ನನ್ನ ಗಂಡನ ದುಡ್ಡು, ನಿಮ್ಗೇನು ಪ್ರಾಬ್ಲಂ: ಟೀಕಿಸಿದವರ ಮೇಲೆ ಸಿಡಿದೆದ್ದ ನಿವೇದಿತಾ ಗೌಡ

Written by Soma Shekar

Published on:

---Join Our Channel---

ನಟ, ಗಾಯಕ ಸಹಾ ಆಗಿರುವ ಚಂದನ್ ಶೆಟ್ಟಿ ಅವರ ಪತ್ನಿ ನಿವೇದಿತಾ ಗೌಡ ಸಹಾ ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿರುವ ಕಲಾವಿದೆಯಾಗಿದ್ದಾರೆ ಮಾತ್ರವೇ ಅಲ್ಲದೇ ಕೆಲವೇ ದಿನಗಳ ಹಿಂದೆ ಮಿಸಸ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡು ಸಾಕಷ್ಟು ಸದ್ದು ಮಾಡಿದ್ದರು. ಇನ್ನು ಈಗ ಕೆಲವು ದಿನಗಳಿಂದ ನಿವೇದಿತಾ ಗೌಡ ಮತ್ತೆ ಸುದ್ದಿಯಾಗಿದ್ದಾರೆ. ಹೌದು, ಪ್ರಸ್ತುತ ನಿವೇದಿತಾ ಅವರು ಬಾಲಿಯಲ್ಲಿ ಬೀಡು ಬಿಟ್ಟಿದ್ದು, ಬಿಡುವಿನ ಸಮಯವನ್ನು ಎಂಜಾಯ್ ಮಾಡುತ್ತಿದ್ದಾರೆ. ತಾವು ಒಬ್ಬರೇ ಬಾಲಿಗೆ ಹೋಗಿರುವ ವಿಚಾರವನ್ನು ಹಂಚಿಕೊಂಡ ನಿವೇದಿತಾ ಅವರು ಬಾಲಿಯ ಕೆಲವೊಂದು ಫೋಟೋಗಳನ್ನು ಸಹಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಅಲ್ಲದೇ ನಿವೇದಿತಾ ಅವರು ಪ್ರತಿದಿನವೂ ಕೆಲವು ಫೋಟೋಗಳನ್ನು ಶೇರ್ ಮಾಡಿಕೊಂಡು ತಮ್ಮ ಸಂತೋಷವನ್ನು ಎಲ್ಲರೊಡನೆ ಹಂಚಿಕೊಳ್ಳುತ್ತಿದ್ದಾರೆ. ನಿವೇದಿತಾ ಅವರ ಫೋಟೋಗಳು ವೈರಲ್ ಆಗುತ್ತಿದ್ದು, ನಿವೇದಿತಾ ಅವರು ಹಂಚಿಕೊಂಡ ಪೋಟೋಗಳನ್ನು ನೋಡಿದ ನಂತರ ಕೆಲವರು ಅದಕ್ಕೆ ಕೆಟ್ಟದಾಗಿ ಕಾಮೆಂಟ್ ಗಳನ್ನು ಮಾಡಿದ್ದಾರೆ. ಹೀಗೆ ತನ್ನ ಪೋಟೋಗಳನ್ನು ನೋಡಿ ಕೆಟ್ಟದಾಗಿ ಕಾಮೆಂಟ್ ಮಾಡಿದವರ ಮೇಲೆ ನಿವೇದಿತಾ ಗೌಡ ಸಿಟ್ಟಾಗಿದ್ದಾರೆ. ಹೀಗೆ ಕಾಮೆಂಟ್ ಗಳನ್ನು ಮಾಡಿದವರಿಗೆ ಅವರು ತಿರುಗೇಟು ಸಹಾ ನೀಡಿದ್ದು, ತಮ್ಮ ಪ್ರತಿಕ್ರಿಯೆ ಮೂಲಕ ದಿಟ್ಟ ಉತ್ತರವನ್ನು ನೀಡಿದ್ದಾರೆ.

ಗಂಡ ದುಡಿದ ದುಡ್ಡಿನಲ್ಲಿ ಒಬ್ಬಳೇ ಎಂಜಾಯ್ ಮಾಡ್ತಾ ಇದ್ದೀಯಾ? ಎಂದು ಕೆಲವರು ಕಾಮೆಂಟ್ ಮಾಡಿದ್ದು, ಇದಕ್ಕೆ ನಿವೇದಿತಾ ತಮ್ಮದ ಶೈಲಿಯಲ್ಲಿ ಉತ್ತರ ನೀಡಿದ್ದಾರೆ. “ನಾನು ನನ್ನ ದುಡ್ಡಿನಲ್ಲಿ ಪ್ರವಾಸ ಮಾಡುತ್ತಿರುವುದು. ನನಗೂ ದುಡಿಯುವ ಶಕ್ತಿ ಇದೆ. ಹುಡುಗರು ಸೋಲೋ ಟ್ರಿಪ್ ಹೋದರೆ, ಯಾರಿಗೆ ಏನೂ ಅನಿಸುವುದಿಲ್ಲ. ಹುಡುಗಿಯರು ಹೋದರೆ ಈ ರೀತಿ ಕೆಟ್ಟ ಕಾಮೆಂಟ್ ಮಾಡುತ್ತೀರಿ. ಅಷ್ಟಕ್ಕೂ ನಾನು ನನ್ನ ಗಂಡನ ದುಡ್ಡಿನಲ್ಲಿ ಹೋದರೆ ನಿಮಗೇನು ಸಮಸ್ಯೆ ? ಎ‌ಂದು ಹೇಳುತ್ತಾ ಕಾಮೆಂಟ್ ಮಾಡಿದವರಿಗೆ ಖಾರವಾಗಿಯೇ ಪ್ರತಿಕ್ರಿಯೆಯನ್ನು ನೀಡಿದ್ದಾರೆ ನಿವೇದಿತಾ.

ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಸ್ಪರ್ಧಿಯಾಗಿ ಎಂಟ್ರಿ ನೀಡಿದ ನಂತರ ಸಾಕಷ್ಟು ಜನಪ್ರಿಯತೆ ಪಡೆದ ನಿವೇದಿತಾ ಗೌಡ ಅನಂತರ ನಟನೆ, ಮಾಡೆಲಿಂಗ್, ರಿಯಾಲಿಟಿ ಶೋ ಗಳು, ಸಂಸಾರ ಹೀಗೆ ಸಾಕಷ್ಟು ಬ್ಯುಸಿಯಾಗಿದ್ದಾರೆ. ಇವೆಲ್ಲವುಗಳ ನಡುವೆ ಅವರು ತಮ್ಮ ಕೆಲಸದಿಂದ ಸ್ವಲ್ಪ ಬ್ರೇಕ್ ಪಡೆದಿದ್ದು, ಈ ರಜೆಯ ದಿನಗಳನ್ನು ಎಂಜಾಯ್ ಮಾಡುವ ಸಲುವಾಗಿ ಅವರು ಬಾಲಿ ದ್ವೀಪಕ್ಕೆ ಹೋಗಿದ್ದಾರೆ. ಸೋಲೋ ಟ್ರಿಪ್ ಎಂಜಾಯ್ ಮಾಡುತ್ತಾ ಅದರ ಫೋಟೋ ಮತ್ತು ವೀಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.

Leave a Comment