ನಡು ರಸ್ತೆಯಲ್ಲಿ ಪೋಲಿಸರ ಮುಂದೆಯೇ ಟೆಂಪೋ ಚಾಲಕನನ್ನು ಚಪ್ಪಲಿಯಿಂದ ಹೊಡೆದ ಮಹಿಳೆ: ವೈರಲ್ ಆಯ್ತು ವೀಡಿಯೋ

Written by Soma Shekar

Published on:

---Join Our Channel---

ಕೆಲವೇ ದಿನಗಳ ಹಿಂದೆಯಷ್ಟೇ ನಡು ರಸ್ತೆಯಲ್ಲಿ ಕ್ಯಾಬ್ ಚಾಲಕನನ್ನು ಯುವತಿಯೊಬ್ಬಳು ಕೆನ್ನೆಗೆ ರಪ ರಪನೆ ಬಾರಿಸಿದ ವೀಡಿಯೋ ಮಾದ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ಅಲ್ಲದೇ ಈ ಘಟನೆಯ ನಂತರ ಫುಡ್ ಡಿಲೆವರಿ ಬಾಯ್ ಒಬ್ಬರ ಮೇಲೆ ಹಲ್ಲೆ ಮಾಡಿ, ಅನಂತರ ಸುಳ್ಳು ಹೇಳಿ ಯಾವಾಗ ಪ್ರಕರಣ ತನ್ನ ವಿ ರು ದ್ಧ ತಿರುಗಿತೋ ಆಗ ಕರ್ನಾಟಕದಿಂದ ಓಡಿ ಹೋದ ಮಹಿಳೆಯ ವಿಷಯ ಕೂಡಾ ಮುನ್ನೆಲೆಗೆ ಬಂದಿತ್ತು. ಈಗ ಈ ಘಟನೆಗಳು ಜನರ ಮನಸ್ಸಿನಿಂದ ಮರೆಯಾಗುವ ಮೊದಲೇ ಇಂತಹುದೇ ಮತ್ತೊಂದು ಘಟನೆ ನಡೆದಿದೆ. ಇಲ್ಲಿ ಮಹಿಳೆಯೊಬ್ಬರು ಟೆಂಪೋ ಚಾಲಕನನ್ನು ನಡು ರಸ್ತೆಯಲ್ಲಿ ಚಪ್ಪಲಿಯಿಂದ ಹೊಡೆದಿರುವ ಘಟನೆ ನಡೆದಿದ್ದು, ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಾ ಸಾಗಿದೆ. ಘಟನೆ ನೋಡಿ ಸಾಮಾಜಿಕ ಜಾಲತಾಣಗಳಲ್ಲಿ ಜನರು ವೈವಿದ್ಯಮಯ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಬಹಳಷ್ಟು ಜನರು ಕೆಲವು ಮಹಿಳೆಯರು ಇತ್ತೀಚಿಗೆ ಇಂತಹ ಕೆಲಸ ಮಾಡಿ, ಅನಂತರ ಜನರಿಂದ ಕನಿಕರ ಹುಟ್ಟಿಸುವ ಮಾತು ಆಡುತ್ತಾರೆ ಎಂದು ಟೀಕೆ ಮಾಡುತ್ತಿದ್ದಾರೆ.

ಲಕ್ನೋ ನಗರದ ಟೇಡಿ ಪುಲಿಯಾ ಚೌಕದಲ್ಲಿ ಟ್ರಾಫಿಕ್ ಪೋಲಿಸ್ ಕಾನ್ಸ್‌ಟೇಬಲ್ ಶಿವಪ್ರಕಾಶ್ ಹಾಗೂ ಇಬ್ಬರು ಹೋಂ ಗಾರ್ಡ್ ಗಳು ಕರ್ತವ್ಯ ನಿರ್ವಹಣೆ ಮಾಡುತ್ತಿದ್ದರು. ಈ ವೇಳೆಯಲ್ಲಿ ಒಬ್ಬ ಟೆಂಪೋ ಚಾಲಕ ಅಲ್ಲಿದ್ದ ಪೋಲಿಸ್ ಸಿಬ್ಬಂದಿಯ ಬಳಿಗೆ ಓಡಿ ಬಂದಿದ್ದಾನೆ. ಅಲ್ಲದೇ ಟೆಂಪೋದಲ್ಲಿ ಇದ್ದ ಇಬ್ಬರು ಯುವಕರು ಹಾಗೂ ಮಹಿಳೆಯ ಜೊತೆಗೆ ಬಾಡಿಗೆ ವಿಚಾರದಲ್ಲಿ ಆದ ವಿ ವಾ ದ ದ ಬಗ್ಗೆ ವಿವರಿಸಿದ್ದಾನೆ‌. ಹೋಮ್ ಗಾರ್ಡ್ ಗಳು ಆತನ ಮಾತನ್ನು ಕೇಳುವಾಗಲೇ ಅಲ್ಲಿಗೆ ಬಂದ ಇಬ್ಬರು ಯುವಕರು ಟೆಂಪೋ ಚಾಲಕನ ಜೊತೆಗೆ ಜಗಳಕ್ಕೆ ಇಳಿದಿದ್ದಾರೆ. ರಸ್ತೆಯಲ್ಲಿ ನಡೆಯುತ್ತಿದ್ದ ಗಲಾಟೆ ನೋಡಿ ಜನ ಸೇರಿದ್ದಾರೆ. ಟ್ರಾಫಿನ್ ಜಾಮ್ ಆಗಿದೆ.

ಈ ವೇಳೆ ಆರೆಂಜ್ ಬಣ್ಣದ ಸೀರೆಯನ್ನು ತೊಟ್ಟ ಮಹಿಳೆಯೊಬ್ಬರು ಬಂದು ಟೆಂಪೋ ಚಾಲಕನ ಕೈ ತಿರುಗಿಸಿ, ನಂತರ ತನ್ನ ಚಪ್ಪಲಿಯನ್ನು ತೆಗೆದು ಚಾಲಕನನ್ನು ಹೊಡೆಯಲು ಆರಂಭಿಸುತ್ತಾಳೆ. ಕೂಡಲೇ ಅಲ್ಲಿದ್ದ ಜನರು ಚಾಲಕನನ್ನು ಆಕೆಯಿಂದ ಬಿಡಿಸುವ ಧೈರ್ಯ ಯಾರೂ ಮಾಡಿಲ್ಲ, ಬದಲಾಗಿ ಮೊಬೈಲ್ ಗಳನ್ನು ತೆಗೆದು ವೀಡಿಯೋ ಗಳನ್ನು ಮಾಡಿದ್ದಾರೆ. ನಂತರ ಅಲ್ಲಿಗೆ ಬಂದ ಟ್ರಾಫಿಕ್ ಪೋಲಿಸ್ ಶಿವ ಪ್ರಕಾಶ್ ಅವರು ಎರಡೂ ಪಕ್ಷಗಳವರ ಜೊತೆಗೆ ಮಾತನಾಡಿ ಅವರನ್ನು ಸಮಾಧಾನ ಮಾಡಿದ್ದಾರೆ‌. ನಂತರ ಟೆಂಪೋ ಚಾಲಕ ಹಾಗೂ ಮಹಿಳೆ ಮತ್ತು ಆಕೆಯ ಸಂಗಡಿಗರು ಅಲ್ಲಿಂದ ಹೊರಟು ಹೋಗಿದ್ದಾರೆ.‌

ಘಟನೆಯ ನಂತರ ಅಲ್ಲಿ ಪರಿಸ್ಥಿತಿ ಶಾಂತವಾಗಿದೆ. ಟ್ರಾಫಿಕ್ ಮತ್ತೆ ಸಾಮಾನ್ಯ ಸ್ಥಿತಿಗೆ ತಲುಪಿದೆ. ಅಲ್ಲದೇ ಈ ವಿಚಾರವಾಗಿ ಮಹಿಳೆ ಅಥವಾ ಟೆಂಪೋ ಚಾಲಕ ಯಾರೂ ಸಹಾ ಯಾವುದೇ ದೂರನ್ನು‌ ಇದುವರೆಗೂ ದಾಖಲು ಮಾಡಿಲ್ಲ ಎನ್ನುವುದಾಗಿ ವಿಕಾಸ್ ನಗರದ ಇನ್ಸ್‌ಪೆಕ್ಟರ್ ಆನಂದ್ ತಿವಾರಿ ಅವರು ಹೇಳಿದ್ದಾರೆ. ಅಲ್ಲದೇ ವೀಡಿಯೋ ದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು ತನಿಖೆಯನ್ನು ನಡೆಸುತ್ತಿರುವುದಾಗಿ ಸಹಾ ಅವರು ತಿಳಿಸಿದ್ದಾರೆ. ಇನ್ನು ವೈರಲ್ ವೀಡಿಯೋ ನೋಡಿ ಬಹಳಷ್ಟು ಜನ ಮಹಿಳೆಯ ಮೇಲೆ ಸಿಟ್ಟನ್ನು ಹೊರಹಾಕುತ್ತಿದ್ದಾರೆ.

Leave a Comment