ನಿಮ್ಮ ವ್ಯಕ್ತಿತ್ವ ಎಂತದ್ದು ಗೊತ್ತಾ!! ಈ ಚಿತ್ರದಲ್ಲಿ ಮೊದಲು ಕಂಡಿದ್ದೇನು? ಅದೇ ಹೇಳುತ್ತೆ ನಿಮ್ಮ ವ್ಯಕ್ತಿತ್ವ ಏನೆಂದು!!

Written by Soma Shekar

Published on:

---Join Our Channel---

ದೃಷ್ಟಿ ಭ್ರಮೆ ಅಥವಾ ಆಪ್ಟಿಕಲ್ ಇಲ್ಯೂಷನ್ ಅನ್ನು ಉಂಟು ಮಾಡುವ ಫೋಟೋಗಳು ಇತ್ತೀಚಿಗೆ ಬಹಳ ವೈರಲ್ ಆಗುತ್ತಿದೆ. ಒಂದು ದೃಶ್ಯವನ್ನು ನಾವು ಯಾವ ದೃಷ್ಟಿಕೋನದಿಂದ ನೋಡುತ್ತೇವೆ ಎನ್ನುವುದನ್ನು ತಿಳಿಸುವುದೇ ಈ ಫೋಟೋಗಳ ಮುಖ್ಯ ಉದ್ದೇಶವಾಗಿರುತ್ತದೆ. ಸಾಮಾನ್ಯವಾಗಿ ಮನೋವೈದ್ಯರು ನಮಗೆ ಇಂತಹ ಫೋಟೋಗಳನ್ನು ತೋರಿಸುವ ಮೂಲಕ ನಮ್ಮ ಆಲೋಚನೆಗಳ ಬಗ್ಗೆ ಒಂದು ಅಂದಾಜು ಮಾಡುತ್ತಾರೆ. ಆಪ್ಟಿಕಲ್ ಟೆಕ್ನಿಕ್ ಎನ್ನುವುದು ಬಹಳ ಹಿಂದಿನಿಂದಲೂ ಇದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿನ ದಿನಗಳಲ್ಲಿ ಇವುಗಳ ವಿಸ್ತಾರವು ಹೆಚ್ಚುತ್ತಿದೆ.

ಈ ಹಿನ್ನೆಲೆಯಲ್ಲಿ ಪ್ರಸ್ತುತ ಒಂದು ಹೊಸ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಮೇಲಿನ ಫೋಟೋ ನೋಡಿದಾಗ ಮೊದಲು ನಿಮಗೆ ಏನು ಕಾಣುತ್ತದೆ ? ಒಂದು ಆಪಲ್, ಎರಡನೆಯದು ಬಹಳ ದೀರ್ಘವಾಗಿ ನೋಡಿದಾಗ ಎದುರುಬದುರಾಗಿ ಇರುವ ಎರಡು ಮುಖಗಳು ಕಾಣುತ್ತವೆ ಅಲ್ಲವೇ?? ಆದರೆ ಈ ಎರಡರಲ್ಲಿ ಮೊದಲು ನಿಮಗೆ ಏನು ಕಂಡಿತೋ ಅದರ ಆಧಾರದಲ್ಲಿ ನಿಮ್ಮ ವ್ಯಕ್ತಿತ್ವವನ್ನು ತಿಳಿದುಕೊಳ್ಳಬಹುದಾಗಿದೆ. ಈ ಚಿತ್ರವನ್ನು ಎಡ್ಜರ್ ರುಬಿನ್ ಎನ್ನುವವರು 1915 ರಲ್ಲಿ ಚಿತ್ರಿಸಿದ್ದಾರೆ. ಹಾಗಾದರೆ ಇದರ ಅರ್ಥವೇನು? ತಿಳಿಯೋಣ ಬನ್ನಿ.

ಮೊದಲು ಸೇಬು ಕಾಣಿಸಿದರೆ, ಜೀವನದ ವಿಚಾರವಾಗಿ ನೀವು ಸಂತೋಷವಾಗಿರುವ ವ್ಯಕ್ತಿ ಆಗಿರುವಿರಿ. ಪರಿಸ್ಥಿತಿಗಳು ಹೇಗೇ ಇದ್ದರೂ ನೀವು ಅದನ್ನು ಸ್ವೀಕರಿಸಲು ಸಿದ್ಧರಾಗಿರುವಿರಿ. ನಿಮಗೆ ಹತ್ತಿರುವಾಗಿರುವವರ ಮೇಲೆ ನೀವು ಹೆಚ್ಚು ಅವಲಂಬಿತವಾಗಿರುವಿರಿ. ಯಾವಾಗಲೂ ಸಂತೋಷವಾಗಿರಲು ಪ್ರಯತ್ನಿಸುತ್ತಾ, ನಿಮ್ಮ ಸುತ್ತ ಮುತ್ತ ಇರುವವರನ್ನು ಸಹಾ ಸಂತೋಷವಾಗಿ ಇಡಲು ಬಯಸುವ ವ್ಯಕ್ತಿತ್ವ ನಿಮ್ಮದಾಗಿರುತ್ತದೆ.

ಮುಖಗಳು ಕಂಡರೆ, ಒಂದು ವೇಳೆ ನಿಮಗೆ ಚಿತ್ರವನ್ನು ನೋಡಿದ ಕೂಡಲೇ ಎದುರುಬದುರಾಗಿರುವ ಮುಖಗಳು ಕಂಡರೆ, ನೀವು ಸಂಬಂಧಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವಿರಿ. ಆದರೆ ನೀವು ಯಾರನ್ನು ಅತಿಯಾಗಿ ನಂಬುವಿರೋ ಅವರಿಂದಲೇ ಅನಿಶ್ಚಿತತೆಯನ್ನು ಅನುಭವಿಸುವ ಅವಕಾಶವು ಇರುತ್ತದೆ. ಆದರೆ ಹೀಗೆ ಉಂಟಾದ ಅಂತರವು ಹೆಚ್ಚು ದಿನಗಳ ಕಾಲ ಇರಬಾರದು ಎಂದರೆ ನೀವು ಅವರ ಜೊತೆ ಕುಳಿತು ಮಾತನಾಡಿ, ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು.

Leave a Comment