾರಂಭಿಸಿ. ಒಂದು ವೇಳೆ ನೀವು ಎಲ್ಲಾ ಮುಖಗಳನ್ನು ಕಂಡು ಹಿಡಿದರೆ ಖಂಡಿತ ನಿಮ್ಮ ಮೆದುಳು ಹಾಗೂ ದೃಷ್ಟಿ ಎರಡೂ ಸಹಾ ಬಹಳ ಚುರುಕಾಗಿದೆ ಎನ್ನುವುದರಲ್ಲಿ ಕಿಂಚಿತ್ತೂ ಅನುಮಾನವಿಲ್ಲ. ಆದರೆ ಈ ಚಿತ್ರದಲ್ಲಿ ಅಡಗಿರುವ ಎಲ್ಲಾ ಮುಖಗಳನ್ನು ಕಂಡುಹಿಡಿಯುವುದು ಸುಲಭದ ಕೆಲಸ ಖಂಡಿತ ಅಲ್ಲ ಎನ್ನುವುದು ಸಹಾ ಸತ್ಯ.

ನೆಟ್ಟಿಗರು ಈಗಾಗಲೇ ಇದರಲ್ಲಿ ಅಡಗಿರುವ ಮುಖಗಳನ್ನು ಕಂಡು ಹಿಡಿಯುವ ಪ್ರಯತ್ನವನ್ನು ಮಾಡಿದ್ದಾರೆ. ಆದರೆ ಬಹಳಷ್ಟು ಜನರಿಗೆ ಎಲ್ಲಾ ಮುಖಗಳನ್ನು ಗುರುತಿಸುವುದು ಸಾಧ್ಯವಾಗಿಲ್ಲ. ಕೆಲವರು ಇದರಲ್ಲಿ ಹದಿಮೂರು ಮುಖಗಳು ಇಲ್ಲ ಎಂದು ಸಹಾ ಸುಮ್ಮನಾಗಿದ್ದಾರೆ. ಆದರೆ ಆ ಆಲೋಚನೆ ತಪ್ಪು. ಏಕೆಂದರೆ ಸ್ವಲ್ಪ ಪ್ರಯತ್ನ ಪಟ್ಟರೆ ನೀವು ಅಡಗಿರುವ ಎಲ್ಲಾ ಮುಖಗಳನ್ನು ಸಹಾ ಪತ್ತೆ ಹಚ್ಚಬಹುದಾಗಿದೆ.

ಉತ್ತರ ಸಿಗದೇ ಇದ್ದರೆ ನಾವೇ ನಿಮಗೆ ಸುಳಿವನ್ನು ನೀಡುತ್ತೇವೆ. ಹದಿಮೂರು ಮುಖಗಳಲ್ಲಿ ನಾಲ್ಕು ಮುಖಗಳನ್ನು ಪ್ರತಿಯೊಬ್ಬರೂ ಸಹಾ ಬಹಳ ಸುಲಭವಾಗಿ ಕಂಡು ಹಿಡಿಯುತ್ತಿದ್ದಾರೆ. ಅವು ಗಾತ್ರದಲ್ಲೂ ಸಹಾ ದೊಡ್ಡದಾಗಿರುವುದರಿಂದ ನಮ್ಮ ದೃಷ್ಟಿ ಅದನ್ನು ಬಹಳ ಸುಲಭವಾಗಿ ಕ್ಯಾಚ್ ಮಾಡಿ ನಮಗೆ ಅಡಗಿರುವ ನಾಲ್ಕು ಮುಖಗಳನ್ನು ತೋರಿಸಿ ಬಿಡುತ್ತದೆ.

ನಂತರ ಗಾತ್ರದಲ್ಲಿ ವಿಭಿನ್ನವಾಗಿರುವ ಎರಡು ಮುಖಗಳು ನಮ್ಮ ದೃಷ್ಟಿಯ ಮುಂದೆ ಬರುತ್ತವೆ. ಚಿತ್ರದ ಬಲಭಾಗದಲ್ಲಿ ಗಾತ್ರದಲ್ಲಿ ದೊಡ್ಡದಾಗಿರುವ ಮತ್ತು ಇನ್ನೊಂದು ಕಿರಿದಾಗಿರುವ ಮುಖಗಳು ಇವೆ. ಆದರೆ ಅದನ್ನು ಗುರುತಿಸಲು ನಮ್ಮ ದೃಷ್ಟಿ ಸ್ವಲ್ಪ ತೀಕ್ಷ್ಣವಾದ ರೀತಿಯಲ್ಲಿ ಅದರ ಮೇಲೆ ಬೀಳಬೇಕಷ್ಟೇ..

ಚಿತ್ರದ ಮೇಲಿನ ಭಾಗದಲ್ಲಿ ಕಾಡಿನಂತಿರುವ ಪ್ರದೇಶದಲ್ಲಿ ಇರುವ ಮರದೊಳಗೆ ಬೆಸೆದುಕೊಂಡಂತಿರುವ ಕಡೆ ಚಿತ್ರದ ನಾಲ್ಕು ಮುಖಗಳಿವೆ. ದಟ್ಟವಾದ ಕಾಡು ನಂತಹ ಆ ಭಾಗದಲ್ಲಿ ನೀವು ಹತ್ತಿರದಿಂದ ನೋಡಿದಾಗ ಮಾತ್ರ ಕಣ್ಣುಗಳು, ಮೂಗು ಮತ್ತು ಮುಖಗಳ ತುಟಿಗಳು ಗೋಚರಿಸುತ್ತವೆ.

ಹಾಗೆ ನೋಡುತ್ತಾ ಸಾಗಿದರೆ ನಿಮಗೆ ಉಳಿದ ಮುಖಗಳು ಸಹಾ ಕಾಣುತ್ತವೆ.

Leave a Comment