ದೆಹಲಿಯ ವಿಧಾನಸಭೆಯಲ್ಲಿ ಪತ್ತೆಯಾಯ್ತು ಒಂದು ರಹಸ್ಯ ಸುರಂಗ ಮಾರ್ಗ: ಅದರ ಹಿಂದೆ ಇದೆ ರೋಚಕ ಇತಿಹಾಸ

Written by Soma Shekar

Published on:

---Join Our Channel---

ದೆಹಲಿ ವಿಧಾನಸಭೆಯಲ್ಲಿ ನಿನ್ನೆ ನಡೆದ ಘಟನೆಯೊಂದು ಎಲ್ಲರ ಗಮನವನ್ನು ಸೆಳೆಯುತ್ತಿದೆ, ಮಾಧ್ಯಮಗಳಲ್ಲಿ ಈಗಾಗಲೇ ಈ ವಿಷಯ ಸುದ್ದಿಯಾಗಿ ಕುತೂಹಲವನ್ನು ಕೆರಳಿಸಿದೆ. ಹೌದು ನಿನ್ನೆ ಗುರುವಾರ ದೆಹಲಿಯ ವಿಧಾನಸಭೆಯಲ್ಲಿ ಒಂದು ರಹಸ್ಯ ಸುರಂಗ ಮಾರ್ಗ ಪತ್ತೆಯಾಗಿದೆ. ದೆಹಲಿ ವಿಧಾನಸಭೆಯ ಸ್ಪೀಕರ್ ಆದಂತಹ ರಾಮ್ ನಿವಾಸ್ ಗೋಯಲ್ ಅವರು ಈ ಸುರಂಗದ ವಿಷಯವಾಗಿ ಮಾತನಾಡುತ್ತಾ, ಈ ರಹಸ್ಯ ಸುರಂಗ ಕೆಂಪು ಕೋಟೆಯನ್ನು ಸಂಪರ್ಕಿಸುತ್ತದೆ ಎಂದು ಹೇಳಿದ್ದಾರೆ. ಈ ಸುರಂಗದ ಕುರಿತಾದ ಇತಿಹಾಸವು ಸ್ಪಷ್ಟವಾಗಿಲ್ಲವಾದರೂ, ಬ್ರಿಟಿಷ್ ಆಡಳಿತದ ಕಾಲದಲ್ಲಿ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಥಳಾಂತರ ಮಾಡುವಾಗ ಜನರ ಪ್ರತಿಭಟನೆಯನ್ನು ತಪ್ಪಿಸಲು ಈ ರಹಸ್ಯ ಮಾರ್ಗವನ್ನು ಬಳಸಿಕೊಳ್ಳಲಾಗುತ್ತಿತ್ತು ಎಂದು ಹೇಳಿದ್ದಾರೆ.

ಗೋಯಲ್ ಅವರು ಮಾತನಾಡುತ್ತಾ ನಾನು 1993 ರಲ್ಲಿ ಶಾಸಕನಾದಾಗ ವಿಧಾನಸಭೆಯಿಂದ ಕೆಂಪುಕೋಟೆಗೆ ಹೋಗುವ ರಹಸ್ಯ ಸುರಂಗ ಮಾರ್ಗದ ಕುರಿತಾಗಿ ವದಂತಿಗಳನ್ನು ಕೇಳಿದ್ದೆ. ನಾನು ಅದರ ಬಗ್ಗೆ ಪ್ರಯತ್ನಿಸಿದಾಗ ಅದರ ಸ್ಪಷ್ಟವಾದ ಇತಿಹಾಸವು ತಿಳಿಯಲಿಲ್ಲ. ಅಲ್ಲದೇ ಮೆಟ್ರೋ ಯೋಜನೆಗಳಿಂದಾಗಿ ಹಾಗೂ ಒಳಚರಂಡಿ ಗಳ ನಿರ್ಮಾಣದಿಂದ ಎಲ್ಲಾ ಸುರಂಗ ಮಾರ್ಗಗಳು ಹಾಳಾಗಿದೆ. ಶೀಘ್ರದಲ್ಲೇ ನಾವು ಇದನ್ನು ಮರು ರೂಪಿಸುತ್ತೇವೆ ಹಾಗೂ ಸಾರ್ವಜನಿಕರಿಗೆ ನೋಡಲು ಅವಕಾಶ ಸಿಗುವಂತೆ ಮಾಡುತ್ತೇವೆ ಎಂದು ಹೇಳಿರುವ ಅವರು, ಜೀರ್ಣೋದ್ಧಾರ ಕಾರ್ಯವು ಮುಂಬರುವ ಆಗಸ್ಟ್ 15ರ ಒಳಗೆ ಮುಗಿಯುವ ನಿರೀಕ್ಷೆಯಿದೆ ಎಂದೂ, ಆನಂತರ ಅದು ಸಾರ್ವಜನಿಕ ವೀಕ್ಷಣೆಗೆ ಲಭ್ಯವಾಗುತ್ತದೆ ಎಂದಿದ್ದಾರೆ.

ಬ್ರಿಟಿಷರ ಆಳ್ವಿಕೆಯಲ್ಲಿ ಕೆಂಪು ಕೋಟೆಯೊಳಗೆ ನೇಣು ಹಾಕುವ ಸ್ಥಳವೊಂದನ್ನು ನಿರ್ಮಾಣ ಮಾಡಲಾಗಿತ್ತು. ಸ್ವಾತಂತ್ರ್ಯ ಹೋರಾಟಗಾರರಿಗೆ ಇಲ್ಲೇ ಗ ಲ್ಲು ಶಿ ಕ್ಷೆ ಯನ್ನು ಜಾರಿಗೊಳಿಸಲಾಗುತ್ತಿತ್ತು. ಆದ್ದರಿಂದಲೇ ಸ್ವಾತಂತ್ರ್ಯ ಹೋರಾಟಗಾರರನ್ನು ಕೆಂಪುಕೋಟೆಗೆ ಕರೆದುಕೊಂಡು ಹೋಗುವಾಗ ಜನರ ಪ್ರತಿಭಟನೆಯನ್ನು ತಪ್ಪಿಸಲು ಇಂತಹದೊಂದು ರಹಸ್ಯ ಸುರಂಗ ಮಾರ್ಗವನ್ನು ನಿರ್ಮಾಣ ಮಾಡಲಾಗಿತ್ತು. ಬ್ರಿಟಿಷರು ಭಾರತವನ್ನು ಬಿಟ್ಟು ಹೋಗಿ ಬಹಳಷ್ಟು ವರ್ಷಗಳಾದರೂ ಇಲ್ಲ ಆಲೋಚನೆಗಳು ಹೇಗಿದ್ದವು ಎನ್ನುವುದನ್ನು ತೋರಿಸುವ ಒಂದೊಂದೇ ವಿಚಾರಗಳು ಹೊರಗೆ ಬರುತ್ತಿವೆ.

Leave a Comment