ನನ್ನ ಮಗುವಿನ ಬಣ್ಣವನ್ನು ಜಡ್ಜ್ ಮಾಡಬೇಡಿ ಎಂದು ಹೇಳಿದ ಕೆಜಿಎಫ್ ಸಿನಿಮಾ ಖ್ಯಾತಿಯ ನಟಿ ಶಾಂಭವಿ

Written by Soma Shekar

Published on:

---Join Our Channel---

ಈ ಹಿಂದೆ ಪಾರು ಧಾರಾವಾಹಿಯಲ್ಲಿ ದಿಶಾ ಎನ್ನುವ ಪಾತ್ರಕ್ಕೆ ಜೀವ ತುಂಬಿದ್ದ ನಟಿ ಶಾಂಭವಿ ವೆಂಕಟೇಶ್ ಅವರು. ಅನಂತರ ಅವರು ಸ್ಯಾಂಡಲ್ವುಡ್ ನ ಸೂಪರ್ ಹಿಟ್ ಸಿನಿಮಾ ಕೆಜಿಎಫ್ ನ ಒಂದು ಸಣ್ಣ ಪಾತ್ರದಲ್ಲಿ ಮಿಂಚಿದ್ದರು. ಇದಲ್ಲದೇ ತಮಿಳಿನ ಲಕ್ಷ್ಮೀ ಸ್ಟೋರ್ಸ್ ಸೀರಿಯಲ್ ನಲ್ಲಿ ನಟಿಸಿದ್ದ ಅವರು ಅನಂತರ ಗರ್ಭಿಣಿಯಾದ ಮೇಲೆ ಕಿರುತೆರೆ ಹಾಗೂ ಸಿನಿಮಾಗಳಿಂದ ಸ್ವಲ್ಪ ಗ್ಯಾಪ್ ಪಡೆದುಕೊಂಡರು. ಶಾಂಭವಿ ಅವರು ಅವಳಿ ಜವಳಿ ಮಕ್ಕಳಿಗೆ ಜನ್ಮ ನೀಡಿದರು. ಶಾಂಭವಿ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದು ಆಗಾಗ ಸಂತೋಷದ ಕ್ಷಣಗಳ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ.

ಶಾಂಭವಿ ಅವರು ತಮ್ಮ ಎರಡು ಮಕ್ಕಳ ಫೋಟೋಗಳನ್ನು ಸಹಾ ಹಂಚಿಕೊಳ್ಳುತ್ತಾ ಇರುತ್ತಾರೆ. ಕೆಲವೇ ದಿನಗಳ ಹಿಂದೆ ಮಕ್ಕಳಿಗೆ ನಾಮಕರಣ ಮಾಡಿದ ಸಂಭ್ರಮದ ವಿಚಾರವನ್ನು ಅವರು ಅಭಿಮಾನಿಗಳು ಹಾಗೂ ಆಪ್ತರಿಗೆ ಫೋಟೋ ಶೇರ್ ಮಾಡಿಕೊಂಡು ತಿಳಿಸಿದ್ದರು. ಆದರೆ ಅವರ ಮಕ್ಕಳ ಫೋಟೋ ನೋಡಿದ ಕೆಲವರು ಗಂಡು ಮಗು ಹೆಣ್ಣು ಮಗುವಿಗಿಂತ ಕಪ್ಪಗಿದೆ ಎಂದು ಹೇಳಿದ್ದಾರೆ. ಆಗ ಶಾಂಭವಿ ಅವರು ನನ್ನ ಗಂಡ ಸ್ವಲ್ಪ ಕಪ್ಪು, ನನ್ನ ಮಗ ಕಪ್ಪಾಗಿರೋದು ನನಗೇನೂ ಸಮಸ್ಯೆ ಇಲ್ಲ ಎಂದಿದ್ದರು.

ಆದರೂ ಕೆಲವರು ಮಗು ಬೆಳ್ಳಗೆ ಆಗಲೆಂದು ಕೆಲವರು ಶಾಂಭವಿ ಅವರಿಗೆ ಸಲಹೆಗಳನ್ನು ನೀಡುವುದನ್ನು ಮಾತ್ರ ನಿಲ್ಲಿಸಿಲ್ಲ. ಹೀಗೆ ಕೆಲವರು ನೀಡುತ್ತಿರುವ ಸಲಹೆಗಳಿಂದ ಬೇಸರ ಪಟ್ಟುಕೊಂಡಿರುವ ಶಾಂಭವಿ ಅವರು ಎಲ್ಲರಲ್ಲೂ ಒಂದು ಮನವಿಯನ್ನು ಮಾಡಿಕೊಂಡಿದ್ದಾರೆ.‌ ನಟಿ ಒಂದು ಫೋಟೋ ವನ್ನು ಹಂಚಿಕೊಂಡು, ಅದರ ಜೊತೆಗೆ ಕೆಲವು ಸಾಲುಗಳನ್ನು ಬರೆದುಕೊಂಡು ಒಂದು ಉತ್ತಮವಾದ ವಿಚಾರವನ್ನು ತಿಳಿಸುವ, ಬಣ್ಣದ ಬಗ್ಗೆ ಮಾತನಾಡುವವರಿಗೆ ಅರ್ಥವಾಗುವಂತೆ ವಿಷಯವನ್ನು ತಿಳಿಸಿದ್ದಾರೆ.

“”ದುಷ್ಯಂತ್ ಚಕ್ರವರ್ತಿ ( ಶಾಂಭವಿ ಅವರ ಗಂಡು ಮಗು ) 1.5 ತಿಂಗಳ ಮಗುವಾಗಿದ್ದಾಗ, ಜುಲೈ 17ರಂದು ಕ್ಲಿಕ್ಕಿಸಿದ್ದು. ಇವನ ಮುಖದ ತೇಜಸ್ಸು, ಬಟ್ಟಲು ಕಂಗಳು, ತುಂಟ ನಗು ಮನಮೋಹಕವಾಗಿದೆ. ನಮ್ಮ ಮಗ ಕೃಷ್ಣ ಸುಂದರ. ನಾನು ಗೋದಿ ಬಣ್ಣ, ಯಜಮಾನ್ರು ನಸುಗಪ್ಪು. ಮತ್ತೆ ಮಗುವ್ಯಾಕೆ ಬೆಳ್ಳಗಿರಬೇಕು? ಕಪ್ಪು ಅಂತಾ ಹೇಳಿದ್ರೆ ನಂಗೆ ಬೇಜಾರಿಲ್ಲ. ಅದು ನಮ್ಮೆಲರಿಗೂ ಗೊತ್ತಿರೋ ವಿಚಾರ. ಹಾಗಂತ ಅವನ್ನಾ ಬೆಳ್ಳಗೆ ಮಾಡೋ ಯೋಚನೆ ಖಂಡಿತಾ ಇಲ್ಲ.

ಹೀಗಾಗಿ ಕೆಲವರಲ್ಲಿ ವಿನಂತಿ, ನನಗೆ ದಯವಿಟ್ಟು ಕ್ರೀಮ್ಸ್, ಎಣ್ಣೆ, ಹಿಟ್ಟು ಯಾವುದನ್ನೂ ಸಲಹೆ ಮಾಡಬೇಡಿ. ಮುಗ್ಧ ಮಗುವನ್ನ ಜಡ್ಜ್ ಮಾಡೋದು ತಪ್ಪು. ಅಲ್ವಾ?” ಎಂದು ಶಾಂಭವಿ ವೆಂಕಟೇಶ್ ಅವರು ಸಲಹೆಗಳನ್ನು ನೀಡುವವರನ್ನು ಪ್ರಶ್ನಿಸುತ್ತಾ, ಮಗುವಿನ ಮುಗ್ಧತೆಗೆ ಅದರ ಬಣ್ಣ ಎಂದಿಗೂ ಸರಿ ಸಾಟಿಯಲ್ಲ ಎಂದು ಬಹಳ ಸೊಗಸಾಗಿ ವಿವರಣೆಯನ್ನು ನೀಡಿದ್ದಾರೆ. ಅವರ ಈ ಮಾತಿಗೆ ಮೆಚ್ಚುಗೆಗಳು ಸಹಾ ಹರಿದು ಬಂದಿದೆ. ಅನೇಕರು ಶಾಂಭವಿ ಅವರ ಮಾತು ಅಕ್ಷರಶಃ ಸತ್ಯ ಎಂದಿದ್ದಾರೆ.

Leave a Comment