ಶಿಕ್ಷೆಗೆ ಹೆದರಿ ನಟಿ ಅಭಿನಯ ನಾಪತ್ತೆ: ತಲೆ ಮರೆಸಿಕೊಂಡ ನಟಿಯ ಪತ್ತೆಗೆ ಬಲೆ ಬೀಸಿದ ಪೋಲಿಸ್ ಇಲಾಖೆ

Written by Soma Shekar

Published on:

---Join Our Channel---

ಇತ್ತೀಚಿಗಷ್ಟೇ ಕನ್ನಡ ಸಿನಿಮಾ(Sandalwood) ಹಾಗೂ ಕಿರುತೆರೆಯ ನಟಿ ಅಭಿನಯ(Abhinaya) ಅವರ ವಿಷಯವಾಗಿ ದೊಡ್ಡ ಸುದ್ದಿಯೊಂದು ಎಲ್ಲೆಡೆ ಹರಿದಾಡಿ ಅಚ್ಚರಿಯನ್ನು ಮೂಡಿಸಿತ್ತು. ಅಭಿನಯ ಅವರಿಗೆ ಕೋರ್ಟ್ ಜೈಲು ಶಿ ಕ್ಷೆ ಯನ್ನು ವಿಧಿಸಿದ್ದ ವಿಚಾರ ಸಿಕ್ಕಾಪಟ್ಟೆ ಚರ್ಚೆಗೆ ಒಳಗಾದ ವಿಷಯವೂ ಆಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಸಹಾ ಈ ವಿಚಾರವಾಗಿ ನೆಟ್ಟಿಗರಿಂದ ವೈವಿದ್ಯಮಯ ರೀತಿಯಲ್ಲಿ ಪ್ರತಿಕ್ರಿಯೆಗಳು ಹರಿದು ಬಂದಿದ್ದವು. ಆದರೆ ಈಗ ಇವೆಲ್ಲವುಗಳ ನಂತರ ಅಭಿನಯ ಹಾಗೂ ಅವರ ಕುಟುಂಬದ ಮೇಲೆ ಲುಕೌಟ್ ನೋಟೀಸನ್ನು(look out notice) ಜಾರಿ ಮಾಡಲಾಗಿದೆ.

ಅಭಿನಯ ಅವರ ಅತ್ತಿಗೆ ವರಲಕ್ಷ್ಮಿ(Varalakshmi) ಅವರು ಅಭಿನಯ ಅವರ ಕುಟುಂಬದ ಮೇಲೆ ವರದಕ್ಷಿಣೆ ಕಿ ರು ಕು ಳ ದ ಪ್ರಕರಣವನ್ನು ದಾಖಲು ಮಾಡಿದ್ದರು. ನಟಿಯ ಕುಟುಂಬವು ವರದಕ್ಷಿಣೆ (Dowry) ಹಣವನ್ನು ಪಡೆದಿದ್ದು ಮಾತ್ರವೇ ಅಲ್ಲದೇ ಅನಂತರ ವರಲಕ್ಷ್ಮಿ ಅವರನ್ನು ಅವರ ಪೋಷಕರಿಗೆ ಮನೆಗೆ ಅಟ್ಟಿದ್ದರು. ಅಭಿನಯ ಮತ್ತು ಅವರ ಕುಟುಂಬ ವರದಕ್ಷಿಣೆ ರೂಪದಲ್ಲಿ 80 ಸಾವಿರ ಹಣ ಮತ್ತು 250 ಗ್ರಾಂ ಚಿನ್ನ ಪಡೆದಿರುವುದು ಸಾಬೀತಾಗಿತ್ತು. ಪ್ರಕರಣದ ವಿಚಾರಣೆ ನಂತರ ಸೆಷೆನ್ಸ್ ಕೋರ್ಟ್ ಅಭಿನಯ, ಅವರ ತಾಯಿ ಮತ್ತು ಸಹೋದರನಿಗೆ ಜೈ ಲು ಶಿ ಕ್ಷೆ ಯನ್ನು ವಿಧಿಸಿತ್ತು.

ಇದನ್ನೂ ಓದಿ: ರಶ್ಮಿಕಾಗೆ ಇದೇನಾಯ್ತು? ನಿಜಕ್ಕೂ ನಟಿಗೆ ಆ ಸಮಸ್ಯೆ ಕಾಡ್ತಿದೆಯಾ? ಚಿಂತೆಗೀಡಾದ ಫ್ಯಾನ್ಸ್

ಜೈ ಲು ಶಿ ಕ್ಷೆ ಘೋಷಣೆ ಆದ ಬೆನ್ನಲ್ಲೇ ನಟಿ ಅಭಿನಯ ಮತ್ತು ಅವರ ಕುಟುಂಬದವರು ಪೋಲಿಸರ ಕೈಗೆ ಸಿಗದಂತೆ ತಲೆಮರೆಸಿಕೊಂಡಿದ್ದಾರೆ. ಅಲ್ಲದೇ ಅಭಿನಯ ಮತ್ತು ಅವರ ತಾಯಿ ಸೆಷೆನ್ಸ್ ಕೋರ್ಟ್ ನ ಆದೇಶವನ್ನು ಪ್ರಶ್ನೆ ಮಾಡುತ್ತಾ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಹೈಕೋರ್ಟ್ ಸಹಾ ಸೆಷೆನ್ ಕೋರ್ಟ್ ನ ಆದೇಶವನ್ನೇ ಎತ್ತಿ ಹಿಡಿದಿದ್ದರಿಂದ ನಟಿ ಅಭಿನಯ ಅವರಿಗೆ ಹೈಕೋರ್ಟ್ ನಲ್ಲಿ ಹಿನ್ನೆಡೆಯಾಗಿತ್ತು.

ಈ ಹಿನ್ನಲೆಯಲ್ಲಿ ಪೋಲಿಸರು ಇವರನ್ನು ಬಂ ಧಿ ಸ ಬೇಕಾಗಿತ್ತು. ಆದರೆ ನಟಿಯ ಕುಟುಂಬದವರು ಪೋಲಿಸರ ಕೈಗೆ ಸಿಗದಂತೆ ತಪ್ಪಿಸಿಕೊಂಡಿದ್ದಾರೆ. ತಲೆ ಮರೆಸಿಕೊಂಡಿರುವ ನಟಿಯನ್ನು, ಅವರ ತಾಯಿ ಮತ್ತು ಸಹೋದರನನ್ನು ಪತ್ತೆ ಹಚ್ಚುವ ಸಲುವಾಗಿ ಲುಕ್ ಔಟ್ ನೋಟೀಸನ್ನು ಜಾರಿ ಮಾಡಿದೆ. ಸಾರ್ವಜನಿಕರಿಗೆ ಇವರ ಬಗ್ಗೆ ಯಾವುದೇ ಮಾಹಿತಿ ದೊರೆತರೂ ಕೂಡಲೇ ಪೋಲಿಸರಿಗೆ ತಿಳಿಸುವಂತೆ ಮನವಿಯನ್ನು ಮಾಡಲಾಗಿದೆ.

Leave a Comment