ದೇವರ ಮುಂದೆ ದೀಪ ಹಚ್ಚುವಾಗ ಈ ತಪ್ಪುಗಳನ್ನು ಮಾಡಿದರೆ ದಾರಿದ್ರ್ಯ ನೆಲೆಗೊಳ್ಳುತ್ತದೆ ಎಚ್ಚರ!!

Written by Soma Shekar

Published on:

---Join Our Channel---

ಹಿಂದೂ ಧರ್ಮದಲ್ಲಿ, ಆರತಿ ಇಲ್ಲದೇ ದೇವರ ಪೂಜೆಯನ್ನು ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಆರತಿಗೆ ವಿಶೇಷವಾದ ಮಹತ್ವವಿದೆ‌. ಇನ್ನು ದೇವರಿಗೆ ಆರತಿ ಮಾಡುವ ಸಮಯದಲ್ಲಿ ದೀಪವನ್ನು ಬೆಳಗಿಸುವುದು ಬಹಳ ಮುಖ್ಯವಾದ ಸಂಪ್ರದಾಯವಾಗಿದೆ. ಇದಲ್ಲದೇ ಮನೆಯಲ್ಲಿ ಮತ್ತು ಸಂಜೆ ಪೂಜೆಯ ವೇಳೆಗೆ ತುಳಸಿ ಗಿಡದ ಮುಂದೆಯೂ ಹಚ್ಚಿ ದೀಪ ಹಚ್ಚುವ ಸಂಪ್ರದಾಯವಿದೆ. ಮನೆಯಲ್ಲಿ ಪ್ರತಿನಿತ್ಯ ದೀಪ ಹಚ್ಚುವುದರಿಂದ ಒಂದು ಸಕಾರಾತ್ಮಕತೆ ಮೂಡುತ್ತದೆ ಎನ್ನಲಾಗಿದೆ. ಇದರೊಂದಿಗೆ ವಾಸ್ತು ದೋಷಗಳು ನಿವಾರಣೆಯಾಗುತ್ತವೆ.

ದೀಪ ಬೆಳಗುವುದರಿಂದ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸುತ್ತದೆ. ದೇವತೆಗಳು ಇದರಿಂದ ಸಂತೋಷಪಡುವರು ಮತ್ತು ದೀಪ ಬೆಳಗಿ ಆರಾಧನೆ ಮಾಡಿದವರನ್ನು ಆಶೀರ್ವದಿಸುವರು ಎನ್ನಲಾಗಿದೆ. ಆದರೆ ದೀಪವನ್ನು ಬೆಳಗಿಸುವಾಗ ಕೆಲವು ತಪ್ಪುಗಳು ಶುಭ ಫಲದ ಬದಲಾಗಿ ನಮಗೆ ಒಂದು ದೊಡ್ಡ ಆರ್ಥಿಕ ನಷ್ಟವನ್ನು ಉಂಟುಮಾಡಬಹುದು ಎಂಬುದನ್ನು ನೆನಪಿನಲ್ಲಿಡಿ, ಆದ್ದರಿಂದಲೇ ದೀಪ ಹಚ್ಚುವಾಗ ಈ ಕೆಳಗಿನ ವಿಷಯಗಳ ಕಡೆಗೆ ಹೆಚ್ಚಿನ ಗಮನವನ್ನು ನೀಡಿ‌.

ಪೂಜೆಯ ಸಮಯದಲ್ಲಿ ಯಾವಾಗಲೂ ಶುಚಿಯಾಗಿರಿಸಿದ, ಶುದ್ಧವಾದ ದೀಪವನ್ನು ಬಳಸಿ. ಮುರಿದ ಅಥವಾ ಕೊಳಕು ದೀಪವನ್ನು ಎಂದಿಗೂ ಬಳಸಬೇಡಿ. ಅಂತಹ ದೀಪವು ಸಕಾರಾತ್ಮಕತೆಯ ಬದಲಿಗೆ ನಕಾರಾತ್ಮಕತೆಯನ್ನು ನೀಡುತ್ತದೆ. ತುಪ್ಪದ ದೀಪಕ್ಕೆ ಹತ್ತಿಯ ಬತ್ತಿಯನ್ನು ಮತ್ತು ಎಣ್ಣೆ ದೀಪಕ್ಕೆ ಕೆಂಪು ದಾರದಿಂದ ಮಾಡಿದ ಬತ್ತಿಯನ್ನು ಬಳಸಬೇಕು ಎಂಬುದನ್ನು ಯಾವಾಗಲೂ ನೆನಪಿನಲ್ಲಿಡಿ. ಧಾರ್ಮಿಕ ಕೆಲಸ ಮತ್ತು ಪೂಜೆಗಳಲ್ಲಿ ದೀಪ ಬೆಳಗುವ ಸರಿಯಾದ ಮಾರ್ಗ ಇದಾಗಿದೆ.

ಮನೆಯಲ್ಲಿ ಬೆಳಿಗ್ಗೆ ಮತ್ತು ಸಂಜೆ ಪೂಜೆಯನ್ನು ಮಾಡಿ ದೀಪವನ್ನು ಬೆಳಗಿಸಬೇಕು. ಇದರಿಂದ ಇಡೀ ಮನೆಯಲ್ಲಿ ಧನಾತ್ಮಕ ಶಕ್ತಿ ಉಳಿಯುತ್ತದೆ. ಆದರೆ ಇದನ್ನು ಹೊರತುಪಡಿಸಿ ಸಂಜೆಯ ವೇಳೆ ಮನೆಯ ಮುಖ್ಯ ಬಾಗಿಲಿನ ಬಳಿ ಪ್ರತಿದಿನವೂ ತಪ್ಪದೇ ದೀಪವನ್ನು ಬೆಳಗಿ. ಈ ರೀತಿ ದೀಪಗಳನ್ನು ಬೆಳಗಿಸುವುದರಿಂದ ದೇವಿ ಮಹಾಲಕ್ಷ್ಮಿ ಆ ಮನೆಯಲ್ಲಿ ಸದಾ ಕಾಲ ನೆಲೆಸಿರುವಳು ಎನ್ನಲಾಗಿದೆ.‌ ತುಪ್ಪದ ದೀಪವನ್ನು ಯಾವಾಗಲೂ ನಿಮ್ಮ ಎಡಗೈ ಕಡೆಗೆ ಮತ್ತು ಎಣ್ಣೆಯ ದೀಪವನ್ನು ನಿಮ್ಮ ಬಲಗೈಗೆ ಕಡೆಗೆ ಇಡುವುದು ಶ್ರೇಷ್ಠ ಎನ್ನಲಾಗಿದೆ.

ಪೂಜೆಯ ವೇಳೆ ಅಕಸ್ಮಾತ್ ದೀಪ ಆರಿದರೆ ತಕ್ಷಣ ಅದನ್ನು ಹಚ್ಚಿ ದೇವರಲ್ಲಿ ಕ್ಷಮೆ ಕೇಳಬೇಕು. ಅಲ್ಲದೇ ನಿಮ್ಮ ಜೀವನದಲ್ಲಿ ಎಲ್ಲವೂ ಒಳ್ಳೆಯದಾಗಲಿ ಎಂದು ದೇವರ ಮುಂದೆ ಭಕ್ತಿಯಿಂದ ಪ್ರಾರ್ಥನೆ ಮಾಡಿ. ಒಂದು ದೀಪದಿಂದ ಇನ್ನೊಂದು ದೀಪವನ್ನು ಬೆಳಗಿಸುವ ತಪ್ಪನ್ನು ಎಂದಿಗೂ ಮಾಡಬೇಡಿ, ಹಾಗೆ ಮಾಡುವುದರಿಂದ ವ್ಯಕ್ತಿಯು ಸಾಲದ ಸುಳಿಯಲ್ಲಿ ಸಿಲುಕುತ್ತಾನೆ ಎಂದು ಹೇಳಲಾಗಿದೆ.

Leave a Comment