ನಟಿ ರಶ್ಮಿಕಾ ನೋವಿಗೆ ಮರುಗಿದ ಅಭಿಮಾನಿ ಬಳಗ: ಫ್ಯಾನ್ಸ್ ಪ್ರತಿಕ್ರಿಯೆ ಕಂಡು ಭಾವುಕರಾದ ನಟಿ

Written by Soma Shekar

Published on:

---Join Our Channel---

ಬೇರೆಲ್ಲಾ ನಟಿಯರಿಗಿಂತ ಹೆಚ್ಚಾಗಿ ಟ್ರೋಲ್ ಆಗುವ ನಟಿ ರಶ್ಮಿಕಾ ಮಂದಣ್ಣ‌. ತನ್ನ ಬಗ್ಗೆ ಆಗುವ ಟ್ರೋಲ್ ಗಳ ಬಗ್ಗೆ ಹೆಚ್ಚಾಗಿ ಗಮನ ನೀಡದ ರಶ್ಮಿಕಾ ಕೆಲವೇ ದಿನಗಳ ಹಿಂದೆಯಷ್ಟೇ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಒಂದನ್ನು ಶೇರ್ ಮಾಡಿಕೊಂಡು, ತಮ್ಮನ್ನು ಟ್ರೋಲ್ ಮಾಡುವವರ ಬಗ್ಗೆ ಅಸಮಾಧಾನವನ್ನು ಹೊರ ಹಾಕಿದ್ದರು. ತನ್ನ ಬಗ್ಗೆ ನೆಗಟಿವ್ ಕಾಮೆಂಟ್ ಮಾಡುವವರ ಬಗ್ಗೆ ಹಾಗೂ ತನ್ನ ಮೇಲೆ ಗಾಸಿಪ್ ಗಳನ್ನು ಹರಡುವವರ ಮೇಲೆ ನಟಿ ಅಸಮಾಧಾನಗೊಂಡು ಪೋಸ್ಟ್ ಶೇರ್ ಮಾಡಿಕೊಂಡಿದ್ದರು. ಇದಕ್ಕೆ ಸ್ಯಾಂಡಲ್ವುಡ್ ನಟಿ ರಮ್ಯಾ ಸಹಾ ರಶ್ಮಿಕಾಗೆ ಸಾಥ್ ನೀಡಿದ್ದರು. ರಶ್ಮಿಕಾ ತಮ್ಮ ಪೋಸ್ಟ್ ನಲ್ಲಿ ತನ್ನ ಮೇಲೆ ಯಾಕೆ ಇಷ್ಟು ದ್ವೇಷ ಎಂದು ಟ್ರೋಲಿಗರನ್ನು ಪ್ರಶ್ನೆ ಮಾಡಿದ್ದರು.

ನಟಿ ರಶ್ಮಿಕಾ ರನ್ನು ಸೋಶಿಯಲ್ ಮೀಡಿಯಾಗಳಲ್ಲಿ ಅನೇಕ ಬಾರಿ ಟ್ರೋಲ್ ಮಾಡಲಾಗಿದೆ. ರಶ್ಮಿಕಾ ಆಡುವ ಮಾತುಗಳಿಂದ ಹಿಡಿದು, ತೊಡುವ ವಸ್ತ್ರಗಳ ವರೆಗೆ ಪ್ರತಿಯೊಂದು ಸಹಾ ಟ್ರೋಲ್ ಆಗುತ್ತದೆ. ಅನೇಕ ಟ್ರೋಲ್ ಪೇಜ್ ಗಳಲ್ಲಿ ರಶ್ಮಿಕಾ ಕುರಿತಾಗಿ ಗಾಸಿಪ್ ಗಳು ಸಹಾ ಹರಿದಾಡಿದೆ. ಇದನ್ನಲ್ಲಾ ನೋಡಿ ರಶ್ಮಿಕಾ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದು ಅನೇಕರಿಗೆ ಅಚ್ಚರಿ ಮೂಡಿಸಿದೆಯಾದ್ರು, ನಟಿ ಟ್ರೋಲ್ ಗಳಿಂದ ಸಿಕ್ಕಾಪಟ್ಟೆ ಬೇಸರ ಮಾಡಿಕೊಂಡಿದ್ದಾರೆ ಎನ್ನುವುದಂತೂ ಖಚಿತವಾಗಿದೆ. ಇಷ್ಟು ದಿನ ಬಹಿರಂಗವಾಗಿ ಏನೂ ಮಾತಾಡದೇ ಮೌನವಾಗಿದ್ದ ರಶ್ಮಿಕಾ ತಮ್ಮ ಮೌನವನ್ನು ಮುರಿದಿದ್ದಾರೆ.

ನಟಿ ರಶ್ಮಿಕಾ ಹಂಚಿಕೊಂಡ ಪೋಸ್ಟ್ ಹಾಗೂ ಟ್ರೋಲ್ ಮಾಡುವವರ ವಿ ರು ದ್ಧ ದನಿ ಎತ್ತಿದ ನಟಿಗೆ ದೊಡ್ಡ ಮಟ್ಟದಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ಬೆಂಬಲ ಹರಿದು ಬಂದಿದೆ. ನಟಿ ರಶ್ಮಿಕಾ ರಕ್ಷಿತ್ ಶೆಟ್ಟಿ ಅವರಿಂದ ದೂರಾದ ಮೇಲೆ, ಕನ್ನಡ ಭಾಷೆಯ ಬಗ್ಗೆ ನಿರ್ಲಕ್ಷ್ಯ ತೋರಿದ್ದು ಸಹಜವಾಗಿಯೇ ಅನೇಕರ ಸಿಟ್ಟು ಮತ್ತು ಅಸಮಾಧಾನಕ್ಕೆ ಕಾರಣವಾಯಿತು. ಅಲ್ಲಿಂದ ರಶ್ಮಿಕಾನ ಟ್ರೋಲ್ ಮಾಡುವುದು ಜೋರಾಗಿಯೇ ನಡೆಯಿತು. ನಟಿ ರಶ್ಮಿಕಾ ಮಾತ್ರ ಎಲ್ಲದಕ್ಕೂ ಮೌನವಾಗಿ ಇದ್ದರು. ಆದರೆ ಈಗ ನಟಿ ತಾನು ಆ ರೀತಿ ಮೌನವಾಗಿ ಇದ್ದುದ್ದೇ ತಪ್ಪಾಗಿದೆ ಎಂದು ಪಶ್ಚಾತ್ತಾಪ ಪಡುತ್ತಿದ್ದಾರೆ. ನಾನು ಸುಮ್ಮನೆ ಇರಬಾರದಾಗಿತ್ತು, ಮಾತ ನಾಡ ಬೇಕಿತ್ತು ಎಂದು ಬರೆದುಕೊಂಡಿದ್ದಾರೆ.

ನಟಿ ಸಿನಿಮಾ ಕ್ಷೇತ್ರವಾಗಿ ಹಾಗಿದೆ. ನಾನು ಅದನ್ನೇ ಆರಿಸಿಕೊಂಡೆ. ಆದ ಕಾರಣ ನಾನೊಂದು ರೀತಿಯಲ್ಲಿ ಪಂಚಿಂಗ್ ಬ್ಯಾಗ್ ಆಗಿದ್ದೇನೆ ಎಂದಿರುವ ನಟಿ ತಾನು ಸುಮ್ಮನಿದ್ದೇನೆ ಅದರ ಅರ್ಥ ನೆಗೆಟಿವಿಟಿ ಹರಡುವುದಲ್ಲ ಎಂದು ಖಾರವಾಗಿ ಹೇಳಿದ್ದಾರೆ. ಸೋಶಿಹಲ್ ಮೀಡಿಯಾದಲ್ಲಿ ನಟಿ ಹಂಚಿಕೊಂಡ ಪೋಸ್ಟ್ ವೈರಲ್ ಆಗಿದ್ದು, ನಟಿಯ ಅಭಿಮಾನಿಗಳು ರಶ್ಮಿಕಾಗೆ ಸಮಾಧಾನ ಮಾಡಿದ್ದಾರೆ. ನಟಿಯ ಪೋಸ್ಟ್ ಗೆ ಪಾಸಿಟಿವ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ತನಗೆ ಇಷ್ಟು ದೊಡ್ಡ ಮಟ್ಟದ ಬೆಂಬಲ ಹರಿದು ಬರುತ್ತಿರುವುದನ್ನು ಕಂಡ ರಶ್ಮಿಕಾ ತನಗೆ ಬೆಂಬಲ ನೀಡಿದವರಿಗೆಲ್ಲಾ, ಥ್ಯಾಂಕ್ಯೂ ಮೈ ಲವ್ಸ್ ಎಂದು ಧನ್ಯವಾದಗಳನ್ನು ಹೇಳಿದ್ದಾರೆ.

Leave a Comment