ಭಾರತೀಯ ಸಿನಿಮಾಗಳು ಯಾವುದೇ ಭಾಷೆಯದ್ದೇ ಆಗಿರಲಿ, ಅದರಲ್ಲಿ ವಿಶೇಷವಾದ ಹಾಡುಗಳಿಗೆ ಹಿಂದಿನಿಂದಲೂ ಸಹಾ ಬಹಳ ವಿಶೇಷವಾದ ಪ್ರಾಮುಖ್ಯತೆಯನ್ನು ಹೊಂದಿದೆ. ಈ ವಿಶೇಷ ಹಾಡುಗಳು ಐಟಂ ಸಾಂಗ್ ಗಳೆಂದೇ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಕೆಲವು ಸಿನಿಮಾಗಳಲ್ಲಿ ಐಟಂ ಹಾಡುಗಳು ದೊಡ್ಡ ಸದ್ದನ್ನು ಮಾಡಿರುವ ಸಾಕಷ್ಟು ಉದಾಹರಣೆಗಳು ಇವೆ. ಪ್ರಸ್ತುತ ಸೂಪರ್ ಹಿಟ್ ಎನಿಸಿರುವ ಪುಷ್ಪ ಸಿನಿಮಾದಲ್ಲಿನ ನಟಿ ಸಮಂತಾ ಹೆಜ್ಜೆ ಹಾಕಿರುವ ಐಟಂ ಹಾಡು ಮಾಡಿರುವ ಮ್ಯಾಜಿಕ್ ಅದಕ್ಕೊಂದು ಉದಾಹರಣೆ ಎನ್ನಬಹುದು.
ಇನ್ನು ಕೆಲವು ನಟಿಯರು ಇಂತಹ ಹಾಡುಗಳಿಂದಲೇ ಸಿನಿಮಾ ನಟಿಯರಿಗಿಂತಲೂ ಹೆಚ್ಚಿನ ಜನಪ್ರಿಯತೆ ಪಡೆದ, ಸ್ಟಾರ್ ನಟಿಯರ ಹಾಗೆ ಸ್ಟಾರ್ ಡಂ ಪಡೆದ ಉದಾಹರಣೆಗಳು ಸಹಾ ಇದೆ. ಬಾಲಿವುಡ್ ನಟಿ, ಡಾನ್ಸರ್ ನೋರಾ ಫತೇಹಿ ಅದಕ್ಕೆ ಅತ್ಯುತ್ತಮ ಉದಾಹರಣೆ ಆಗಿದ್ದಾರೆ. ಹೌದು, ಬಾಲಿವುಡ್ ನ ಈ ನಟಿ ಐಟಂ ಸಾಂಗ್ ಗಳಿಂದ ಸೃಷ್ಟಿಸಿರುವ ಕ್ರೇಜ್ ಅಷ್ಟಿಷ್ಟಲ್ಲ. ನೋರಾ ಸಿನಿಮಾ ಒಂದರ ಹಾಡಿಗೆ ಹೆಜ್ಜೆ ಹಾಕಲು ಕೋಟಿ ಕೋಟಿ ಸಂಭಾವನೆ ನೀಡಿ ಅವರನ್ನು ಕರೆ ತರಲಾಗುತ್ತದೆ.
ಬಾಲಿವುಡ್ ಮಾತ್ರವೇ ಅಲ್ಲದೇ ದಕ್ಷಿಣದಲ್ಲೂ ನೋರಾ ಹವಾ ಇದೆ. ಆದರೆ ನೋರಾ ಹೆಚ್ಚು ಜನಪ್ರಿಯತೆ ಪಡೆದಿದ್ದು ಮಾತ್ರ ಬಾಲಿವುಡ್ ನಲ್ಲೇ. ಸಿನಿಮಾ ಹಾಡುಗಳಿಗೆ ಹೆಜ್ಜೆ ಹಾಕುತ್ತಾ, ಡಾನ್ಸ್ ರಿಯಾಲಿಟಿ ಶೋ ಗಳಲ್ಲಿ ಅತಿಥಿ ಜಡ್ಜ್ ಆಗಿ ನೋರಾ ದೊಡ್ಡ ಮಟ್ಟದ ಜನಪ್ರಿಯತೆ ಪಡೆದಿದ್ದಾರೆ. ಇನ್ನು ನೋರಾ ಡಾನ್ಸ್ ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ಸಹಾ ನೋರಾ ಫತೇಹಿ ಅವರನ್ನು ಹಿಂಬಾಲಿಸುವ ಅಭಿಮಾನಿಗಳ ಸಂಖ್ಯೆ ಲಕ್ಷಗಳ ಸಂಖ್ಯೆಯಲ್ಲಿ ಇದೆ.
ನೋರಾ ಫತೇಹಿ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಹಂಚಿಕೊಳ್ಳುವ ಫೋಟೋಗಳು ಭರ್ಜರಿಯಾಗಿ ವೈರಲ್ ಆಗಿ, ಅಭಿಮಾನಿಗಳ ಹೃದಯಕ್ಕೆ ಲಗ್ಗೆ ಇಡುತ್ತದೆ. ಕೆಲವೇ ದಿನಗಳ ಹಿಂದೆಯಷ್ಟೇ ಕೊರೊನಾ ದಿಂದ ಚೇತರಿಸಿಕೊಂಡ ನೋರಾ ಇದೀಗ ದುಬೈನಲ್ಲಿ ರಜಾ ದಿನಗಳನ್ನು ಕಳೆಯುವಲ್ಲಿ ಗಮನ ನೀಡಿ, ಆನಂದದ ದಿನಗಳನ್ನು ಕಳೆಯುತ್ತಲೇ ತಮ್ಮ ಎಲ್ಲಾ ಅಭಿಮಾನಿಗಳಿಗೆ ದೊಡ್ಡ ಶಾ ಕ್ ಒಂದನ್ನು ನೀಡಿದ್ದಾರೆ ನೋರಾ. ಇದನ್ನು ಕಂಡು ಅವರ ಅಭಿಮಾನಿಗಳು ಸಹಾ ಶಾ ಕ್ ಆಗಿದ್ದಾರೆ.
ಹೌದು, ನಿನ್ನೆಯವರೆಗೆ ನೋರಾ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು. ನಿನ್ನೆ ಸಹಾ ಸಿಂಹಗಳ ಜೊತೆ ನೋರಾ ನೀಡಿದ್ದ ಪೋಸ್ ಒಂದು ದೊಡ್ಡ ಮಟ್ಟದಲ್ಲಿ ವೈರಲ್ ಆಗಿತ್ತು. ಅಭಿಮಾನಿಗಳು ಲೈಕ್ ಒತ್ತಿದ್ದರು, ಕಾಮೆಂಟ್ ಮಾಡಿ ಮೆಚ್ಚುಗೆ ನೀಡಿದ್ದರು. ಆದರೆ ಅದಾದ ಕೆಲವು ಗಂಟೆಗಳ ನಂತರ ನೋರಾ ತಮ್ಮ ಇನ್ಸ್ಟಾಗ್ರಾಂ ಖಾತೆಯನ್ನು ಡಿಲೀಟ್ ಮಾಡಿದ್ದಾರೆ. ನೋರಾ ಇನ್ಸ್ಟಾಗ್ರಾಂ ಖಾತೆ ಇಲ್ಲದೇ ಇರುವುದನ್ನು ಕಂಡು ಅಭಿಮಾನಿಗಳಲ್ಲಿ ನೂರು ಅನುಮಾನಗಳು ಮೂಡಿವೆ.
ಇನ್ಸ್ಟಾಗ್ರಾಂ ನಲ್ಲಿ ನೋರಾ ಅವರನ್ನು 37.6 ಮಿಲಿಯನ್ ಸಂಖ್ಯೆಯಲ್ಲಿ ಅಭಿಮಾನಿಗಳು ಹಾಗೂ ನೆಟ್ಟಿಗರು ಫಾಲೋ ಮಾಡುತ್ತಿದ್ದಾರೆ. ಇನ್ನು ನೋರಾ ಫತೇಹಿ ತನ್ನ ಖಾತೆಯನ್ನು ಡಿಲೀಟ್ ಮಾಡಿರುವ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡಿಲ್ಲ. ಅಭಿಮಾನಿಗಳು ನೋರಾ ತಮ್ಮ ಖಾತೆ ಡಿಲೀಟ್ ಮಾಡಿದ್ದೇಕೆ? ಎಂದು ಕಾರಣ ತಿಳಿಯಲು ಉತ್ಸುಕರಾಗಿದ್ದಾರೆ. ನೋರಾ ಮಾಡಿದ್ದ ಕೊನೆಯ ಪೋಸ್ಟ್ ಅವರ ಫ್ಯಾನ್ ಪೇಜ್ ಗಳಲ್ಲಿ ಲಭ್ಯವಿದೆ. ನಟಿಯ ಈ ನಿರ್ಧಾರಕ್ಕೆ ಕಾರಣವೇನು? ಸದ್ಯಕ್ಕೆ ಈ ಪ್ರಶ್ನೆಗೆ ಉತ್ತರವಿಲ್ಲ.