ನಿಮ್ಮ ಲಿಮಿಟ್ ಕ್ರಾಸ್ ಮಾಡ್ಬೇಡಿ: ದೀಪಿಕಾ ಕೊಟ್ಟ ವಾರ್ನಿಂಗ್ ಗೆ ಶಾಕ್ ಆದ ರೂಪೇಶ್ ಶೆಟ್ಟಿ

Written by Soma Shekar

Published on:

---Join Our Channel---

ಬಿಗ್ ಬಾಸ್ ಮನೆಯಲ್ಲಿ ಆಟ ಜೋರಾಗಿ ಸಾಗಿದೆ. ನಿನ್ನೆಯಷ್ಟೇ ಡ್ಯಾನ್ಸ್ ಖುಷಿ, ಓಪನ್ ಎಲಿಮಿನೇಷನ್ ನಂತರದ ಮಾತಿನ ಚಕಮಕಿ ಒಂದಷ್ಟು ಅಸಮಾಧಾನ, ಒಂದಷ್ಟು ಚರ್ಚೆಗಳ ನಂತರ ಮತ್ತೆ ಮನೆಯ ವಾತಾವರಣ ತಿಳಿಯಾಗಿದೆ. ಆದರೆ ಇವೆಲ್ಲವುಗಳ ನಡುವೆ ಇದೀಗ ಮನೆಯಲ್ಲಿ ನಡೆದ ಒಂದು ಸನ್ನಿವೇಶ ಈಗ ಎಲ್ಲರ ಗಮನವನ್ನು ಸೆಳೆಯುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಪ್ರಬಲ ಸ್ಪರ್ಧಿಗಳಾಗಿ ಗುರುತಿಸಿಕೊಂಡಿರುವ ರೂಪೇಶ್ ಶೆಟ್ಟಿ ಮತ್ತು ದೀಪಿಕಾ ದಾಸ್ ನಡುವೆ ನಡೆದ ಮಾತಿನಲ್ಲಿ ದೀಪಿಕಾ ರೂಪೇಶ್ ಶೆಟ್ಟಿ ಅವರಿಗೆ ಒಂದು ಎಚ್ಚರಿಕೆಯನ್ನು ನೀಡಿದ್ದು, ರೂಪೇಶ್ ದೀಪಿಕಾ ವರ್ತನೆಗೆ ಶಾ ಕ್ ಆಗಿದ್ದಾರೆ.

ಕಿಚನ್ ನಲ್ಲಿ ಹಣ್ಣಿನ ವಿಚಾರವಾಗಿ ದೀಪಿಕಾ ದಾಸ್ ಅವರು ಮಾತನಾಡುವಾಗ, ರೂಪೇಶ್ ದೀಪಿಕಾಗೆ, ನೀವು ಹಣ್ಣು ತಿಂದು ನಾಟಕ ಆಡ್ತಾ ಇದ್ದೀರಿ ಎಂದಿದ್ದಾರೆ. ಅದಕ್ಕೆ ದೀಪಿಕಾ ರೂಪೇಶ್ ಶೆಟ್ಟಿಗೆ, ನೀವು ನಿಮ್ಮ ಲಿಮಿಟ್ ಕ್ರಾಸ್ ಮಾಡ್ತಾ ಇದ್ದೀರಿ ಎಂದು ಹೇಳಿ, ಸಿಟ್ಟಿನಿಂದ ಅಲ್ಲಿಂದ ಹೊರಟು ಹೋಗಿದ್ದಾರೆ. ಇದನ್ನು ನೋಡಿ ರೂಪೇಶ್ ಶೆಟ್ಟಿ ಶಾ ಕ್ ಆಗಿದ್ದಾರೆ. ತಾನು ತಮಾಷೆಯಾಗಿ ಹೇಳಿದ್ದು ಎಂದರೂ ದೀಪಿಕಾ ದಾಸ್ ಅದನ್ನು ಕೇಳಲು ಸಿದ್ಧವಿಲ್ಲದಂತೆ ಅಲ್ಲಿಂದ ಹೊರಟು, ಬಾತ್ರೂಮ್ ಗೆ ಹೋಗಿ ಬಾಗಿಲನ್ನು ಹಾಕಿಕೊಂಡಿದ್ದಾರೆ.

ವಿಷಯ ಸೀರಿಯಸ್ಸಾಗಿದೆ ಎ‌ಂದು ತಿಳಿದ ರೂಪೇಶ್ ದೀಪಿಕಾ ಹಿಂದೆಯೇ ಹೋಗಿದ್ದಾರೆ. ಆದರೆ ದೀಪಿಕಾ ಹೊರಗೆ ಬಾರದ ಕಾರಣ ರೂಪೇಶ್ ಅಲ್ಲಿಂದ ಬಂದು ದೀಪಿಕಾ ಅಳ್ತಾ ಇದ್ದಾರೆ ಎಂದಿದ್ದಾರೆ. ಆದರೆ ದೀಪಿಕಾ ಅದೆಲ್ಲಾ ಸೀರಿಯಸ್ಸಾಗಿ ಅಲ್ಲ, ಬದಲಾಗಿ ತಮಾಷೆಯಾಗಿ ರೂಪೇಶ್ ಶೆಟ್ಟಿ ಯನ್ನು ಆಟ ಆಡಿಸಲು ಮಾಡುತ್ತಿರುವುದು ಎಂದು ರೂಪೇಶ್ ಅವರಿಗೆ ಗೊತ್ತಾಗಿಲ್ಲ. ಆದರೆ ಮನೆ ಮಂದಿ ಮಾತ್ರ ರೂಪೇಶ್ ದೀಪಿಕಾ ಅವರ ಕೋಪವನ್ನು ಕಡಿಮೆ ಮಾಡಲು ಮಾಡುತ್ತಿರುವ ಪ್ರಯತ್ನವನ್ನು ನೋಡಿ ಭರ್ಜರಿ ಎಂಜಾಯ್ ಮಾಡಿದ್ದಾರೆ.

ರೂಪೇಶ್ ಶೆಟ್ಟಿ ದೀಪಿಕಾ ಅವರನ್ನು ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ. ಆದರೆ ದೀಪಿಕಾ ಮಾತ್ರ ಸೀರಿಯಸ್ಸಾಗಿ ಇರುವಂತೆ ನಟಿಸುತ್ತಾ, ನನಗೂ ಗಟ್ಟಿಯಾಗಿ ಮಾತನಾಡೋಕೆ ಬರುತ್ತೆ, ಆದರೆ ಮಾಡಲ್ಲ ಅಷ್ಟೇ, ನನ್ನ ಜೊತೆ ನೀವು ಮಾತಾಡ್ಲೇ ಬೇಡಿ ಎಂದಿದ್ದಾರೆ ದೀಪಿಕಾ. ಅಲ್ಲಿ ನಡೆಯುತ್ತಿರುವುದೇನು ಎಂದು ಅರ್ಥವಾಗದ ರೂಪೇಶ್ ಶೆಟ್ಟಿ ಮಾತ್ರ ಅದೇಕೆ ಅಷ್ಟೊಂದು ದೊಡ್ಡ ವಿಷಯ ಮಾಡ್ತಾ ಇದ್ದಾರೆ ಎಂದು ಕೇಳಿದ್ದಾರೆ. ಒಟ್ಟಾರೆ ವಾಹಿನಿ ಶೇರ್ ಮಾಡಿರೋ ಈ ಪ್ರೋಮೋ ನೀಡಿದ ಪ್ರೇಕ್ಷಕರು ಖುಷಿಯಾಗಿದ್ದಾರೆ. ದೀಪಿಕಾ ರೂಪೇಶ್ ಗೆ ಆಡಿಸಿದ ಆಟ ನೋಡಿ ಮೆಚ್ಚುಗೆ ನೀಡುತ್ತಿದ್ದಾರೆ.

Leave a Comment