ನಾಮಕರಣ ಮುಗಿದ ಒಂದೇ ದಿನಕ್ಕೆ ಮೌನ ಮುರಿದ ಮೇಘನಾ ರಾಜ್: ಹೀಗೆಲ್ಲಾ ಆಗುತ್ತೆ ಅನ್ನೋ ನಿರೀಕ್ಷೆ ಇರಲಿಲ್ಲ

Written by Soma Shekar

Published on:

---Join Our Channel---

ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಅವರ ಮುದ್ದಿನ ಮಗನಿಗೆ ಶುಕ್ರವಾರದ ದಿನ ಹಿಂದೂ ಮತ್ತು ಕ್ರೈಸ್ತ ಸಂಪ್ರದಾಯ ಗಳೆರಡನ್ನೂ ಅನುಸರಿಸಿ ರಾಯನ್ ರಾಜ್ ಸರ್ಜಾ ಎನ್ನುವ ಹೆಸರನ್ನು ಇಡಲಾಗಿದೆ. ಆದರೆ ನಾಮಕರಣದ ಫೋಟೋಗಳು, ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಮೇಲೆ ಇದು ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿದೆ‌.‌ ಒಂದಷ್ಟು ಟೀಕೆ ಟಿಪ್ಪಣಿಗಳು ಸಹಾ ಹರಿದು ಬಂದಿದೆ. ಬಹಳಷ್ಟು ಜನರು ಮೇಘನಾ ರಾಜ್ ಅವರು ಮಗನಿಗೆ ಕ್ರೈಸ್ತ ಸಂಪ್ರದಾಯದ ಹಾಗೆ ಹೆಸರನ್ನು ಇಟ್ಟಿರುವ ವಿಚಾರವಾಗಿ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಹೀಗೆ ಬಹಳಷ್ಟು ಟೀಕೆಗಳು ಕೇಳಿ ಬಂದ ಬೆನ್ನಲ್ಲೇ ನಟಿ ಮೇಘನಾ ರಾಜ್ ಅವರು ಒಂದು ಸುದೀರ್ಘವಾದ ಪೋಸ್ಟ್ ಹಾಕುವ ಮೂಲಕ ಇಂತಹ ಜನರಿಗೆ ಒಂದು ಸ್ಪಷ್ಟನೆ ನೀಡುವ ಕೆಲಸವನ್ನು ಮಾಡಿದ್ದಾರೆ. ಹೌದು ಮೇಘನಾ ಅವರು ಮಗನ ನಾಮಕರಣದ ವೀಡಿಯೋ ಶೇರ್ ಮಾಡಿಕೊಂಡು, ಅದರ ಜೊತೆಗೆ ಒಂದಷ್ಟು ವಿಚಾರವನ್ನು ಹಂಚಿಕೊಂಡಿದ್ದಾರೆ.

ಮೇಘನಾ ಅವರು ತಮ್ಮ ಪೋಸ್ಟ್ ನಲ್ಲಿ,
ಒಬ್ಬ ತಾಯಿಯಾಗಿ ನಾನು ನನ್ನ ಮಗನಿಗೆ ಅತ್ಯುತ್ತಮವಾದುದನ್ನು ನೀಡುವುದು ನನಗೆ ಬಹಳ ಮುಖ್ಯವಾಗಿದೆ … ಆತನ ಪೋಷಕರು ಹೇಗೆ ಎರಡೂ ಧರ್ಮಗಳನ್ನು ಖುಷಿ ಪಟ್ಟರೋ ಹಾಗೇ, ಆತನು ಕೂಡಾ ಹಾಗೆ ಎರಡೂ ಧರ್ಮಗಳಲ್ಲಿನ ಉತ್ತಮವಾದುದನ್ನು ಏಕೆ ಪಡೆಯಬಾರದು?? ಜನರು ತಮ್ಮ ಜಾತಿ ಅಥವಾ ಧರ್ಮವನ್ನು ಲೆಕ್ಕಿಸದೆ ಅವರಿಗಾಗಿ ಪ್ರಾರ್ಥಿಸಿದ್ದಾರೆ. ನಮ್ಮ ಕುಟುಂಬಗಳಿಗಾಗಿ ಪ್ರಾರ್ಥಿಸಿದ್ದಾರೆ. ಮೇಲಿನ ಎಲ್ಲಾ ದೇವರುಗಳಿಂದ ನಾವು ಆಶೀರ್ವಾದವನ್ನು ಕೇಳುವುದು ನ್ಯಾಯಯುತವಾಗಿದೆ. ನಾನು ಇದನ್ನು ಎರಡೂ ಸಂಪ್ರದಾಯಗಳ ಪ್ರಕಾರದಲ್ಲಿ ಮಾಡುವುದು ಮುಖ್ಯವಾಗಿತ್ತು. ಅದಕ್ಕೂ ಕಾರಣ ಅವನ ತಂದೆ.

ನಮ್ಮ ರಾಜ ಚಿರು ಅವರು ಎಲ್ಲಕ್ಕಿಂತ ಮುಖ್ಯವಾಗಿ ಮಾನವೀಯತೆ ಮುಖ್ಯ ಎಂದು ನಂಬುತ್ತಿದ್ದರು! ಎರಡೂ ಸಂಪ್ರದಾಯಗಳಲ್ಲಿ ಅತ್ಯುತ್ತಮವಾದದ್ದನ್ನು ಆಚರಿಸಿ! ರಾಯನ್ (ಸಂಸ್ಕೃತ), ಹೆಸರು ಕೂಡಾ ಇದು ಎಲ್ಲಾ ಧರ್ಮಗಳಿಗೆ ಸೇರಿದೆ .. ವಿಭಿನ್ನ ಆವೃತ್ತಿಗಳು, ವಿಭಿನ್ನ ಉಚ್ಚಾರಣೆಗಳು, ಆದರೆ ಒಂದು ಘನ ಅರ್ಥ! ನಮ್ಮ ಹೆಮ್ಮೆಯನ್ನು ಪ್ರಸ್ತುತಪಡಿಸುವುದು. ನಮ್ಮ ರಾಜಕುಮಾರ. ನಮ್ಮ ರಾಯನ್ ರಾಜ್ ಸರ್ಜಾ! ನನ್ನ ಮಗು, ನೀನು ನಿಮ್ಮ ತಂದೆಯಂತೆ ಬೆಳೆಯುವೆ. ಅವರು ಜನರನ್ನು ಪ್ರೀತಿಸುತ್ತಿದ್ದರು, ಮತ್ತು ಅವರು ಮಾನವೀಯ ಕೆಲಸಗಳನ್ನು ಪ್ರೀತಿಸುತ್ತಿದ್ದರು. ಅವರು ಯಾವ ಹಿನ್ನೆಲೆಗೆ ಸೇರಿದವರು ಎಂದು ನೋಡಿ ಪ್ರೀತಿಸುತ್ತಿರಲಿಲ್ಲ. ಅವರು ಈಗಾಗಲೇ ನಿನ್ನ ಬಗ್ಗೆ ಹೆಮ್ಮೆಪಡುತ್ತಿದ್ದಾರೆ! ಅಮ್ಮ ಮತ್ತು ಅಪ್ಪ ನಿನ್ನನ್ನು ಪ್ರೀತಿಸುತ್ತಾರೆ! ಇದು ಆಳುವ ಸಮಯ! ಎಂದು ಬರೆದುಕೊಂಡು ಮೇಘನಾ ಅವರು ಎಲ್ಲರ ಟೀಕೆಗಳಿಗೆ ಉತ್ತರ ನೀಡಿದ್ದಾರೆ.

Leave a Comment