ದೇಶದಲ್ಲಿ ಇದೇ ಮೊದಲು: ಮಹಿಳಾ ಪೋಲಿಸ್ ಪೇದೆಗೆ ಪುರುಷನಾಗಲು ಸಿಕ್ತು ಅಧಿಕೃತ ಸಮ್ಮತಿ

Written by Soma Shekar

Published on:

---Join Our Channel---

ಮಹಿಳಾ ಪೋಲಿಸ್ ಕಾನ್ಸ್‌ಟೇಬಲ್ ಪುರುಷನ ಹಾಗೆ ಕೆಲಸ ಮಾಡೋದು ಅಂತ ಕೆಲವರು ಹೇಳೋದು ನಾವು ನೋಡಿದ್ದೇವೆ‌. ಆದ್ರೆ ಅದೇ ಮಹಿಳಾ ಕಾನ್ಸ್‌ಟೇಬಲ್ ಪುರುಷನಾಗಿ ಬದಲಾಗಿ ಹೋದ್ರೆ?? ಎನ್ನುವ ಪ್ರಶ್ನೆ ಬಂದಾಗ, ಇದೆಂತಾ ಪ್ರಶ್ನೆ?? ಹೀಗೆಲ್ಲಾ ಆಗೋಕೆ ಸಾಧ್ಯಾನಾ?? ಅನ್ನೋ ಮಾತುಗಳು ಕೇಳಿ ಬರುತ್ತೆ. ಆದ್ರೆ ಈಗ ದೇಶದಲ್ಲಿ ಇದೇ ಮೊದಲ ಬಾರಿಗೆ ಇಂತಹುದೊಂದು ಘಟನೆ ನಡೆದಿದ್ದು, ದೊಡ್ಡ ಸುದ್ದಿಯಾಗಿದೆ, ಸುದ್ದಿ ಎನ್ನುವುದಕ್ಕಿಂತ ಇದೊಂದು ಹೊಸ ಸಂಚಲನವನ್ನು ಸೃಷ್ಟಿಸಿದೆ ಎಂದರೂ ಸಹಾ ತಪ್ಪಾಗಲಾರದು. ಬನ್ನಿ ಇದರ ಬಗ್ಗೆ ಇನ್ನಷ್ಟು ತಿಳಿಯೋಣ.

ಮಧ್ಯಪ್ರದೇಶದಲ್ಲಿ ಮಹಿಳಾ ಪೋಲಿಸ್ ಕಾನ್ಸ್‌ಟೇಬಲ್ ಒಬ್ಬರು ಈಗ ಇಂತಹ ಕಾರ್ಯಕ್ಕೆ ಮುಂದಾಗಿದ್ದಾರೆ. ವಿಶೇಷವೆಂದರೆ ಈಕೆಯ ಈ ನಿರ್ಧಾರಕ್ಕೆ ರಾಜ್ಯದ ಗೃಹ ಇಲಾಖೆಯಿಂದ ಸಹಾ ಅಧಿಕೃತವಾಗಿ ಒಪ್ಪಿಗೆಯನ್ನು ನೀಡಿದ್ದು, ಇಂತಹುದೊಂದು ಬೆಳವಣಿಗೆ ಹಾಗೂ ಘಟನೆ ದೇಶದಲ್ಲೇ ಇದೇ ಮೊದಲು ಎನ್ನುವುದು ಎಲ್ಲರ ಗಮನವನ್ನು ಸೆಳೆದಿದೆ. ಈ ವಿಷಯವನ್ನು ಹಿರಿಯ ಅಧಿಕಾರಿಯೊಬ್ಬರು ಸಹಾ ಇದು ನಿಜವೆನ್ನುವ ಮಾತನ್ನು ಹೇಳಿದ್ದಾರೆ.

ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರಾದ, ಡಾ.ರಾಜೇಶ್ ಅರೋರಾ ಅವರು ಪಿಟಿಐ ಗೆ ನೀಡಿರುವ ಮಾಹಿತಿಯಲ್ಲಿ, ರಾಜ್ಯದ ಇಲಾಖೆಯೊಂದರಲ್ಲಿ ಹೆಣ್ಣೊಬ್ಬರು ಪುರುಷನಾಗಿ ಲಿಂಗ ಪರಿವರ್ತನೆ ಮಾಡಿಸಿಕೊಳ್ಳಲು ಇದೇ ಮೊದಲ ಬಾರಿಗೆ ಅನುಮತಿಯನ್ನು ನೀಡಲಾಗಿದೆ ಎನ್ನುವ ಮಾತು ಹೇಳಿದ್ದು, ಮುಂದೆ ಆಕೆ ಇಲಾಖೆಯಲ್ಲಿನ ಇತರೆ ಪುರುಷ ಪೋಲಿಸ್ ಪೇದಗಳ ರೀತಿಯಲ್ಲಿ ಕೆಲಸವನ್ನು ನಿರ್ವಹಿಸುವ ಅವಕಾಶವನ್ನು ನೀಡಲಾಗಿದೆ ಎಂದಿದ್ದಾರೆ.

ಇನ್ನು ಆಕೆಯ ಬಗ್ಗೆ ಪ್ರಖ್ಯಾತ ಮನಃಶಾಸ್ತ್ರಜ್ಞರು ಬಾಲ್ಯದಿಂದಲೇ ಆಕೆಗೆ ತನ್ನ ಲಿಂಗ ಗುರುತಿನ ಅಸ್ವಸ್ಥತೆ ಇತ್ತು ಎನ್ನುವುದನ್ನು ದೃಢಪಡಿಸಿದ ಹಿನ್ನೆಲೆಯಲ್ಲಿ ಆಕೆಗೆ ಮಧ್ಯಪ್ರದೇಶ ಗೃಹ ಇಲಾಖೆಯು ಲಿಂಗ ಪರಿವರ್ತನೆ ಅವಕಾಶವನ್ನು ನೀಡುವ ಸಲುವಾಗಿಯೇ ಆಕೆಗೆ ಅನುಮತಿಯನ್ನು ನೀಡಲಾಗಿದೆ ಎನ್ನುವ ವಿಚಾರವನ್ನು ಹಂಚಿಕೊಂಡಿದ್ದಾರೆ. ಇಂತಹ ಘಟನೆ ಇದೇ ಮೊದಲು ಎನ್ನುವುದು ವಿಶೇಷ. ಆಕೆ ಲಿಂಗ ಪರಿವರ್ತನೆ ನಂತರವೂ ಪುರಷನಾಗಿ ತನ್ನ ಉದ್ಯೋಗ ನಿರ್ವಹಣೆ ಮಾಡಲು ಅವಕಾಶ ನೀಡಲಾಗಿದೆ.‌

Leave a Comment