ಬಿಗ್ ಬಾಸ್ ಗೆದ್ದ ನಂತರ ನಂದಿನಿಗೆ ಬಿಗ್ ಸರ್ಪ್ರೈಸ್ ಕೊಟ್ಟ ರೂಪೇಶ್ ಶೆಟ್ಟಿ: ವೈರಲ್ ಫೋಟೋಗಳು

Written by Soma Shekar

Published on:

---Join Our Channel---

ರೂಪೇಶ್ ಶೆಟ್ಟಿ(Roopesh Shetty) ಕನ್ನಡ ಬಿಗ್ ಬಾಸ್ ಸೀಸನ್ 9 (Big Boss Kannada) ರ ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ. ಟಿವಿ ಬಿಗ್ ಬಾಸ್ ಗೆ ಬರುವುದಕ್ಕೂ ಮೊದಲು ರೂಪೇಶ್ ಶೆಟ್ಟಿ ಕನ್ನಡ ಬಿಗ್ ಬಾಸ್ ನ ಓಟಿಟಿ ಮೊದಲ ಸೀಸನ್ ಗೆ ಸ್ಪರ್ಧಿಯಾಗಿ ಎಂಟ್ರಿ ನೀಡಿದ್ದರು. ಓಟಿಟಿ ಬಿಗ್ ಬಾಸ್ ನಲ್ಲೂ ಸಾಕಷ್ಟು ಜನರ ಮನಸ್ಸನ್ನು ಗೆದ್ದಿದ್ದ ರೂಪೇಶ್ ಶೆಟ್ಟಿ(Roopesh Shetty) ಅನಂತರ ಅಲ್ಲಿ ಸಿಕ್ಕ ಜನಪ್ರಿಯತೆ ಮತ್ತು ಗೆಲುವಿನ ಫಲವಾಗಿ ಟಿವಿ ಬಿಗ್ ಬಾಸ್ ಗೆ(Big Boss Kannada) ಎಂಟ್ರಿ ನೀಡಿದರು, ಅಲ್ಲೂ ಕೂಡಾ ತಮ್ಮ ಗೆಲುವಿನ ಪತಾಕೆಯನ್ನು ಹಾರಿಸಿದ್ದಾರೆ.

ಬಿಗ್ ಬಾಸ್ ಕನ್ನಡ ಓಟಿಟಿ ಒಂದರಲ್ಲಿ ರೋಡೀಸ್(Roadies) ಶೋ ನ‌ ವಿನ್ನರ್ ಆಗಿದ್ದ ಬೆಂಗಳೂರು ಮೂಲದವರಾದ ನಂದಿನಿ(Nandini) ಸಹಾ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿದ್ದರು. ಆಗ ರೂಪೇಶ್ ಶೆಟ್ಟಿ ಮತ್ತು ನಂದಿನಿ ಬಿಗ್ ಬಾಸ್ ಮನೆಯಲ್ಲಿ ಆತ್ಮೀಯರಾಗಿದ್ದರು. ಅವರ ನಡುವೆ ಉತ್ತಮ ಸ್ನೇಹ ಮೂಡಿತ್ತು. ರೂಪೇಶ್ ನಂದಿನಿಯನ್ನು ತಂಗಿಯಂತೆ ನೋಡುತ್ತಿದ್ದರು. ಇದನ್ನೂ ಓದಿ: ಪಠಾಣ್ ಪೋಸ್ಟರ್ ಹರಿದ ಭಜರಂಗದಳ: ಇದನ್ನು ಖಂಡಿಸಿ ಸಿಡಿದೆದ್ದ ಬಾಲಿವುಡ್ ನಟಿ ಪೂಜಾ ಭಟ್

ನಂದಿನಿ(Nandini) ಬಿಗ್ ಬಾಸ್ ಓಟಿಟಿ ಶೋ ನಿಂದ ಔಟ್ ಆದಾಗ ರೂಪೇಶ್ ಶೆಟ್ಟಿ ಬಹಳ ಬೇಸರ ಪಟ್ಡಿದ್ದರು. ನಂದಿನಿ ಅವರಿಗೆ ಟಿವಿ ಬಿಗ್ ಬಾಸ್ ಗೆ ಎಂಟ್ರಿ ನೀಡುವ ಅವಕಾಶ ಸಿಗಲಿಲ್ಲ. ಈಗ ಟಿವಿ ಬಿಗ್ ಬಾಸ್ ಮುಗಿದ ಮೇಲೆ, ಶೋ ನ ವಿನ್ನರ್ ಆದ ರೂಪೇಶ್ ಶೆಟ್ಟಿ ಅವರು ನಂದಿನಿ ಗೆ ಒಂದು ದೊಡ್ಡ ಸರ್ಪ್ರೈಸ್ ನೀಡುವ ಮೂಲಕ ಗಮನವನ್ನು ಸೆಳೆದಿದ್ದು, ಇದು ದೊಡ್ಡ ಸುದ್ದಿಯಾಗಿದೆ.‌

ಇತ್ತೀಚಿಗಷ್ಟೇ ನಂದಿನಿ(Nandini) ಅವರು ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿದ್ದರು. ನಂದಿನಿ ಬರ್ತಡೇ ಗೆ(Nandini Birthday) ರೂಪೇಶ್ ಶೆಟ್ಟಿ ಸರ್ಪ್ರೈಸ್ ವಿಸಿಟ್ ನೀಡುವ ಮೂಲಕ ಅಚ್ಚರಿಯನ್ನು ಮೂಡಿಸಿದ್ದರು. ನಂದಿನಿ ಅವರ ಜೊತೆಗೆ ರೂಪೇಶ್ ಶೆಟ್ಟಿ ಅವರ ಜೊತೆಗೆ ಒಂದಷ್ಟು ಖುಷಿಯ ಸಮಯವನ್ನು ಕಳೆದಿದ್ದಾರೆ. ನಂದಿನಿ ಜೊತೆಗೆ ರೂಪೇಶ್ ಶೆಟ್ಟಿ ಕ್ಲಿಕ್ಕಿಸಿಕೊಂಡ ಫೋಟೋಗಳು ವೈರಲ್ ಆಗಿದೆ‌.

ನಂದುಗೆ ರೂಪೇಶ್ ಶೆಟ್ಟಿ(Roopesh Shetty) ಅವರು ಜನ್ಮದಿನ ಕ್ಕೆ ಶುಭಾಶಯವನ್ನು ತಿಳಿಸಿದ್ದಾರೆ. ರೂಪೇಶ್ ಶೆಟ್ಟಿ ಅವರನ್ನು ನೋಡಿ ನಂದಿನಿ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ನಂದಿನಿ(Nandini) ಅವರು ರೂಪೇಶ್ ಶೆಟ್ಟಿ ಜೊತೆಗೆ ತಮ್ಮ ಜನ್ಮದಿನವನ್ನು ಬಹಳ ಖುಷಿಯಿಂದ ಆಚರಿಸಿಕೊಂಡು ಸಂಭ್ರಮಿಸಿದ್ದಾರೆ. ವೈರಲ್ ಫೋಟೋಗಳಿಗೆ ಅಭಿಮಾನಿಗಳು ಮೆಚ್ಚುಗೆಗಳನ್ನು ನೀಡಿದ್ದಾರೆ.

Leave a Comment