ನಡುರಸ್ತೆಯಲ್ಲೇ ಯುವತಿಯ ಮೇಲೆ ಹಲ್ಲೆ ಮಾಡಿದ ಯುವಕನನ್ನು ತರಾಟೆಗೆ ತೆಗೆದುಕೊಂಡ ನಟ ನಾಗಶೌರ್ಯ

Written by Soma Shekar

Published on:

---Join Our Channel---

ತೆಲುಗು ಸಿನಿಮಾ ರಂಗದ ಯುವ ಸ್ಟಾರ್ ನಟರಲ್ಲಿ ಒಬ್ಬರು ನಾಗ ಶೌರ್ಯ(Naga Shaurya). ವಿಭಿನ್ನ ಕಥೆಯ ಸಿನಿಮಾಗಳಲ್ಲಿ ನಾಯಕನಾಗಿ ಮಿಂಚುತ್ತಾ, ತನ್ನದೇ ಆದ ಅಭಿಮಾನಿಗಳ ಬಳಗವನ್ನು ಹೊಂದಿರುವ ಈ ನಟ ಸಿನಿಮಾಗಳ ಮೂಲಕ ಅಸಂಖ್ಯಾತ ಸಿನಿ ಪ್ರೇಮಿಗಳ ಮನಸ್ಸನ್ನು ಗೆದ್ದಿದ್ದಾರೆ. ತೆರೆಯ ಮೇಲೆ ನಟಿಸಿ ಜನರ ಮನಸ್ಸನ್ನು ಗೆದ್ದಿದ್ದ ಈ ನಟ ಇದೀಗ ನಡುರಸ್ತೆಯಲ್ಲಿ ಸಹಾ ತಮ್ಮ ಹೀರೋಯಿಸಂ ಅನ್ನು ಪ್ರದರ್ಶನ ಮಾಡಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಾ ಸಾಗಿದೆ. ಅಲ್ಲದೇ ನಟ ಅಭಿಮಾನಿಗಳು ಮತ್ತು ನೆಟ್ಟಿಗರು ಮೆಚ್ಚುಗೆ ನೀಡುತ್ತಿದ್ದಾರೆ.

ನಾಗ ಶೌರ್ಯ(Naga Shaurya) ಅವರು ಕಾರಿನಲ್ಲಿ ತೆರಳುವಾಗ ರಸ್ತೆಯಲ್ಲಿ ಇಬ್ಬರು ಜಗಳ ಮಾಡುತ್ತಿರುವುದನ್ನು ಗಮನಿಸಿದ್ದಾರೆ. ಯುವಕನೊಬ್ಬ ತನ್ನ ಜೊತೆಗಿದ್ದ ಯುವತಿಯ ಮೇಲೆ ಕೈ ಮಾಡಿದ್ದಾನೆ. ಇದನ್ನು ನೋಡಿದ ನಟ ನಾಗ ಶೌರ್ಯ ಕಾರಿನಿಂದ ಇಳಿದು ಬಂದು, ಯುವಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಯುವತಿಯ ಮೇಲೆ ಕೈ ಮಾಡಿದ್ದಕ್ಕೆ ಕ್ಷಮೆ ಕೇಳುವಂತೆ ಹೇಳಿದ್ದಾರೆ. ಆದರೆ ಅದೇ ವೇಳೆ ಯುವಕ ಅವಳು ನನ್ನ ಲವರ್ ಎಂದು ಹೇಳಿದ್ದಾನೆ. ಕ್ಷಮೆ ಕೇಳಲು ಆತ ಸಿದ್ಧನಿರಲಿಲ್ಲ.

ಯುವತಿ ಕೂಡಾ ತನ್ನ ಬಾಯ್ ಫ್ರೆಂಡ್ ಅನ್ನು ಅಲ್ಲಿಂದ ಕರೆದುಕೊಂಡು ಹೋಗುವ ಪ್ರಯತ್ನವನ್ನು ಮಾಡಿದ್ದಾಳೆ. ನಾಗ ಶೌರ್ಯ ಅವರು ಲವರ್ ಆದರೂ ಕೈ ಮಾಡಿದ್ದೇಕೆ, ಕ್ಷಮೆ ಕೇಳು ಎಂದು ಒತ್ತಾಯಿಸಿದ್ದಾರೆ. ಆದರೆ ವೀಡಿಯೋದಲ್ಲಿ ಆ ಯುವಕ ಎಲ್ಲೂ ಕ್ಷಮೆ ಕೇಳಿರುವುದು ಮಾತ್ರ ಕಾಣಿಸಿಲ್ಲ. ರಸ್ತೆಯಲ್ಲಿದ್ದ ಕೆಲವರು ಸಹಾ ನಾಗ ಶೌರ್ಯ ಅವರ ಮಾತಿಗೆ ಸರಿ ಎಂದಿದ್ದು, ಯುವಕನನ್ನು ಕ್ಷಮೆ ಯಾಚಿಸುವಂತೆ ಹೇಳಿರುವುದು ಕಂಡು ಬಂದಿದೆ. ಇದನ್ನೂ ಓದಿ : ಹಸುಗೂಸನ್ನು ಹಾಳು ಬಾವಿಗೆ ಎಸೆದ ಪಾಪಿಗಳು: ರಕ್ಷಿಸಿ, ಕಾಪಾಡಿದ ನಾಗರಹಾವು! ಎಂತಹ ವಿಚಿತ್ರ ಇದು

ಆದರೆ ಯುವಕ ಮಾತ್ರ ಕ್ಷಮೆ ಕೇಳಿದ ಯಾವ ಮಾತು ವೀಡಿಯೋದಲ್ಲಿ ಇಲ್ಲ. ಇನ್ನು ಇದೇ ವೇಳೆ ಯುವತಿಯು ಅದು ದೊಡ್ಡ ಗಲಾಟೆ ಆಗಬಹುದೇನೋ ಎನ್ನುವ ಭ ಯ ದಿಂದ ತನ್ನ ಬಾಯ್ ಫ್ರೆಂಡ್ ಅನ್ನು ಅಲ್ಲಿಂದ ಎಳೆದುಕೊಂಡು ಹೋಗುತ್ತಿದ್ದಾಳೆ. ಅಲ್ಲದೇ ಆ ಯುವಕ ನನ್ನ ಲವರ್ ಅವಳು ಎಂದಿದ್ದಾನೆ ಹೊರತು ಕ್ಷಮೆ ಕೇಳಿಲ್ಲ. ನಾಗ ಶೌರ್ಯ(Naga Shaurya Viral Video) ಆ ಯುವಕನ ಕೈ ಹಿಡಿದು ಕ್ಷಮೆ ಕೇಳು ಎಂದು ಒತ್ತಾಯಿಸಿದ್ದಾರೆ. ಲವರ್ ಆದ್ರೆ ರಸ್ತೆಯಲ್ಲಿ ಹೊಡಿತೀಯಾ ಎಂದಿದ್ದಾರೆ. ಸದ್ಯ ವೀಡಿಯೋ ಸಖತ್ ವೈರಲ್ ಆಗಿದೆ.

Leave a Comment