“ನನ್ನ ಹೆಸರು ಬಳಸಬೇಡಿ”- ತಂದೆ ತಾಯಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ದಳಪತಿ ವಿಜಯ್

Written by Soma Shekar

Published on:

---Join Our Channel---

ತಮಿಳು ಚಿತ್ರರಂಗದಲ್ಲಿ ನಟ ದಳಪತಿ ವಿಜಯ್ ದೊಡ್ಡ ಹೆಸರು ಹಾಗೂ ಸ್ಟಾರ್ ಡಮ್ ಪಡೆದಿರುವ ನಟನಾಗಿದ್ದಾರೆ. ಅವರ ಅಭಿಮಾನಿಗಳ ಸಂಖ್ಯೆ ಕೂಡಾ ಕಡಿಮೆ ಏನಿಲ್ಲ. ಅಭಿಮಾನಿಗಳಿಗೆ ವಿಜಯ್ ಅವರ ಸಿನಿಮಾಗಳ ಕ್ರೇಜ್ ಹೇಗಿದೆ ಎನ್ನುವುದು ಆಗಾಗ ಸುದ್ದಿಯಾಗುತ್ತದೆ. ಹೀಗೆ ಅಪಾರ ಅಭಿಮಾನಿಗಳನ್ನು ಪಡೆದಿರುವ ನಟ ವಿಜಯ್ ಅವರು ಈ ತಮ್ಮ ಹೆತ್ತವರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ. ತನ್ನ ತಂದೆ ತಾಯಿ ಸೇರಿದಂತೆ ಒಟ್ಟು 11 ಜನರ ಮೇಲೆ ಪ್ರಕರಣವೊಂದನ್ನು ದಾಖಲು ಮಾಡಿದ್ದಾರೆ. ಈ ವಿಷಯ ಮಾಧ್ಯಮಗಳಲ್ಲಿ ಬಹುದೊಡ್ಡ ಚರ್ಚೆಯ ವಿಷಯವಾಗಿ ಮಾರ್ಪಾಟಾಗಿದೆ.

ನಟ ವಿಜಯ್ ಅವರ ತಂದೆ ಎಸ್ ಎ ಚಂದ್ರಶೇಖರ್ ತಮಿಳು ಚಿತ್ರರಂಗದ ಜನಪ್ರಿಯ ನಿರ್ದೇಶಕರ ಸಾಲಿನಲ್ಲಿ ಸ್ಥಾನವನ್ನು ಪಡೆದವರು. ಅವರು ಹಲವು ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಪ್ರಖ್ಯಾತ ನಿರ್ದೇಶಕರು ಕೂಡಾ ಹೌದು. ಎಸ್. ಎ. ಚಂದ್ರಶೇಖರ್ ಅವರು 2020ರಲ್ಲಿ ಆಲ್ ಇಂಡಿಯಾ ದಳಪತಿ ವಿಜಯ್ ಮಕ್ಕಳ್ ಇಯಕ್ಕಮ್ ಎನ್ನುವ ರಾಜಕೀಯ ಪಕ್ಷವೊಂದನ್ನು ಕಟ್ಟಿದ್ದಾರೆ. ಪಕ್ಷ ಕಟ್ಟಿದ ನಂತರದ ದಿನಗಳಲ್ಲಿ ಈ ಪಕ್ಷವು ನಟ ವಿಜಯ್ ಅವರ ಪಕ್ಷವೇ ಇರಬಹುದು ಎನ್ನುವಂತೆ ಬಿಂಬಿತವಾಗಿದೆ.

ಅಲ್ಲದೇ ಕೆಲವು ಸಂದರ್ಭಗಳಲ್ಲಿ ಅತಿ ಶೀಘ್ರದಲ್ಲೇ ನಟ ವಿಜಯ್ ಅವರು ಈ ಪಾರ್ಟಿಯನ್ನು ಸೇರಿ ಪಾರ್ಟಿಯನ್ನು ಮುನ್ನಡೆಸಲಿದ್ದಾರೆ ಎನ್ನುವಂತಹ ಭಾವನೆ ಮೂಡಿಸುವ ವಿಚಾರಗಳು ಕೂಡಾ ನಡೆದಿದ್ದು, ಇದು ಎಲ್ಲರ ಗಮನವನ್ನು ಸೆಳೆದಿರುವಾಗಲೇ, ನಟ ವಿಜಯ್ ಅವರು ತನ್ನ ತಂದೆ ಸ್ಥಾಪನೆ ಮಾಡಿರುವ ರಾಜಕೀಯ ಪಕ್ಷದೊಡನೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ತನಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟ ಮಾಹಿತಿಯನ್ನು ನೀಡಿದ್ದರು.

ಈ ವೇಳೆ ನಟ ವಿಜಯ್ ಅವರು ತಮ್ಮ ತಂದೆ ಕಟ್ಟಿರುವ ಪಾರ್ಟಿ ಪ್ರಚಾರದಲ್ಲಿ ತನ್ನ ಹೆಸರನ್ನಾಗಲಿ, ಅಥವಾ ತನ್ನ ಫೋಟೋಗಳನ್ನಾಗಲೀ ಬಳಸಿಕೊಂಡರೆ ಆಗ ಸೂಕ್ತವಾದ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎನ್ನುವ ಎಚ್ಚರಿಕೆಯನ್ನು ನೀಡಿದ್ದರು. ಅವರು ಅಂತಹ ಹೇಳಿಕೆ ನೀಡಿದ ಮೇಲೆ ವಿಷಯ ದೊಡ್ಡ ಸುದ್ದಿಯಾಗಿತ್ತು. ಈಗ ಇದೇ ವಿಚಾರದಲ್ಲಿ ಮತ್ತೊಮ್ಮೆ ವಿಜಯ್ ಅವರು ದನಿ ಎತ್ತಿದ್ದು, ದೂರು ದಾಖಲು ಮಾಡುವ ಮೂಲಕ ಸುದ್ದಿಯಾಗಿದ್ದಾರೆ.

ವಿಜಯ್ ಅವರ ತಂದೆ ಸ್ಥಾಪನೆ ಮಾಡಿರುವ ಪಾರ್ಟಿ ವಿಜಯ್ ಅವರ ಹೆಸರನ್ನಾಗಲಿ ಅಥವಾ ಅವರ ಅಭಿಮಾನಿ ಸಂಘಗಳ ಹೆಸರನ್ನಾಗಲಿ ಬಳಕೆ ಮಾಡದಂತೆ ತಡೆಯಾಜ್ಞೆಯನ್ನು ತರಲಾಗಿದೆ. ವಿಜಯ್ ಅವರ ತಂದೆ ಎಸ್ ಎ ಚಂದ್ರಶೇಖರ್, ಅವರ ತಾಯಿಯಾದ ಶೋಭಾ ಚಂದ್ರಶೇಖರ್ ಹಾಗೂ ಪಾರ್ಟಿಯ ನಾಯಕ ಪದ್ಮನಾಭನ್ ಸೇರಿದಂತೆ ಹನ್ನೊಂದು ಜನರ ವಿ ರು ದ್ಧ ಪ್ರಕರಣ ದಾಖಲಾಗಿದೆ.

ವಿಜಯ್ ಅವರ ತಂದೆ ಎಸ್ ಎ ಚಂದ್ರಶೇಖರ್ ಅವರು ಆಲ್ ಇಂಡಿಯಾ ದಳಪತಿ ವಿಜಯ್ ಮಕ್ಕಳ್ ಇಯಕ್ಕಮತ ಪಾರ್ಟಿಯ ಪ್ರಧಾನ ಕಾರ್ಯದರ್ಶಿಯಾಗಿದ್ದರೆ, ಅವರ ತಾಯಿಯಾದಂತಹ ಶ್ರೀಮತಿ ಶೋಭಾ ಚಂದ್ರಶೇಖರ್ ಅವರು ಈ ಪಕ್ಷಕ್ಕೆ ಖಜಾಂಚಿ ಆಗಿದ್ದಾರೆ. ಪಕ್ಷವು ತನ್ನ ಕಾರ್ಯಕ್ರಮಗಳಲ್ಲಿ ನಟ ವಿಜಯ್ ಅವರ ಹೆಸರನ್ನು ಬಳಸಿಕೊಂಡಿದೆ ಎನ್ನುವ ಹಿನ್ನೆಲೆಯಲ್ಲಿ ಅಸಮಾಧಾನ ಗೊಂಡ ನಟ ವಿಜಯ್ ಅವರು ತಮ್ಮ ತಂದೆ ತಾಯಿ ಸೇರಿದಂತೆ 11 ಜನರ ಮೇಲೆ ಪ್ರಕರಣವನ್ನು ದಾಖಲು ಮಾಡಿದ್ದಾರೆ.

Leave a Comment