ದೇವರ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ ಬಿಗ್ ಬಾಸ್ ಸೀಸನ್ 8 ರ ಟಾಪ್ 5 ಸ್ಪರ್ಧಿಗಳು

Written by Soma Shekar

Published on:

---Join Our Channel---

ಕನ್ನಡ ಬಿಗ್ ಬಾಸ್ ಸೀಸನ್ 8 ಮುಕ್ತಾಯದ ಹಂತವನ್ನು ತಲುಪಿದೆ. ಇನ್ನೇನು ಬರಲಿರುವ ಭಾನುವಾರದಂದು ಸೀಸನ್ ಎಂಟರ ಟ್ರೋಫಿ ಯಾರ ಕೈ ಸೇರಲಿದೆ ಎನ್ನುವ ಪ್ರಶ್ನೆಗೆ ಉತ್ತರ ಸಿಗಲಿದೆ. ಬಹಳಷ್ಟು ಅಡ್ಡಿ-ಆತಂಕಗಳನ್ನು ದಾಟಿಕೊಂಡು ಈ ಬಾರಿಯ ಬಿಗ್ ಬಾಸ್ ಸೀಸನ್, ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಎನ್ನುವಂತೆ ಮೊದಲ ಇನ್ನಿಂಗ್ಸ್ ಮತ್ತು ಎರಡನೇ ಇನ್ನಿಂಗ್ಸ್ ಎಂದು ಎರಡು ಭಾಗಗಳಾಗಿ ಪ್ರಸಾರವಾಗಿದೆ. ಇನ್ನು ಫಿನಾಲೆ ವಾರದಲ್ಲಿ ಮನೆಯಲ್ಲಿ ಉಳಿದುಕೊಳ್ಳುವ ಮೂಲಕ ಅರವಿಂದ್, ಪ್ರಶಾಂತ್ ಸಂಬರ್ಗಿ, ಮಂಜು ಪಾವಗಡ, ದಿವ್ಯ ಉರುಡಗ ಮತ್ತು ವೈಷ್ಣವಿ ಗೌಡ ಸೀಸನ್ ಎಂಟರ ಟಾಪ್ ಐದು ಜನ ಸ್ಪರ್ಧಿಗಳಾಗಿ ಹೊರಹೊಮ್ಮಿದ್ದಾರೆ. ಕೊನೆಯ ವಾರದಲ್ಲಿ, ಇನ್ನು ಉಳಿದಿರುವ ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಮನೆಯಲ್ಲಿರುವ ಸದಸ್ಯರಿಗೆ ಅವರ ನೆಚ್ಚಿನ ದೇವರ ಕುರಿತಾಗಿ ಮಾತನಾಡುವ ಅವಕಾಶವನ್ನು ಕಲ್ಪಿಸಿದ್ದಾರೆ ಬಿಗ್ ಬಾಸ್.

ನೆಚ್ಚಿನ ದೇವರ ಕುರಿತಾಗಿ ಮಾತನಾಡುವ ಅವಕಾಶವನ್ನು ಪಡೆದುಕೊಂಡ ಮನೆಯ ಸದಸ್ಯರು ಒಬ್ಬೊಬ್ಬರೂ ಸಹಾ ಎದ್ದು ಬಂದು ತಮ್ಮ ನೆಚ್ಚಿನ ದೇವರನ್ನು ಕುರಿತಾಗಿ ಮಾತನಾಡಿ, ತಮ್ಮ ಅನುಭವಗಳನ್ನು ಅವರು ಹಂಚಿಕೊಂಡಿದ್ದಾರೆ. ಈ ವೇಳೆಯಲ್ಲಿ ತನ್ನ ನೆಚ್ಚಿನ ದೇವರ ಬಗ್ಗೆ ಮಾತನಾಡಿದ ವೈಷ್ಣವಿ ಗೌಡ ಅವರು, ತಾವು ಬಹಳ ಮೆಚ್ಚುವ ದೇವರು ದುರ್ಗಾದೇವಿ ಎಂದು ಹೇಳಿದ್ದಾರೆ. ಅವರು ತಾನು ಶುಕ್ರವಾರಗಳಂದು ಬಹಳ ನಿಷ್ಠೆಯಿಂದ ದೇವಿಯ ಆರಾಧನೆ ಮಾಡುತ್ತೇನೆಂದು ಹಾಗೂ ಆ ದಿನಗಳಂದು ತಾನು ಉಪವಾಸ ಇರುತ್ತೇನೆ ಎಂದು ಹೇಳಿದ್ದಾರೆ.‌ ವೈಷ್ಣವಿ ಅವರ ನಂತರ ದೇವರ ಬಗ್ಗೆ ಮಾತನಾಡಲು ಬಂದವರು ಅರವಿಂದ ಕೆ ಪಿ.

ಅರವಿಂದ್ ಅವರು ಮಾತನಾಡುತ್ತಾ, ತಮ್ಮ ಮನೆಯಲ್ಲಿ ಅವರ ಅಮ್ಮ ಹಾಗೂ ಸಹೋದರಿಯರು ಯಾವಾಗಲೂ ಕೂಡಾ, ಇವನು ಸ್ಪೋರ್ಟ್ಸ್ ಗೆ ಹೋದಾಗ ಅವನ ಬೈಕಿನ ಹಿಂದೆ ಸೀಟಿನಲ್ಲಿ ಆ ದೇವರೇ ಕುಳಿತು ಕಾಪಾಡುತ್ತಾನೆ ಎಂದು ಹೇಳ್ತಾರೆ. ಯಾಕೆಂದ್ರೆ ಬೈಕ್ ರೇಸ್ ಡೇಂಜರಸ್ ಸ್ಪೋರ್ಟ್ಸ್, ಆದ್ದರಿಂದಲೇ ದೇವರ ಅನುಗ್ರಹ ಸ್ವಲ್ಪ ಹೆಚ್ಚೇ ಇದೆ ಎಂದು ಹೇಳಿದ್ದಾರೆ. ಪ್ರಶಾಂತ್ ಸಂಬರ್ಗಿ ಅವರು, ತಮ್ಮ ಚಿಕ್ಕವಯಸ್ಸಿನಲ್ಲಿ ಅಂತಹ ದು ರ್ಘ ಟನೆಗಳನ್ನು ಕಂಡು ಎಂದು ತಮಗಾಗಿದ್ದ ಕಾರ್ ಆ್ಯಕ್ಸಿಡೆಂಟ್ ಬಗ್ಗೆ ಹೇಳುತ್ತಾ, ಆಗ ನಮ್ಮ ತಾಯಿ ಮೊರೆ ಹೋಗಿದ್ದು ನಮ್ಮ ಮನೆ ದೇವರಾದ ಎಲ್ಲಮ್ಮ ದೇವಿಗೆ ಎಂದು ಹೇಳಿದ್ದಾರೆ.

ಅವರ ನಂತರ ಮಾತನಾಡಿದ ದಿವ್ಯ ಉರುಡಗ ಅವರು ನನಗೆ ಕೆಲಸ ಅಂದ್ರೆ ದೇವರು ಎಂಬುದಾಗಿ ಹೇಳುತ್ತಾ, ನಾನು ಅದನ್ನು ಬಹಳ ಶ್ರದ್ಧೆಯಿಂದ ಮಾಡುತ್ತೇನೆ ಎಂದು ಹೇಳಿದ್ದಾರೆ. ಈ ನಾಲ್ಕು ಜನರ ನಂತರ ಮಂಜು ಪಾವಗಡ ಅವರು ಮಾತನಾಡುತ್ತಾ ಅವರು ತಮ್ಮ ನೆಚ್ಚಿನ ದೇವರು ಯಾರು ಎಂಬ ಮಾತನ್ನು ಹೇಳುತ್ತಾರೆ. ಮಂಜು, ನಾನು ಬಹಳ ಇಷ್ಟಪಡುವ ದೇವರು ಧರ್ಮಸ್ಥಳ ಮಂಜುನಾಥ ಸ್ವಾಮಿ ಎಂದಿದ್ದಾರೆ. ಚಿಕ್ಕವಯಸ್ಸಿನಲ್ಲಿ ಹೆಸರಿಡಬೇಕೆಂದು ಕಡಲೆ ಸಕ್ಕರೆ ಇಟ್ಟು ನಮ್ಮಪ್ಪ ಹೊರಗಡೆ ಹೋದಾಗ ಅದು ಕಳ್ಳತನ ಆಗಿತ್ತು. ನನಗೆ ಬೇರೆ ಹುಷಾರು ಇರಲಿಲ್ಲ, ಆಗ ಹೇಗೂ ಧರ್ಮಸ್ಥಳಕ್ಕೆ ಬಂದು ಬಿಟ್ಟಿದ್ದೀವಿ ಎಂದು ಧರ್ಮಸ್ಥಳದ ತೀರ್ಥ ಪ್ರಸಾದ ನೀಡಿದಾಗ ನನ್ನಲ್ಲಿ ಚೇತರಿಕೆ ಕಂಡುಬಂದಿತ್ತು ಎನ್ನುವ ಮಾತನ್ನು ಹೇಳಿದ್ದಾರೆ.

ಹೀಗೆ ಬಿಗ್ ಬಾಸ್ ಮನೆಯಲ್ಲಿರುವ ಐದು ಜನ ಸದಸ್ಯರು ತಮ್ಮ ಜೀವನದಲ್ಲಿ ದೇವರ ಕುರಿತಾದ ಅನುಭವಗಳು ಹಾಗೂ ದೇವರ ಮೇಲೆ ತಮಗಿರುವ ನಂಬಿಕೆಯ ವಿಚಾರಗಳನ್ನು ಹಂಚಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ವಾಹಿನಿ ಮನೆಯ ಸದಸ್ಯರು ದೇವರ ಬಗ್ಗೆ ಮಾತನಾಡುವ ಪ್ರೋಮೋವನ್ನು ಬಿಡುಗಡೆ ಮಾಡಿದ್ದು, ದೇವರ ಕುರಿತಾಗಿ ಯಾರೆಲ್ಲಾ ಏನೆಲ್ಲಾ ವಿಚಾರಗಳನ್ನು ಹಂಚಿಕೊಂಡರು ಅನ್ನೋದನ್ನು ಸಂಪೂರ್ಣವಾಗಿ ತಿಳಿಯೋದಕ್ಕೆ ಖಂಡಿತ ಇಂದಿನ ಎಪಿಸೋಡ್ ಅನ್ನು ತಪ್ಪದೆ ನೋಡಬೇಕಾಗಿದೆ.

Leave a Comment