ಲಿಪ್ ಕಿಸ್ ಮಾಡಿ, ಸಿಹಿ ಸುದ್ದಿ ನೀಡಿದ ನರೇಶ್, ಪವಿತ್ರಾ ಲೋಕೇಶ್ ಜೋಡಿ: ವೈರಲ್ ವೀಡಿಯೋ

Written by Soma Shekar

Published on:

---Join Our Channel---

ಸ್ವಲ್ಪ ಸಮಯದ ಹಿಂದೆ ಸಿಕ್ಕಾಪಟ್ಟೆ ಸದ್ದು, ಸುದ್ದಿಯನ್ನು ಮಾಡಿದ ಸಿನಿಮಾ ಸೆಲೆಬ್ರಿಟಿ ಎಂದರೆ ಅದು ತೆಲುಗಿನ ಹಿರಿಯ ನಟ ನರೇಶ್(Naresh) ಮತ್ತು ನಟಿ ಪವಿತ್ರಾ ಲೋಕೇಶ್(Pavitra Lokesh) ಜೋಡಿ. ನರೇಶ್ ಮತ್ತು ಪವಿತ್ರಾ ಲೋಕೇಶ್ ಇಬ್ಬರೂ ಮದುವೆಯಾಗಿದ್ದಾರೆ ಎನ್ನುವ ಸುದ್ದಿಯೊಂದು ಹೊರಗೆ ಬಂದು ಅತ್ತ ತೆಲುಗು ರಾಜ್ಯಗಳಲ್ಲಿ ಮತ್ತು ಇಲ್ಲಿ ಕರ್ನಾಟಕದಲ್ಲಿ ಸಹಾ ಈ ವಿಚಾರ ಸುದ್ದಿಯಾಗಿದ್ದು ಮಾತ್ರವೇ ಅಲ್ಲದೇ, ನರೇಶ್ ಅವರ ಪತ್ನಿ ರಮ್ಯಾ ರಘುಪತಿ(Ramya Raghupati) ಅವರು ಈ ಜೋಡಿಯನ್ನು ಮೈಸೂರಿನ ಹೊಟೇಲ್ ರೂಂ ಒಂದರಲ್ಲಿ ಹಿಡಿದಾಗಲಂತೂ ವಿಚಾರ ಇನ್ನೊಂದು ಹಂತಕ್ಕೆ ತಲುಪಿತ್ತು. ದೊಡ್ಡ ಚರ್ಚೆಗಳಿಗೆ ಇದು ಕಾರಣವಾಗಿತ್ತು.

ಒಂದಷ್ಟು ದಿನಗಳ ಕಾಲ ಇವರದ್ದೇ ಸುದ್ದಿಯಾಗಿತ್ತು. ಅಲ್ಲದೇ ಸೋಶಿಯಲ್ ಮೀಡಿಯಾಗಳಲ್ಲಿ ನರೇಶ್ (Naresh) ಮತ್ತು ಪವಿತ್ರಾ ಲೋಕೇಶ್(Pavitra Lokesh) ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಯಿತು. ಈಗ ಈ ಎಲ್ಲಾ ವಿ ವಾ ದ ಗಳ ನಂತರ ಪವಿತ್ರಾ ಲೋಕೇಶ್ ಮತ್ತು ನರೇಶ್ ಸಿಹಿ ಸುದ್ದಿಯೊಂದನ್ನು ನೀಡುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಹೌದು, ನರೇಶ್ ಮತ್ತು ಪವಿತ್ರಾ ಲೋಕೇಶ್ ಇಬ್ಬರೂ ಶೀಘ್ರದಲ್ಲೇ ಹಸಮಣೆ ಏರಲಿದ್ದು, ಇಬ್ಬರೂ ಸಹಾ ದಾಂಪತ್ಯ ಜೀವನಕ್ಕೆ ಅಡಿಯಿಡಲು ಸಜ್ಜಾಗಿದ್ದು, ಈ ಸಿಹಿ ಸುದ್ದಿಯನ್ನು ಈಗ ಹಂಚಿಕೊಂಡು ಇಷ್ಟು ದಿನ ಹರಡಿದ್ದ ಎಲ್ಲಾ ಸುದ್ದಿಗಳಿಗೆ ಸ್ಪಷ್ಟನೆಯನ್ನು ನೀಡಿದ್ದಾರೆ.

ಸ್ವತಃ ನರೇಶ್(Naresh) ಈ ಸಿಹಿ ಸುದ್ದಿಯನ್ನು ಶೇರ್ ಮಾಡಿಕೊಂಡಿದ್ದು, ಅವರು ಒಂದು ರೋಮ್ಯಾಂಟಿಕ್ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ನರೇಶ್ ನನ್ನ ಜಗತ್ತಿಗೆ ಪವಿತ್ರಾ ಲೋಕೇಶ್ ಗೆ ಸ್ವಾಗತ ಎಂದಿದ್ದು, ಕೇಕ್ ಕತ್ತರಿಸಿ ಒಬ್ಬರಿಗೊಬ್ಬರು ತಿನಿಸಿ, ಲಿಪ್ ಕಿಸ್ ಮಾಡಿದ್ದು, ಅನಂತರ ಕೊನೆಯಲ್ಲಿ ಇಬ್ಬರೂ ತಾವು ಮದುವೆಯಾಗುತ್ತಿರುವ ವಿಚಾರವನ್ನು ಸಹಾ ತಿಳಿಸಿದ್ದಾರೆ. ಈ ವೀಡಿಯೋ ಈಗ ವೈರಲ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಇವರ ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಈ ಮೂಲಕ ಈ ಜೋಡಿ ತಮ್ಮ ಮದುವೆ ವಿಚಾರದಲ್ಲಿ ಎದ್ದಿದ್ದ ವಿ ವಾ ದಗಳಿಗೆ ತೆರೆ ಎಳೆದಿದ್ದಾರೆ.‌

Leave a Comment