ದೇಶದ ಕಾನೂನು ವ್ಯವಸ್ಥೆಯ ವಿರುದ್ಧ ಸಿಡಿದೆದ್ದ ಉರ್ಫಿ ಜಾವೇದ್: ಸೋಶಿಯಲ್ ಮೀಡಿಯಾದಲ್ಲಿ ನಟಿಯ ಆಕ್ರೋಶ

Written by Soma Shekar

Published on:

---Join Our Channel---

ಇಂಟರ್ನೆಟ್ ಸೆನ್ಸೇಷನ್ ಉರ್ಫಿ ಜಾವೇದ್ ತನ್ನ ಚಿತ್ರ ವಿಚಿತ್ರವಾದ ಬೋಲ್ಡ್ ಡ್ರೆಸ್ ಗಳಿಂದಾಗಿಯೇ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿರುವ ನಟಿಯಾಗಿದ್ದಾರೆ. ಉರ್ಫಿ ತನ್ನ ಡ್ರೆಸ್ ಗಳನ್ನು ಎಂತಹ ವಸ್ತುಗಳನ್ನು ಬಳಸಿ ಡಿಸೈನ್ ಮಾಡಿಸುತ್ತಾರೆ ಎಂದರೆ ಅದನ್ನು ನೋಡಿ ನೆಟ್ಟಿಗರ ಅಚ್ಚರಿ ಪಡುತ್ತಾರೆ, ಇನ್ನೂ ಕೆಲವೊಮ್ಮೆ ದಿಗ್ಭ್ರಮೆ ಪಡುತ್ತಾರೆ. ಅನೇಕ ಸಂದರ್ಭಗಳಲ್ಲಿ ಉರ್ಫಿಯನ್ನು ಭರ್ಜರಿಯಾಗಿ ಟ್ರೋಲ್ ಮಾಡಲಾಗುತ್ತದೆ. ಆದರೆ‌ ಉರ್ಫಿ ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ತನ್ನದೇ ಲೋಕದಲ್ಲಿ ಮುಳುಗಿರುತ್ತಾರೆ. ಜನರು ಆಡುವ ಮಾತುಗಳು ಉರ್ಫಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಆದರೂ ಇತ್ತೀಚಿಗೆ ಸುತ್ತ ಮುತ್ತ ನಡೆಯುತ್ತಿರುವ ಘಟನೆಗಳ ಪ್ರಭಾವ ಉರ್ಫಿ ಮೇಲೆ ಆಗುತ್ತಿದ್ದು ಆಕೆ ಅದಕ್ಕೆ ಪ್ರತಿಕ್ರಿಯೆ ಸಹಾ ನೀಡುತ್ತಿದ್ದಾರೆ. ಅದೇ ಹಿನ್ನೆಲೆಯಲ್ಲಿ ಈ ಬಾರಿ ಉರ್ಫಿ ನೇರವಾಗಿ ದೇಶದ ಕಾನೂನು ವ್ಯವಸ್ಥೆಯ ಬಗ್ಗೆಯೇ ಪ್ರಶ್ನೆ ಮಾಡಿದ್ದು, ನಟಿಯ ಪೋಸ್ಟ್ ವೈರಲ್ ಆಗಿದೆ. ಉರ್ಫಿ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಎರಡು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅವರು ಸೈಬರ್ ಸೆಲ್ ನ ಬಗ್ಗೆ ಮಾತನಾಡುತ್ತಾ ಅಲ್ಲಿ ಜನರ ಮೇಲೆ ದೂರನ್ನು ದಾಖಲಿಸುವುದಿಲ್ಲ ಎಂದು ಅಸಮಾಧಾನವನ್ನು ಹೊರ ಹಾಕಿದ್ದಾರೆ. ಇಷ್ಟಕ್ಕೂ ಉರ್ಫಿಯು ಅಸಮಾಧಾನ ಹೊರಹಾಕಿ ಹೇಳಿದ್ದೇನು? ಇಲ್ಲಿದೆ ಉತ್ತರ.

ಉರ್ಫಿ ತಮ್ಮ ಪೋಸ್ಟ್ ನಲ್ಲಿ, ಸೈಬರ್ ಕಾನೂನು ಇಲ್ಲ. ಭಾರತದಲ್ಲಿನ ಸೈಬರ್ ಸೆಲ್ ಮತ್ತು ಪೊಲೀಸರು ಅಪರೂಪವಾಗಿ ದಾಖಲಾಗುವ ಪ್ರಕರಣಗಳ ಬಗ್ಗೆ ಮಾತ್ರವೇ ಹೆಚ್ಚಿನ ಗಮನ ಹರಿಸುತ್ತಾರೆ. ಆದ್ದರಿಂದಲೇ ಜನರು ದೂರು ನೀಡಲು ಹಿಂದೇಟು ಹಾಕುತ್ತಿದ್ದಾರೆ. ಜನರು ಓಪನ್ ಆಗಿ ಬೆದರಿಕೆ ಹಾಕುತ್ತಾರೆ. ಶೋ ಷ ಣೆ ಮಾಡುತ್ತಾರೆ. ಆನ್‌ಲೈನ್‌ನಲ್ಲಿ ಅ ತ್ಯಾ ಚಾರಕ್ಕೆ ಬೆ ದ ರಿಕೆ ಹಾಕುತ್ತಾನೆ. ಆದರೆ ಏನೂ ಮಾಡಲಾಗುತ್ತಿಲ್ಲ. ನಾವು ಇದನ್ನೆಲ್ಲ ಏಕೆ ನಿರ್ಲಕ್ಷಿಸಬೇಕು ಎಂದು ನನಗೆ ಅರ್ಥವಾಗುತ್ತಿಲ್ಲ? ಎಂದು’ ಅಸಮಾಧಾನ ಹೊರ ಹಾಕಿದ್ದಾರೆ.

ಇದಲ್ಲದೇ ಉರ್ಫಿ ತಮ್ಮ ಪೋಸ್ಟ್ ನಲ್ಲಿ, ಮೀರತ್‌ ನಲ್ಲಿ ನಡೆದ ಘಟನೆಯ ಸ್ಕ್ರೀನ್‌ಶಾಟ್ ಶೇರ್ ಮಾಡಿಕೊಂಡಿದ್ದು, ಇದರಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ಸುಷ್ಮಾ ಸಿಂಗ್ ಮಾವಾನಾ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್‌ಗೆ ಛೀ ಮಾ ರಿ ಹಾಕುತ್ತಿದ್ದಾರೆ. ವಾಸ್ತವವಾಗಿ, ಮಹಿಳೆಯೊಬ್ಬರು ಆಯೋಗದ ಅಧ್ಯಕ್ಷರಿಗೆ ದೂರು ನೀಡಿದ್ದರು. 5 ತಿಂಗಳ ಹಿಂದೆ ತನ್ನ ಮಾವ ತನ್ನ ಮೇಲೆ ಅ ತ್ಯಾ ಚಾ ರ ಕ್ಕೆ ಯತ್ನಿಸಿದ್ದ ಎಂದು ಹೇಳಿದ್ದಾಳದ. ಆದರೆ ಪ್ರಕರಣ ದಾಖಲಾಗಿದ್ಧೂ ಸಹಾ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.

ಈಗ ಇದೇ ವಿಚಾರವಾಗಿ ಬರೆದುಕೊಂಡಿರುವ ಉರ್ಫಿ, ‘ಪೊಲೀಸರು ರಾಜಕಾರಣಿ ಅಥವಾ ಶ್ರೀಮಂತರನ್ನು ನಿಂದಿಸಿದಾಗ ಮಾತ್ರ ತಕ್ಷಣವೇ ಜಾರಿಗೆ ಬರುವಂತೆ ಕ್ರಮಗಳನ್ನು ಜರುಗಿಸುತ್ತಾರೆ. ಆದರೆ ಅದೇ ವೇಳೆ ವಾಸ್ತವದಲ್ಲಿ ಇದು ಮಧ್ಯಮ ವರ್ಗದ ಅಥವಾ ಕೆಳವರ್ಗದ ಕುಟುಂಬದ ಸಮಸ್ಯೆ ಆಗಿದ್ದಲ್ಲಿ ಅವರು ಹೆಚ್ಚು ಹೆಣಗಾಡುಬೇಕಾಗುತ್ತದೆ. ಉರ್ಫಿ ಜಾವೇದ್ ಬಹು ಚರ್ಚಿತ ವಿಷಯಗಳ ಬಗ್ಗೆ ಗಮನ ನೀಡುತ್ತಾರೆ. ಇದಕ್ಕೆ ಮೊದಲು ಸಹಾ ಉರ್ಫಿ ಹಲವು ಸಾಮಾಜಿಕ ಸಮಸ್ಯೆಗಳ ಕುರಿತಾಗಿ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

Leave a Comment